ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜೈಮಿನಿ ಭಾರತ ಭಾಗ ೨


 ಜೈಮಿನಿ ಭಾರತ 44

ಇಪ್ಪತ್ತಮೂರನೆಯ ಸಂಧಿ ಮೊದಲಭಾಗ

ಪದ್ಯ 1 ರಿಂದ 32

ವೃಷಕೇತುವಿನ ಮರಣ

ನಿರೂಪಣೆ: ಸುಬ್ಬುಲಕ್ಷ್ಮಿ


ಸಂಕ್ಷಿಪ್ತ ರೂಪ


ಬಭ್ರುವಾಹನನ ಸೈನ್ಯವು ಹಂಸಧ್ವಜನ ಮತ್ತು ಪ್ರದ್ಯುಮ್ನನ ಸೈನ್ಯಗಳನ್ನು ಮುಕ್ಕಾಗಿಸಿ ಅವರು ಎಚ್ಚರತಪ್ಪಿ ಮಲಗಲು ಸುವೇಗನು ಬಂದು ಕಾದಲು ಅವನನ್ನೂ ಬೀಳಿಸಿದನು ಪಾರ್ಥಿ.


ಇತ್ತ ಹಿಂದೆ ಅರ್ಜುನನು ತೀರ್ಥಯಾತ್ರೆಯ ಸಮಯದಲ್ಲಿ ನಾಗಲೋಕಕ್ಕೆ ತೆರಳಿ ಅಲ್ಲಿ ಉಲುಪಿಯನ್ನು ಕೂಡಿದ್ದನು. ಈಗ ಅವಳು ಮ ಣಿಪುರಕ್ಕೆ ಬಂದು ರಣದಲ್ಲಿ ಬಿದ್ದಿದ್ದ ದೊರೆಗಳನ್ನು ಅರಮನೆಗೆ ತರಿಸಿ ಉಪಚರಿಸಿದಳು. ಮಣಿ ಮಂತ್ರಗಳಿಂದ ಅವರನ್ನು ಎಚ್ಚರಿಸಿದಳು.


ಅರ್ಜುನನು ಕರ್ಣನ ಸುತ ವೃಷಕೇತುವಿಗೆ ಹೇಳಿದನು. ತನ್ನ ಪಡೆ ಹೀಗಾಯಿತು. ನೀನು ಈಗಲೇ ಹಸ್ತಿನಾಪುರಕ್ಕೆ ಹೋಗಿ ಧರ್ಮಜನಿಗೆ ತಿಳಿಸು ಎನ್ನುವ ವೇಳೆಗೆ ಹದ್ದು ಬಂದು ಅವನ ಮುಕುಟದ ಮೇಲೆ ಕುಳಿತಿತು. ಅಪಶಕುನಗಳಾದವು. ಇನ್ನಷ್ಟು ಚಿಂತೆಯಾಯಿತು. ಅಲ್ಲಿ ಯಜ್ಞಕ್ಕೆ ಎಲ್ಲವೂ ಸಿದ್ಧವಾಗಿರುವಾಗ ಇಲ್ಲಿ ಹೀಗಾಗಿದೆಯಲ್ಲ.ಇನ್ನು ಹೇಳಲೇನಿದೆ? ನಾನು ಇವನೊಡನೆ ಕಾಳಗ ಮಾಡುತ್ತೇನೆ. ನಮಗೆ ಉಳಿದಿರುವವನು ನೀನೊಬ್ಬನೇ ಮಗ. ನೀನು ಹಿಂದಿರುಗು ಎನ್ನಲು ಕೋಪಗೊಂಡ ಕರ್ಣಜ ಅ ರ್ಜುನನಿಗೆ ನಿನ್ನನ್ನು ಬಿಟ್ಟು ನಾನು ಹೋಗುವುದೆ?  ನಾನಿರುವಾಗ ಏಕೆ ಚಿಂತೆ?ತಂದೆಗೋಸ್ಕರ, ಗೋವಿಗೋಸ್ಕರ, ರಾಜ್ಯದ ರಕ್ಷಣೆಗೋಸ್ಕರ ಕಾದದಿದ್ದರೆ ಕರ್ಣನ ಮಗನೆನ್ನುವರೆ ನನನ್ನು? ಎಂದೆಲ್ಲ ಹೇಳಿ ಅರ್ಜುನನನ್ನು ಒಪ್ಪಿಸಿದನು. ಹೊರಟನು.


ನೀನು ಬಂದುದು ಒಳ್ಳಿತಾಯಿತು ಎಂದು ಬಭ್ರುವಾಹನ ಯುದ್ಧಕ್ಕೆ ಮೊದಲಿಟ್ಟನು. ಅಂಬುಗಳ ಮಳೆ ಸುರಿಯಿತು. ಇಬ್ಬರ ಮೈಯಲ್ಲೂ ಗಾಯಗಳಾದವು. ರಥ, ಹಯ, ಸಾರಥಿಗಳನ್ನು ತರಿದರು. ಮೈಮರೆತು ಮಲಗಿ ಚೇತರಿಸಿಕೊಂಡೆದ್ದು ಕಾದಿದರು. ಹಿಂದೆ ಕರ್ಣಾರ್ಜುನರಿಗೆ ಯುದ್ಧವಾದ ರೀತಿಯಲ್ಲಿಯೇ ಇದು ನಡೆಯಿತು. ಒಬ್ಬರಿಗೊಬ್ಬರು ಬಿವಿಧ ದಿವ್ಯಾಸ್ತ್ರಗಳನ್ನು ಪ್ರಯೋಗಿಸಿದರು. ಕತ್ತರಿಸಿದರು. ತಡೆದರು. ಒಮ್ಮೆ ವೃಷಕೇತುವಿನ ರಥ ಬಾನಿಗಡರಿ ತಿರ್ರನೆ ತಿರುಗಿತು. ಇವನೂ ಪಾರ್ಥಿಯನ್ನು ನಭಕ್ಕೆ ಎತ್ತಿಕೊಂಡು ಹೋಗಿ ಅವನ ರಥವನ್ನೂ ತಿರುಗಿಸಿದನು. ಅವನು ರವಿಗೆ ನಮಿಸಿ ಮಣಿಪುರದ ಭೂಮಿಯಲ್ಲಿ ಬಿದ್ದನು. 


