ಎಲ್ ಸಿ ನಾಗರಾಜ್
ಪ್ರಜ್ಞಾವಂತ ಬರಹಗಾರರಾಗಿದ್ದ, ನೈಸರ್ಗಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಚಿಂತನಾಪರರಾಗಿದ್ದ ಎಲ್ ಸಿ ನಾಗರಾಜ್ ಅವರು ನಿಧನರಾಗಿದ್ದಾರೆ.
ಇನ್ನೂ 59ರ ವಯಸ್ಸಿನಲ್ಲಿದ್ದ ನಾಗರಾಜರ ನಿಧನ ದುರದೃಷ್ಟಕರ. ತಾಂತ್ರಿಕ ಪದವಿ ಪಡೆದಿದ್ದ ಇವರು ಪರಿಸರ ಪ್ರಿಯರಾಗಿ, ಕೈಗಾವಿರೋಧಿ ಚಳವಳಿ, ರೈತ ಹೋರಾಟ ಹಾಗೂ ಸಾಹಿತ್ಯದ ಚರ್ಚೆಗಳಲ್ಲಿ ಸಕ್ರಿಯರಾಗಿದ್ದರು. ನಿನ್ನೆ ಮೊನ್ನೆಯವರೆಗೂ fbಯಲ್ಲಿ ಸಮಪ್ರಜ್ಞೆಯಲ್ಲಿ ಬರೆದಿದ್ದವರು ಇಂದಿಲ್ಲದಿರುವುದು ವಿಷಾದನೀಯ.
ಸದಾ ಶೀತವಲಯದಲ್ಲಿರುವ ಐರೋಪ್ಯ ರಾಷ್ಟ್ರಗಳು ಇತ್ತೀಚೆಗೆ 49 ಡಿಗ್ರಿ ವರೆಗಿನ ತಾಪಮಾನಕ್ಕೆ ಸಿಲುಕಿದ್ದು, ಕರ್ನಾಟಕವನ್ನು ಸೇರಿದಂತೆ ಭಾರತ ದೇಶ ಉಷ್ಣತೆ ಕಡಿಮೆ ಮಾಡಿಕೊಳ್ಳಲು ಯಾವುದೇ ಕ್ರಮ ಚಿಂತಿಸದೆ ಸಾಗುತ್ತಿರುವುದು, ತಮ್ಮ ಭೂಮಿ ಕಿತ್ತುಕೊಂಡು ನಗರ ವೈಭವಕ್ಕೆ ಸೇರಿಸುತ್ತೇವೆ ಎಂಬ ಭ್ರಮೆಯಿಂದ ಬಂದವರಿಗೆ ಪೊರಕೆ ಕೋಲು ತೋರಿದವರಿಗೆ ಪ್ರಾಣ ಬೆದರಿಕೆ ಹಾಕಿದರು ಎಂಬ FIR ಸೃಷ್ಟಿ ಮಾಡಿದ್ದು, ಪ್ರಸಕ್ತ ವಿದ್ಯಾರ್ಥಿಗಳ ಹೋರಾಟದಲ್ಲಿರುವವರ ನಡೆ-ನುಡಿಗಳಲ್ಲಿ ಒಪ್ಪಬಹುದಾದದ್ದು - ಒಪ್ಪಲಾಗದ್ದು ಹೀಗೆ ಅವರ ಬರಹಗಳು ಮನಮುಟ್ಟುವಂತದ್ದು. ಅವರು ಅನುವಾದಕರಾಗಿಯೂ ಸಾಹಿತ್ಯಲೋಕಕ್ಕೆ ಮಹತ್ವದ ಕೊಡುಗೆ ಕೊಟ್ಟವರು. ಅವರ 'ಗೊಲ್ಲ ಗೋಕುಲ ಜನತೆಯ ನಡತೆ' ಎಂಬ ಕಥೆ, 'ಭೂಮಿಗೀತ' ಎಂಬ ಚಲನಚಿತ್ರವಾಗಿ ಪರಿಸರ ಕಾಳಜಿಗಿನ ರಾಷ್ಟ್ರೀಯ ಚಚಲನಚಿತ್ರ ಪ್ರಶಸ್ತಿಗೆ ಪಾತ್ರವಾಗಿತ್ತು.
ಅಗಲಿದ ಚೇತನಕ್ಕೆ ನಮಿಸುತ್ತ ಅವರ ಕುಟುಂಬಕ್ಕೆ ಈ ಅಗಲಿಕೆಯನ್ನು ಸಹಿಸುವ ಶಕ್ತಿ ಆಶಿಸುವೆ 🌷🙏🌷

ಕಾಮೆಂಟ್‌ಗಳು