ರತನ್ ಥಿಯಮ್
ಮಣಿಪುರದವರಾದ ಖ್ಯಾತ ರತನ್ ಥಿಯಮ್ ವಿಶ್ವಖ್ತಾತಿಯ ಮಹಾನ್ ರಂಗಕರ್ಮಿಯಾಗಿದ್ದರು.
ರಥನ್ ಥಿಯಮ್ ಅವರು 1948ರ ಜನವರಿ 20ರಂದು ಜನಿಸಿದರು. ಥಿಯಮ್ ಅವರು 1976 ರಲ್ಲಿ ತಮ್ಮ ಕೋರಸ್ ರೆಪರ್ಟರಿ ಥಿಯೇಟರ್ ಗುಂಪನ್ನು ಸ್ಥಾಪಿಸಿದರು.
ಅವರು ಬಿ.ವಿ. ಕಾರಂತ್ ಮತ್ತು ಕೆ.ಎನ್. ಪಣಿಕ್ಕರ್ ಅವರಂತಹ ಮಹಾನ್ ರಂಗಕರ್ಮಿಗಳೊಂದಿಗೆ, ಥಿಯೇಟರ್ ಫಾರ್ ರೂಟ್ಸ್‌ನ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದವರು. ಇದು ಸ್ವಾತಂತ್ರ್ಯಾನಂತರದ ರಂಗಭೂಮಿ ಚಳವಳಿಯಾಗಿದ್ದು, ಇದರಲ್ಲಿ ವೃತ್ತಿಗಾರರು ವಸಾಹತುಶಾಹಿ ನಿರ್ಮೂಲನದ ಪ್ರಕ್ರಿಯೆಯಾಗಿ, ಸಾಂಪ್ರದಾಯಿಕ ಮತ್ತು ಸ್ಥಳೀಯ ಪದ್ಧತಿಗಳನ್ನು ಅಳವಡಿಸಿಕೊಂಡ ಆಂದೋಲನವಾಗಿದೆ.
ಥಿಯಮ್ ಅವರ ನಾಟಕಗಳು ಮಣಿಪುರ ಮತ್ತು ಭಾರತದ ಇತರ ಭಾಗಗಳ ಮಹಾಕಾವ್ಯಗಳು, ನೃತ್ಯಗಳು ಮತ್ತು ಚಳವಳಿಗಳ ಪ್ರಕಾರಗಳಿಂದ ಮೂಡಿಬಂದವು. ಪರಿಸರ ಬಿಕ್ಕಟ್ಟಿನಿಂದ ಹಿಡಿದು ಮಣಿಪುರದ ಸಾಮಾಜಿಕ-ರಾಜಕೀಯದವರೆಗೆ ಅವರ ನಾಟಕದ ವಿಷಯಗಳು ವೈವಿಧ್ಯಮಯವಾಗಿದ್ದವು. ಅವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿಯೂ ಸಹ ಪ್ರದರ್ಶಿತಗೊಂಡವು.
ರತನ್ ಥಿಯಮ್ ಅವರಿಗೆ 1987 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸಂದಿತ್ತು. ಮಣಿಪುರದ ಮೊದಲ ರಾಷ್ಟ್ರೀಯ ನಾಟಕ ಶಾಲೆಯಿಂದ ಪದವೀಧರರಾದ ಥಿಯಾಮ್ ನಂತರ 1987 ರಿಂದ 1988 ರವರೆಗೆ ಅದರ ನಿರ್ದೇಶಕರಾಗಿ ಮತ್ತು ನಂತರ 2013 ರಿಂದ 2017 ರವರೆಗೆ ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರು ಸಂಗೀತ ನಾಟಕ ಅಕಾಡೆಮಿಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅವರಿಗೆ ಪದ್ಮಶ್ರೀ ಗೌರವ, ಸಂಗೀತ ನಾಟಕ ಅಕಾಡೆಮಿ ಫೆಲೋಷಿಪ್ ಹಾಗೂ ಅಸ್ಸಾಂ ವಿಶ್ವವಿದ್ಯಾಲಯದ ಡಿ.ಲಿಟ್ಗೌ ರವಗಳು ಸಂದಿದ್ದವು.
ರತನ್ ಥಿಯಮ್ ಅವರು 2025ರ ಜುಲೈ 23ರಂದು ನಿಧನರಾದರು.
Ratan Thiyam

ಕಾಮೆಂಟ್‌ಗಳು