ಅರ್ಜುನನು ನೋಡುತ್ತಿರಲು ಚಿತ್ರಾಂಗನೆಯ ಪುತ್ರನನ್ನು ಕರ್ಣಜ ಮತ್ತೆ ನಭಕ್ಕೊಯ್ದನು. ಅಲ್ಲಿಂದ ಅತ್ಯುಗ್ರತೆಯಿಂದ ಹಿಂದೆ ಜಟಾಯುವು ಗರಿ ಕಿತ್ತು ಭುವಿಗೆ ಬಿದ್ದಂತೆ ಭೂಮಿಯಲ್ಲಿ ಬಿದ್ದನು. ಮತ್ತೆ ಎದ್ದು ವೃಷಕೇತುವಿನ ಕೂಡೆ ಬೊಬ್ಬಿರಿದನು.


ರಕ್ತದ ಹೊಳೆ ಹರಿಯಿತು. ರಥಗಳು ಮುರಿದವು.ನಭದಲ್ಲಿ, ಧರಣಿಯಲ್ಲಿ ಬಿಡದೆ ಕಾದಿದರು.


ವೃಷಕೇತುವನ್ನು ಪ್ರಶಂಸಿಸಿದ ಬಭ್ರುವಾಹನನು ಶ್ರೀ ಪತಿಯ ಸೇವೆಗೆ ಹೋಗು ಎನ್ನುತ್ತ ಅವನ ತಲೆಯನ್ನು ಕತ್ತರಿಸಿದನು.

 ಆ ಶಿರವು ಮುಕುಂದಾ, ಮಾಧವಾ, ಕೃಷ್ಣಾ ಎನ್ನುತ್ತ ಬಂದು ಅರ್ಜುನನ ಬಳಿ ಬಂದು ಬಿದ್ದಿತು. ಅದನ್ನೆತ್ತಿ ಅಪ್ಪಿಕೊಂಡು ಅರ್ಜುನನು ಅತ್ಯಂತ ಶೋಕಕ್ಕೆ ಒಳಗಾದನು. ಹೊಳೆಯುತ್ತಿದ್ದ ಕಂಗಳಿಂದ ನಸುನಗುತ್ತಿದ್ದ ಆ ಮೊಗವನ್ನು ಚುಂಬಿಸಿ ಗೋಳಿಟ್ಟನು. ಮಗನೆ, ನೀನೆಂತು ಮಡಿದೆ? ನಮಗೆ ಸದ್ಗತಿ ಕರುಣಿಸಲು ಉಳಿದಿದ್ದವನು ನೀನೊಬ್ಬನೇ. ಇದು ಕೃಷ್ಣನಿಗೆ ಸಮ್ಮತವೆ? ಎಂದೆಲ್ಲ ಹಲುಬಿದನು. ಅಭಿಮನ್ಯುವನ್ನು ಕಳೆದುಕೊಂಡ ನೋವನ್ನು ನಿನ್ನ ಕಂಡು ಸಹಿಸಿದ್ದೆ. ಈಗ ಏನು ಮಾಡಲಿ ಎಂದು ಅತ್ತನು.ಮೂಗು ಇಲ್ಲದ ಮುಖದಂತಾಯಿತು ಪಾಂಡವರ ಸಿರಿ ಎಂದು ನಾನಾ ರೀತಿಯಲ್ಲಿ ತೊಳಲಿದನು.


ಇತ್ತ ಕರ್ಣಜನ ಮುಂಡ ಬಂದು ಅಪ್ಪಳಿಸಲು ಬಭ್ರುವಾಹನನು  ಬಿದ್ದು ಮತ್ತೆ ಚೇತರಿಸಿಕೊಂಡೆದ್ದು  ಪಾರ್ಥನಿಗೆ ಹೇಳಿದನು. ಹಿಂದೆ ಶಿವನನ್ನು ಪೂಜಿಸಿ ಅಸ್ತ್ರವನ್ನು ಪಡೆದಿದ್ದಕ್ಕೆ ಇಂದು ಅವನ ರುಂಡಮಾಲೆಗೆ ಇವನನ್ನು ಕಳಿಸು ಎಂದನು.  ಅರ್ಜುನನು ಎಚ್ಚರಗೊಂಡು ಕುದುರೆಯನ್ನು ಬಿಡುವೆಯೋ, ಕಾದುವೆಯೋ ಎನ್ನುತ್ತ ಕಾಳಗಕ್ಕೆ ಎದ್ದನು. 


ಇಪ್ಪತ್ತುಮೂರನೆಯ ಸಂಧಿ ಮೊದಲ ಭಾಗ

ಪದ್ಯ 1 ರಿಂದ ‌ 32


ಸೂಚನೆ | ಅಹವ ಸಮರ್ಥ ಕರ್ಣಜನಂ ಕೆಡಹಿ ಬಭ್ರು | ವಾಹನಂ ಸುರನದಿಯ ಶಾಪದಿಂದರಿಯಲ್ಕೆ | ರಾಹು ತುಡುಕಿರ್ದಮೃತಕರ ಬಿಂಬದಂತಿರ್ದುದರ್ಜುನನ ತಲೆ ರಣದೊಳು |


