ಸೂರ್ಯ
ಸೂರ್ಯ ಒಬ್ಬ ನಟನಾಗಿ, ನಿರ್ಮಾಪಕನಾಗಿ, ಕಿರುತೆರೆ ಕಾರ್ಯಕ್ರಮ ನಿರ್ವಾಹಕನಾಗಿ ಮತ್ತು ಅಪಾರ ಸತ್ಕಾರ್ಯಗಳಿಂದ ಪ್ರಕಾಶಿಸುತ್ತಿರುವ ವ್ಯಕ್ತಿ.
ಸೂರ್ಯ ಅವರ ಹೆಸರು ಶರವಣನ್ ಶಿವಕುಮಾರ್. ಜನಿಸಿದ್ದು 1975ರ ಜುಲೈ 23ರಂದು. ತಂದೆ ತಮಿಳು ಚಿತ್ರರಂಗದ ಮಹಾನ್ ಕಲಾವಿದರಾಗಿ ಮತ್ತು ಸದ್ಗುಣಗಳಿಂದ ಹೆಸರಾದ ಶಿವಕುಮಾರ್. ತಾಯಿ ಲಕ್ಷ್ಮಿ. ಸೂರ್ಯ ಅವರ ಪತ್ನಿ ಜ್ಯೋತಿಕಾ ಅವರು ಕೂಡಾ ಪ್ರಸಿದ್ಧ ನಟಿ. ಸಹೋದರ ಕಾರ್ತಿ ನಟ. ಸಹೋದರಿ ಬೃಂದಾ ಗಾಯಕಿ.
ಸೂರ್ಯ ಅವರು ಚಿತ್ರರಂಗದಲ್ಲಿ ಎರಡು ರಾಷ್ಟ್ರೀಯ ಪ್ರಶಸ್ತಿ, 7 ಫಿಲಂಫೇರ್ ಮತ್ತು 10 ತಮಿಳು ನಾಡು ರಾಜ್ಯದ ಚಲನಚಿತ್ರ ಪ್ರಶಸ್ತಿ ಗಳಿಸಿದವರು. ಸುಮಾರು 50 ಚಿತ್ರಗಳಲ್ಲಿ ನಟಿಸಿರುವ ಇವರು ಕಿರುತೆರೆ ಮತ್ತು ಸಿನಿಮಾ ನಿರ್ಮಾಣದಲ್ಲೂ ಇದ್ದಾರೆ. ತಮಿಳಿನ ಕೋಟ್ಯಾಧಿಪತಿ ಅಂತಹ ಕಾರ್ಯನಿರ್ವಹಣೆಗೂ ಹೆಸರುವಾಸಿ.
ಸೂರ್ಯ 1997ರಲ್ಲಿ ನೆರುಕ್ಕು ನೇರ್ ಚಿತ್ರದ ಮೂಲಕ ಬಂದರು. ನಂತರದಲ್ಲಿ ಕಾಖಾ ಕಾಖಾ, ಪಿತಾಮಹನ್, ನಂದಾ, ಪೆರಜಾಗನ್ (ಗಜನಿ ಚಿತ್ರದ ಮೂಲಚಿತ್ರ), ಗೌತಮ್, ವಾರಣಮ್ ಆಯಿರಂ, ಅಯ್ಯನ್, ಸಿಂಗಂ (ಮೂರು ಚಿತ್ರಗಳ ಸರಣಿ), ಓಮ್ ಅರಿವು, 24, ಸೂರಾರು ಪೊಟ್ಟ್ರು, ಜೈ ಭೀಮ್ ಮುಂತಾದ ಅವರ ಚಿತ್ರಗಳು ಅಪಾರ ಯಶಸ್ಸು ಗಳಿಸಿ ಇತರ ಹಲವಾರು ಭಾಷೆಗಳಲ್ಲಿ ರೀಮೇಕ್ ಆಗಿಯೂ ಪ್ರಸಿದ್ಧವಾಗಿವೆ.
ಸೂರ್ಯ ಅವರು ಒಬ್ಬ ಹೃದಯವಂತನಾಗಿ ಏರಿರುವ ಮಟ್ಟವಂತೂ ಅಸಾಮಾನ್ಯವಾದುದು. ಅವರು ಅಗರಮ್ ಫೌಂಡೇಷನ್ ಎಂಬ ಸಾಮಾಜಿಕ ಸದುದ್ದೇಶವುಳ್ಳ ಸಂಸ್ಥೆ ಸ್ಥಾಪಿಸಿ ದೀನ ದಲಿತ ಅಸಹಾಯಕರ ಸೇವೆಗೆ ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿನ ಏಳ್ಗೆಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ. 8000ಕ್ಕೂ ಗ್ರಾಮೀಣ ಪ್ರದೇಶದಿಂದ ಬಡವಿದ್ಯಾರ್ಥಿಗಳಿಗೆ ಅಂತಹ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡಿದ್ದಾರೆ. ಹಲವು ಸಹಸ್ರ ವೈದ್ಯರು, ಇಂಜಿನಿಯರುಗಳು ರೂಪುಗೊಳ್ಳಲು ಸಹಾಯ ಮಾಡಿದ್ದಾರೆ. ಬಡಜನರ ಆತ್ಮವಿಶ್ವಾಸ ಗಳಿಸಿ ಸಮಾಜದಲ್ಲಿ ಮೇಲೇರಲು ತಮ್ಮ ಕುಟುಂಬದೊಡನೆ ವೈಯಕ್ತಿಕ ಶ್ರದ್ಧೆ ಮತ್ತು ತನ್ಮಯತೆಗಳಿಂದ ಪಾಲ್ಗೊಳ್ಳುತ್ತಿದ್ದಾರೆ. ಅನೇಕ ಆರೋಗ್ಯಪರ ಕಾರ್ಯಕ್ರಮಗಳು, ವನ್ಯಜೀವಿ ಸಂರಕ್ಷಣೆಗಳಲ್ಲೂ ಸಕ್ರಿಯರಾಗಿದ್ದಾರೆ.
On the birthday of actor and Great philanthropist Suriya 🌷🌷🌷

ಕಾಮೆಂಟ್‌ಗಳು