ಜನಪ ಕೇಳರ್ಜುನನ ಸೈನ್ಯದೊಳ್ ಬಭ್ರುವಾ | ಹನನಖಿಳವೀರರಂ ಕೆಡಹಿ ಹಂಸಧ್ವಜನೊ | ಡನೆ ರಣದೊಳೆಚ್ಚಾಡಿ ಸ್ಯಂದನ ಸಹಸ್ರಮಂ ತಡೆಗಡಿದವನ ಪಡೆ ಯೊಳು || ತನಿಗಲಿಗಳಾರುಸಾವಿರಮಂ ಪೊರ ಳ್ಚಿ ವಾ | ಹಿನಿಯನೈದಕ್ಷೋಹಿಣಿಯನೊಕ್ಕಲಿಕ್ಕಿ ಮೇ | ದಿನಿಗವಂ ಮೈಮರೆದು ಬೀಳ್ವಂತೆ ಸೆಕ್ಕಿದಂ ಕಾಯದೊಳ್ ಸಾಯಕವನು||೧||


ಅಸದಳದೊಳವನ ಸುತರಿರ್ವರುಂ ಮಡಿದ ಬಳಿ |ಕಸುರಾರಿ ತನ್ನೊಳಾಡಿದ ಬಲೆ ಯಂ ನೆನೆದು | ದೆಸೆಗೆಟ್ಟು ಬಿದ್ದನಕಟೆಂದು ಹಂಸಧ್ವಜಂಗರ್ಜುನಂ ಮರುಗುತಿರಲು || ಮುಸುಕಿದಂ ಪಡೆಸಹಿತ ಬಂದು ಪಾರ್ಥಿಯ ರಥವ | ನಸಮ ಭುಜಬಲ ಸುವೇಗಂ ಬಳಿಕ ಸಂಗರಂ | ಪೊಸತಾದುದಿರ್ವ ರ್ಗೆ ಕೊಂದನರ್ಜುನಿ ಮತ್ತೆ ವೀರರಿರ್ಭಾಸಿರವನು ||೨||


ಸಾಹಸದೊಳಿರ್ವರುಂ ಸರಿಯೆನೆ ಸುವೇಗಂ ಮ | ಹಾಹವದೊಳೆಚ್ಚಾಡಿ ವಿರಥನಾಗಿಯೇ ಬಭ್ರು | ವಾಹನನ ಬಾಣದಿಂದುರೆ ನೊಂದು ಬಿದ್ದನವನಿಗೆ ಬಳಿಕ ಪಾರ್ಥಿ ನರನ || ಮೋಹರವನೈದಿದಂ ಪ್ರಳಯಭೈರವನ ಕೋ | ಲಾಹಲಮಿದೆಂಬಂತೆ ಕೊಂದನೆಲ್ಲಾ ಬಲವ | ದೇಹದೊಳೆಸೆವ ಜೀವ ಪರಮರವೊಲುಳಿದಿರ್ದರಾವೃಷಧ್ವಜ ಪಾರ್ಥರು||೩||


ರಣದೊಳಂತವರಿರ್ದರತ್ತ ಮುನ್ನೊಂದು ಕಾ | ರಣಕೆ ಗುರು ಶಾಪಮಂ ಕುಡಲದಂ ಬಿಡಿಸಿ ಫಲು | ಗುಣನಮಲ ತೀರ್ಥಯಾತ್ರಾಪ್ರಸಂಗದೊಳಂದು ತಾಂ ಪರಿಗ್ರಹಿಸಿ ನೆರೆದ || ಫಣಿರಾಜನಂದನೆಯುಲೂಪಿ ಪಾತಾಳದಿಂದೆ | ಮಣಿಪುರಕೆ ಬಂದು ಮೂರ್ಛಿತರಾಗಿ ಸಮರ ಧಾ | ರಿಣಿಯೊಳಿಹ ದೊರೆಗಳಂ ತರಿಸಿ ಮಂ ತ್ರೌಷಧಿಗಳಿಂದೆ ಪಾಲಿಸುತಿರ್ದಳು||೪||


ನೃಪ ಕೇಳುಲೂಪಿ ಚಿತ್ರಾಂಗದೆಗೆ ಪೇಳ್ದ ಸುರ | ರಿಪುಸುತಂ ತನ್ನ ತನಯಂಬೆರಸಿ ಪಾರ್ಥಜನ | ವಿಪುಲಾಸ್ತ್ರದಿಂದೆ ಮೂರ್ಛಿತನಾಗಿ ರಣದೊಳಿರಲಿರ್ವರಂ ತರಿಸಿಕೊಂಡು|| ಅಪಗತ ಶ್ರಮರಪ್ಪ ತೆರದಿಂದೆ ಮಂದಿರದೊ | ಳುಪಚರಿಸಿ ಮಣಿ ಮಂತ್ರ ಮೂಲಿಕಾತತಿಗಳಂ | ತಪಿಸದಂತಾರೈಯುತಿರ್ದಳರ್ಜುನನಿತ್ಯ ವೃಷಕೇತುಗಿಂತೆಂದನು ||೫||


ಮಗನೆ ಮಡಿದುದು ಸೈನ್ಯಮನುಸಾಲ್ಪಮುಖರಾದ | ವಿಗಡರೇರ್ವಡೆದು ಸೈಗೆಡೆದರಿಳೆಯೊಳ' ತಮ್ಮ | ನಗರಿಗನಿರುದ್ಧ ಪ್ರದ್ಯುಮ್ನ ರಂ ಕೊಂಡೊಯ್ದ ರಹಿತರಿವನಂ ಜಯಿಸುವ || ಬಗೆಗಾ ಣೆನಾದೊಡಂ ನಿಲ್ವೆ ನಾನಿಲ್ಲಿ ಕಾ | ಳಗಕೆ ನೀನಿರದೆ ಹಸ್ತಿನಪುರಿಗೆ ಪೋಗಿ ಪೇ | ಳ್ದಗಧರ ಯುಧಿಷ್ಠಿರರ್ಗೆ ಸ್ಥಿತಿಯನೆಂಬಿನಂ ತೋರ್ದುವುತ್ಸಾ ತಂಗಳು | ೬ ||


ಪರ್ದು ಕುಳಿರ್ದುದರ್ಜುನನ ಮಕುಟಾಗ್ರದೊಳ | ಡರ್ದು ಗೂಡಿಕ್ಕಿದುವು ರಥದೊಳ್ ಕಪೋತಂಗ | ಳಿರ್ದುದು ತನುಛಾಯೆ ತಲೆಯಿಲ್ಲದಿನಿತುಮಂ ಕಂಡು ಬೆರಗಾಗಿ ನರನು || ಪೊರ್ದದಿರದಪಜಯಂ ತನಗಿನ್ನು ಧರ್ಮಜಂ | ನಿರ್ದೈವನಹನಲಾ ಶಿವ ಮಹಾದೇವ ಮುರ | ಮರ್ದನ ತುರಗಮೇಧವನೆಂತು ಮಾಡಿದವನೂ ಕರ್ಣಸುತ ಹೇಳೆಂದನು || ೭ ||


ವಾಜಿ ಸಹಿತಾಂ ಪೋಗಿ ಸಕಲ ಪರಿಕರದಿಂದೆ | ತೇಜದಿಂದೊಪ್ಪುವಗ್ನಿಗಳಿಂದೆ ಭೂಸುರ ಸ | ಮಾಜದಿಂದಖಿಳ ಋತ್ವಿಕ್ಕುಗಳ ಬಹುವಿಧದ ಮಂತ್ರಘೋಷಂಗಳಿಂದೆ || ರಾಜಿಸುವ ನುತ ಯಜ್ಞಶಾಲೆಯೊಳ್ ಭೂವರಂ | ಯಾಜಮಾನ್ಯದೊಳೆಸೆವ ಸಿರಿಯಂ ವೃಕೋದರ ಸ | ರೋಜಾಂಬಕಾದಿ ಬಾಂಧವರೊಳಾವೃತನಾಗಿರಲ್ ಕಾ ಣೆನಕಟೆಂದನು || ೮ ||


ಹೇಳಲೇನಹುದಿನ್ನು ಬಭ್ರುವಾಹನನೊಡನೆ | ಕಾಳೆಗಂಗುಡುವೆನಾಂ ಕುಲಕೆ ನೀಂ ಮಗನೋರ್ವ | ಬಾಳುವೆ ಗೆಡಿಸಬೇಡ ಗಜಪುರಕೆ ಪೋಗಿ ಮುರಹರ ಧರ್ಮನಂದನರ್ಗೆ || ಕಾಳಾದ ರಾಜಕಾರಸ್ಥಿತಿಯ ನೆಚ್ಚರಿಸು | ಕೇಳೆನ್ನ ಮಾತನೆಂದರ್ಜುನಂ ನುಡಿಯಲ್ಕೆ | ತಾಳದೆ ವೃಷಧ್ವಜಂ ಕೋಪದಿಂ ಪಾರ್ಥಂಗೆ ಕೈಮುಗಿಯುತಿಂತೆಂದನು | ೯ ||


ಒಳ್ಳಿತಿದು ತಾತ ನಿನ್ನಂ ಬಿಟ್ಟು ನಾಂಪೋಗ | ಲುಳ್ಳವನೆ ಗಜನಗರಿಗಕಟ ರಣದೊಳ್ ಜೀವ | ಗಳ್ಳನಾದೊಡೆ ಮತ್ಪಿತಾಮಹಂ ಬೀಳದಿರ್ಪನೆ ಗಗನಮಾರ್ಗದಿಂದ || ಹೊಳ್ಳೆದೆಯ ಹೊರಬಿಗರೊಳೆಂದು ನುಡಿಗಳಂ | ತಳ್ಳಂಕದಿಂದೆ ನೀನಾಹವದೊಳಿಂತೆಣಿಕೆ | ಗೊಳ್ಳಲೇಕಿವನ ಬಂಕವನೀಗ ಮುರಿವೆನೆನ್ನಂ ಕಳುಹಿ ನೋಡೆಂದನು | ೧೦ ||



ತಂದೆಗೋಸುಗ ಮಾ ಳ್ದ ನವಸರಕೆ ಗೋನಿಮಿ | ತ್ತಂ ದೇವ ವಿಪ್ರಾರ್ಥಕಸುದೊರೆದೊಡಾತಂಗೆ | ಸಂದೇಹವಿಲ್ಲದಾದವುದು ಗಡ ಕೈವಲ್ಯ ಮಾಗಳಾನೆಂತು ರಣಕೆ || ಹಿಂದುಗಳೆದಪೆ ನೇಕಪತ್ನಿಯಾಗಿಹ ಸತಿಯ | ಮುಂದಕೈದುವೆನೆಂತು ಭಾನುಸಂಭವನ ಸುತ | ನೆಂದೆನಿಸಿಕೊಂಬೆನೆಂತನೃತಮಂ ನುಡಿವನಲ್ಲಾ ಹವಕೆ ಕಳುಹೆಂದನು||೧೧||


ಮಂದಿ ಸಹಿ ತೀ ಬಭ್ರುವಾಹನಂ ಬರಲಿ ನಾ| ನಿಂದು ರಣದೊಳ್ ನಿನ್ನ ಕಂಗಳ್ಗೆ ಹಬ್ಬಮಂ | ತಂದಲ್ಲದಿರೆನೆಂದು ವೃಷಕೇತು ಬಲ್ಪಿಂ ಧನಂಜಯಂಗೆರಗಿ ಬಳಿಕ || ಪೊಂದೇರ್ಗಡರ್ದು ನಿಜ ಚಾಪಮಂ ತುಡುಕಿ ನರ |ನಂದನನ ಸಮ್ಮು ಖಕೆ ನಡೆತಂದು ನುಡಿದನೆಲೆ | ಮಂದಮತಿ ಪಾರ್ಥ ಸುತನಹಡೆ ನಿಲ್ ಕರ್ಣಜಂ ತಾನೆನುತ ತೆಗೆದೆಚ್ಚನು ||೧೨||


ಲೇಸನಾಡಿದೆ ಕರ್ಣ ಸುತನಾದೊಡೊಳ್ಳಿ ತೈ | ವಾಸಿಯುಳ್ಳವನಪ್ಪ ಫಲುಗುಣಂ ಕೊಂದನ | ಲ್ಲಾ ಸಮರದೊಳ್ ನಿನ್ನತಾತನಂ ತನಗೆ ನೀನಿದಿರಪ್ಪುದುಚಿತಮೆನುತೆ || ಸೂಸಿದಂ ಕ ಣೆಗಳಂ ಬಭ್ರುವಾಹನನದಂ | ನೇಸರಣುಗನ ಸುತಂ ಬರೆಕೆಯ್ದು ಪಾರ್ಥಿಯಂ । ಗಾಸಿಮಾಡಿದನಂಬುಗಳ ಮಳೆಯೊಳವನೀತನಂ ಮುಸುಕಿದಂ ತರದೊಳು || ೧೩||


ಇಸುವರೆಚ್ಚಂಬುಗಳನೆಡೆಯೊಳಿಕ್ಕಡಿಗೈವ | ರಿಸುವರೋರೊರ್ವರಂ ಗಾಯಗಾಣಿಸಿ ಕೆರ| ಳಿಸುವರಶ್ವಧ್ವಜ ವರೂಥ ಸಾರಥಿಗಳಂ ತರಿದಿಳೆಗುರುಳ್ಚಿಕೂಡೆ||ಇಸುವರೊಮ್ಮೊಮ್ಮೆ ಮೈಮರೆದು ಚೇತರಿಸಿಕೊಂ | ಡಿಸುವರಾನ್ನೇಯಾದಿ ದಿವ್ಯಾಸ್ತ್ರನಿಕರದಿಂ | ದಿಸುವರಿಂತವರವರ ಸರಿಬರಿಗೆ ಬಾಣಂಗಳಂ ಕರ್ಣಪಾರ್ಥಸುತರು||೧೪||


ಅಂದಾದ ಕರ್ಣಾರ್ಜುನರ ಕಾಳಗವನವರ | ನಂದನರ್ ನಿರ್ಣೈಸುತಿರ್ದರೆನೆ ಶಸ್ತ್ರಾಸ್ತ್ರ | ದಿಂದೆ ಶರಸಂಧಾನ ಸತ್ಯ ಸಾಹಸ ಲಕ್ಷ್ಯ ಬಳಿ ಲಾಘವಂಗಳಿಂದೆ || ಮುಂದುವರಿವಗ್ಗಳಿಕೆ ಮುಳಿಸು ಮೂದಲೆ ಮೋಡಿ |  ಬಂದಿ ಭಾರಣೆ ಬಿಂಕ ಬೆಸೆ ಚಮತ್ಕಾರಂಗ| ಳಿಂದೆ ಸಮಮಾಗೆ ಕೈದೋರಿದಂ ವೃಷಕೇತು ಬಭ್ರುವಾಹನನ ಮೇಲೆ | ೧೫ ||


ಬಳಿಕಖಿಳ ದಿವ್ಯಾಸ್ತ್ರದಿಂದೆ ವೃಷಕೇತು ವೆ | ಗಗ್ಗಳಿಸೆ ವಾಡಬ ವೈಷ್ಣವಂಗಳಿಂ ಪರಿಹರಿಸಿ | ಕೊಳುತರ್ಜುನಾತ್ಮಜಂ ಕೆರಳಿ ವನನೆಕ್ಕೊಡುಚ್ಚಳಿಸಿ ತ ಚ್ಛೋಣಿತವನು || ತೊಳೆಯಲಿಳಿದುವು ಭೋಗವತಿಯ ಜಲಕಂಬುಗಳ್ | ಮುಳಿದು ಕರ್ಣಜನಿ ರಲ್ಮಾ ತನಂ ಸುತ್ತಿಸಿತು | ಸುಳಿಗಾಳಿಯಂದದಿಂ ಕಣೆಗಳರೆಗಳಿಗೆ ಪರ್ಯಂತರಂ ಸಂಗರದೊಳು||೧೬||


ಮತ್ತೆ ಹೊಡಕರಿಸಿ ಪಾರ್ಥನ ಸೂನು ರೋಷಾಗ್ನಿ | ಪೊತ್ತಿ ಕಿಡಿಗೆದರಿ ದಿವ್ಯಾಸ್ತ್ರಮಂ ಪೂಡಿ ತೆಗೆ | ಯುತ್ತೆಲವೊ ಕರ್ಣಸುತ ನೀನೆ ಬಿಲ್ಲಾಳಪ್ಪೆ ನಾಂ ಪೊಣರ್ದತಿಬಲರೊಳು || ಚಿತ್ತ ಚಂಚಲವಿಲ್ಲದೀಕ್ಷಿಸೆನುತೆಚೊಡೆದೆ | ಗೊತ್ತಿ ಶಿರಮಂ ಕೂಡಿ ಪಿಡಿದಾಗಸಕೆ ಬಾಣ | ವೆತ್ತಿಕೊಂಡೊಯ್ದು ವೃಷಕೇತುವಂ ತಿರುಗಿಸಿತು ದೆಸೆದೆಸೆಗಳಂ ನಭದೊಳು||೧೭||


ಭಾನುಸುತ ಸೂನುವಂ ನಭಕೆತ್ತಿ ಕೊಂಡೊಯ್ದು | ನಾನಾದೆಸೆಗೆ ತಿರುಗಿಸಿತು ಮುಹೂರ್ತತ್ರಿತಯ |  ಮೀನೆಲಕೆ ಕೆಡಹದೆ ಮಹಾಶರಂ ಕೆಳಗೆ ಬಿಡಿದು ಸನ್ನದ್ಧರಾಗಿ| | ಈ ನರನುಮಾ ಬಭ್ರುವಾಹನನನು ಮೊಡನೈದೆ | ಬಾನೆಡೆಯೊಳಾತಂ ಪಿತಾಮಹಂಗಭಿನಮಿಸಿ | ಕಾನನ ಸರಿತ್ಸಾಗರಂಗಳೊಳ್ ಬೀಳದಿಳಿದು ಮಣಿಪುರದ ಮಹಿಯೊಳು |೧೮||


ಮೊಗಮೆತ್ತಿ ಫಲುಗುಣಂ ನೋಡುತಿರೆ ಕರ್ಣಜಂ | ಗಗನದಿಂ ಬಿದ್ದಿಳೆಗೆ ಪೊಡೆಚಂಡಿನಂತೆ ಪುಟ | ನೆಗೆದಿದ್ದು ರೋಷದಿಂ  ಘುಡುಘುಡುಸಿ  ಪಾರ್ಥಸುತನಂ ಪಚಾರಿಸಿ ಕನಲ್ದು || ತೆಗೆದಿ ಸಲ್ ಬಾಣಂಗಳತ್ವ ಸಾರಥಿ ಪತಾ | ಕೆಗಳಿಂದಮರ್ದ ರಥಸಹಿತ ಚಿತ್ರಾಂಗದೆಯ | ಮಗನಂ ನಭಸ್ಮಳಕೆ ಕೊಂಡಡರ್ದುವು ನಾಕ ಪರಿಯಂತಮಾಕ್ಷಣದೊಳು |೧೯||


 ನಭದೊಳತ್ಯುಗ್ರನಿಂ ತಪಿಸುವ ದಿವಾಕರ | ಪ್ರಭೆಯಿಂದುರಿಯ ರಥಂ ಬಿದ್ದ ಮುರ್ವಿಗೆ ಪಾರ್ಥಿ | ರಭಸದಿಂ ಪೂರ್ವದೊಳಡರ್ದ ಸಂಪಾತಿ ಗರಿ ಸೀಳ್ದಿಳಿಗೆ ಬೀಳುವಂತೆ||ತ್ರಿಭುವನಣೆ ಪೊಸತಾಗೆ ಕರ್ಣಜಂ ಮತ್ತೆ ರಿಪು | ಸುಭಟನಂ ಮೂರು ಬಾಣದೊಳೆಚ್ಚು ದಿವಸ ವ |ಲ್ಲಭನ ಮಂಡಲದಲ್ಲಿಗೈದಿಸಿ ಪಚಾರಿಸಿ ಜರೆದು ಕೂಡೆ ಬೊಬ್ಬಿರಿದನು||೨೦||


ಬೊಬ್ಬಿರಿವ ಕರ್ಣಜನ ದನಿಗೇ ಳ್ದು ರೋಷದಿಂ । ದಬ್ಬರಿಸಿ ಗಗನದೊಳ್ ತನ್ನ ರಥಮಂ ಬಿಟ್ಟು ! ಹೆಬ್ಬೆಟ್ಟ ದಂತಿವನ ಮಸ್ತಕದ ಮೇಲೆ ಬೀಳಲ್ಕಿವಂ ಕನಲ್ದು ಕೂಡೆ || ಉಬ್ಬಿ ಪುಟನೆಗೆ ದೆದ್ದು ಸಾಯಕದೊಳೆಚ್ಚ ವನ | ನೆಬ್ಬಿಸಿದನಾಗಸಕೆ ಮತ್ತೆ ಭೀಭತ್ಸು ಕಂ | ಡೊಟ್ಟೆಗಳನಲ್ಲಾಡಿ ಪೊಗಳಲ್ಕೆ ವೃಷಕೇತು ಫಲುಗುಣಂಗಿಂತೆಂದನು | ೨೧ ||


ತಾತ ನೋಡಂದು ರಣದೊಳ್ ತೇರ ಗಾಲಿ ವಸು | ಧಾತಳದೊಳಳ್ದೊಡಾಯತವಾಗಿ ನಿಲ್ವಿನಂ | ಘಾತಿಸದಿರೆಂದು ನಿನ್ನೊಡನೆ ನಮ್ಮಯ್ಯನಾಡಿದವೊಲಾಡದೆ ಸುಮ್ಮನೆ || ಈತನನ್ನ ಸ್ತ್ರದಿಂ ಗಾಸಿಯಾದಪನೆಂದು | ಮಾತಾಡುವನಿತರೊಳ್ ಮ  ತ್ತಿವನ ಮೇಲೆ ಬಂ | ದಾತ ಬೀಳಲ್ ನೊಂದರಿರ್ವರುಂ ಚೇತರಿಸಿಕೊಂಡು ಧುರಕನುವಾದರು |೨೨||


ಮಣಿ ವರೂಥಾರೂಢರಾಗಿ ಬಳಿಕಿರ್ವರುಂ | ರಣರಂಗದೊಳ್ ಕಡುಗಿ ಕಾದಿದರ್ ಕಾಯದೊಳ್ | ಕಣೆಗಳಿಡಿಯಲ್ ಖಂಡಮಂ ಕಚ್ಚಿ ಪಾರಲರುಣಾಂಬುಗಳ್ ಕೋಡಿವರಿಯೆ || ಪೊಣರ್ವರಂಬರಕಡರ್ದೊಮ್ಮೆ ಮೇದಿನಿಗಿಳಿದು ಪೆಣಗುವರ್ ಮತ್ತೊಮ್ಮೆ ನಭದೊಳಿರ್ದೊರ್ವರ್ |ಧ ರಣಿಯೊಳಿರ್ದೊರ್ವರ್ ನೆಲದೊಳೋರ್ವ ರಾಗಸದೊಳೊರ್ವರಿರ್ದಾ ಕಲಿಗಳು ॥ ೨೩||


ಭೂಪ ಕೇಳಿಂತೈದುದಿನದೆ ಕಾದಿದರ್ | ಚಾಪವಿದ್ಯಾಪ್ರವೀಣ ರ್ ಬಳಿಕ ಪಾರ್ಥಜಂ | ಭಾಪುರೇ ವೃಷಕೇತು ನೀನೆ ಪಟುಭಟನಪ್ಪ ಲೋಕದೊಳ್ ಸಾಕೆದೆಯೊಳು || ಶ್ರೀಪತಿಧ್ಯಾನಮಂ ಮಾಡೆನುತೆ ತೆಗೆದಿಸಲ್ | ಕೋಪದಿಂದಾಕಣೆಯ ನಿವನರಿವನಿತರೋಳ್ ಪ್ರ | ತಾಪದಿಂ ಕವಲಂಬನೆಚ್ಚು ಕತ್ತರಿಸಿದಂ ಕರ್ಣಜನ ಕಂಧರವನು||೨೪||


ಕಡಿದು ಕವಲಂಬುಗಿಯೆ ಕರ್ಣಜನ ತಲೆ ನಭಕೆ | ಸಿಡಿದು ಕಂತುಕದಂತೆ ಬಂದು ಬಿದ್ದುದು ಪಾರ್ಥ| ನಡಿಗೆ ನಾರಾಯಣ ಮುಕುಂದ ಮಾಧವಯೆನುತೆ ಮುಂಡವತಿವೇಗದಿಂದೆ ॥  ನಡೆದು ರಣದೊಳ್ ಮಣಿಪುರೇಂದ್ರನಂ ಪೊಯ್ದಿಳೆಗೆ | ಕೆಡಹಿ ಪಡೆಯೆಲ್ಲಮಂ ಸದೆದುರುಳ್ದುದು ನರಂ | ಪಿಡಿದೆರಡು ಕೈಗಳಿಂದಾ ಶಿರವನೆತ್ತಿಕೊಂಡೀಕ್ಷಿಸುತಳಲ್ದನಂದು||೨೫||


ಬಿಟ್ಟ ಕಂಗ ಳ್ ಬಿಗಿದ ಪುರ್ಬುಗಳ್ ಪೆರೆ ನೊಸಲ | ಬೊಟ್ಟು ಸೂಚಿಸಿದ ಕುರುಳ್ ಧಳಥಳಿಪ ಕುಂಡಲಂ | ಪುಟ್ಟು ದುಪ್ಪುಳ್ಕೀಸೆ ಪೊಳೆವಲ್ ನಗುವ ಮೊಗಂ ಕಳಕಳಿಸೆ ಕಳೆಯದಿಂದೆ || ಕಟ್ಟು ಗ್ರವಾಗಿರ್ದ ತನಿವೀರರಸದೊಂದು | ಗಟ್ಟಿಯೆನೆ ತೋರ್ಪ ಕರ್ಣಜನ ತಲೆಯಂ ನರಂ | ನಿಟ್ಟಿಸುತೆ ಪ ಣೆಯಂ ಪಣೆಯೊಳಿಟ್ಟು ಪೊಸೆದು ಚುಂಬಿಸಿ ಕಂಬನಿಯೊಳಾಳ್ದನು||೨೬||


ಮಗನೆ ನೀನೆಂತು ಮಡಿ ದೈ ಕೃಷ್ಣರಾಯಂಗೆ | ಸೊಗಸಾದುದೇ ನಿನ್ನಳಿವು ಧರ್ಮತನಯಂಗೆ | ಮೊಗದೋರ್ಪ ಸುತರುಂಟೆ ನೀನಲ್ಲದೇನೆಂದಳಲ್ಪಳೈ ಕುಂತಿ ನಿನಗೆ || ಪಗೆಯೆಂದು ಕೊಂದೆವಗ್ರಜನ ನೆಮಗಾತನಿಂ | ಮಿಗಿಲೆಂದು ಕಂಡಿಹೆವಲ್ಕೆ ನಿನ್ನ ನೈವರ್ಗೆ | ಸುಗತಿ ಗುಡುವಾತ್ಮಭವರಿರ್ದಪರೆ ಪೇಳೆಂದು ಹಳವಳಿಸಿದಂ ಪಾರ್ಥನು | ೨೭ ||


ಸಾಲದೆ ಮಹಾಹವದೊಳಭಿಮನ್ಯು ಮಡಿದಳಲ್ | ಬಾಲಕಂ ನೀನಿರ್ದೊಡೇನಕಟ ಕಣ್ಣ ಮುಂ | ದಾಲಿಸೈ ತನ್ನ ಮಾತಂ ನುಡಿಸಲಾಗದೇ ನೋಡೆನ್ನ ನಾದರದೊಳು || ಪಾಲಿಸೈ ತುರಗಮಂ ಮಂದಿಯಂ ನಡೆಸಿನ್ನು | ಮೇಲಣುದ್ಯೋಗಮಾವುದು ಕಂದ ನಿನ್ನ ಗುಣ | ಶೀಲಮಂ ಭೂಪನೊಳ್ ಬ ಣ್ಣಿಪ ವೃಕೋದರಂಗೇನೆಂಬೆನುಸಿರೆಂದನು | ೨೮ ||


ಮೂಗಿಲ್ಲದಾನನಂ ಲಿಂಗವಿಲ್ಲದ ಪೀಠ | ಮಾಗಿರದೆ ಪಾಂಡವರ ಸಿರಿ ಯಿನ್ನು ನೀನಿಲ್ಲ | ದಾಗ ನಿನ್ನದಟಿಂದೆ ಯೌವ್ವನಾಶ್ವಾನುಸಾಲ್ವರ ಸಖ್ಯಮಾದುದೆಮಗೆ || ಯಾಗಮಹುದರಸಂಗೆ ನಿನ್ನಿಂದ ನೀಂ ಪದ್ದು । ಕಾಗೆಗೊಡಲಂ ಕೊಟ್ಟು ರಣದೊಳೆನ್ನಂ ಬಿಟ್ಟು | ಪೋಗಲಪ್ಪುದೆ ತಂದೆ ವೃಷಕೇತು ಪೇಳೆಂದು ಮರುಗಿದಂ ಸವ್ಯಸಾಚಿ ॥೨೯||


ಈ ಪರಿಯೊಳಾ ವೃಷಧ್ವಜನ ತಲೆವಿಡಿದವನ | ರೂಪಗುಣ ಶೀಲಮಂ ನೆನೆನೆನೆದು ಶೋಕ ಪ್ರ|  ಳಾಪದಿಂ ನರನಳಲುತಿರಲು ಕರ್ಣ ಸುತನಟ್ಟೆ ಬಂದಪ್ಪಳಿಸಲು || ಧೂಪಿಸಿ ಧರೆಗೆ ಬಿದ್ದೊಡನೆ ಮೂರ್ಛೆ ತಿಳಿದೆದ್ದು | ಚಾಪದ ಕೊನೆಗೆ ಮೊಗವನಿ ಟ್ಟೋರೆಯಾಗಿ ನಿಂ ದಾ ಪಾರ್ಥನಂ ನೋಡಿ ನಸುನಗುತೆ ಚಿತ್ರಾಂಗದೆಯ ತನುಜನಿಂತೆಂದನು ||೩೦||


ಎಲೆ ಪಾರ್ಥ ವೈತ್ಯಸಂಭವರಾವಹೆವು ನಿಮ್ಮ | ಬಲ ಸಮಾಜದೊಳಂಬುಗಳ ಪಸರಮಂ ಹರಹಿ । ಗೆಲವಿನಗ್ಗ ದಲಾಭಮಂ ಪಡೆದೆವದಟರ ಶಿರಂಗಳಂ ಕೊಂಡವರಿಸಿ || ಕಲಿಗಳೈತಂದು ಜೀವಕೆ ಸಂಚಕಾರಮಂ | ಸಲೆ ಬೇಡಿದೊಡೆ ಕೊಟ್ಟೆವಿಚ್ಚೆಯುಳ್ಕೊಡೆ ನಿನ್ನ | ತಲೆಯ ಬೆಲೆಗಿದೆ ಸಾಹಸ ದ್ರವ್ಯಮೆನ್ನೊಳೆಂದಾರ್ಜುನಿ ಪಚಾರಿಸಿದನು || ೩೧ ||


ಇವರೊಳೇನಹು ದಿನ್ನು ವೀರನೀ ಕರ್ಣಸುತ | ನಿವನ ತಲೆಯಂ ಸಮರ್ಪಿಸು ಮಹಾದೇವಂಗೆ | ತವೆ ರುಂಡಮಾಲೆಯೊಳ್ ಪೂಜ್ಯವಾಗಿಹುದೀಶ್ವರ ಪ್ರೀತಿಯಹುದು ನಿನಗೆ || ಶಿವನಂದು ಪಾಶುಪತ ಬಾಣಮಂ ಕೊಟ್ಟುದಿ। ಲ್ಲವೆ ನಿಜಸ್ವಾಮಿಯಂ ಮರೆದಪರೆ ಸಾಕಿದರ | ಬವಣೆಯೇತಕೆ ನಮಗೆ ಕಾದುವೆಯೊ ತುರಗಮಂ ಬಿಟ್ಟಪೆಯೊ ಪೇಳೆಂದನು ||೩೨||





೩೨||



ಜೈಮಿನಿ ಭಾರತ 45

ಇಪ್ಪತ್ತಮೂರನೆಯ ಸಂಧಿ ಕೊನೆಯಭಾಗ

ಪದ್ಯ 33 ರಿಂದ 64

ಅರ್ಜುನನ ಮರಣ

ನಿರೂಪಣೆ: ಸುಬ್ಬುಲಕ್ಷ್ಮಿ


ಸಂಕ್ಷಿಪ್ತ ರೂಪ


ಅರ್ಜುನನು ಕೋಪದಿಂದ ಕೂಡಿ ಕರ್ಣಜನ ತಲೆಯನ್ನು ಪಕ್ಕಕ್ಕಿಟ್ಟು ಯುದ್ಧಕ್ಕೆ ಸಿದ್ಧನಾದನು. ನಿನ್ನ ಹಗೆಯಾಗಿದ್ದ ಕರ್ಣನ ಮಗ ಸತ್ತಿದ್ದು ನಿನಗೆ ಒಳಿತಾಯಿತು ಎಂದು ಅರ್ಜುನನನ್ನು ಮೂದಲಿಸಿದನು ಬಭ್ರುವಾಹನ. ಇಬ್ಬರ ನಡುವೆ ಕದನ ನಡೆದು ಅಂಗೋಂಪಾಂಗಗಳು ಗಾಯಗೊಂಡು ನೆತ್ತರು ಸುರಿಯಿತು.


ಆ ಕೃಷ್ಣ ಇದ್ದುದರಿಂದ ಕರ್ಣ, ಭೀಷ್ಮ ದ್ರೋಣ ರನ್ನು ಗೆಲ್ಲಿಸಿಕೊಟ್ಟನು. ಈಗ ಅವನಿಲ್ಲದೆ ಬಂದಿರುವ ನೀನು ಸತ್ವಹೀನನು ಎಂದು ಹೀಗಳೆಯುತ್ತ ಬಾಣಗಳನ್ನು ಬಿಡಲು ಬಾಣಗಳು ಆಕಾಶವನ್ನು ಮುಟ್ಟಿದವು. ರಥ ಉರುಳಿತು. ಕುದುರೆ ಸತ್ತಿತು. ಸಾರಥಿ ಮಡಿದನು.ಹನುಮಂತನು ಚೀರಿದನು. ಪತಾಕೆಗಳು ನಡುಗಿದವು. ಒಬ್ಬರಿಗೊಬ್ಬರು ಹೋರಾಡಿದರು.


ಜಾಹ್ನವಿಯ ಶಾಪದಿಂದ ಅರ್ಜುನನ ಶಕ್ತಿಯು ಉಡುಗುತ್ತ ಬಂದಿತು. ನನ್ನ ತಾಯಿಯನ್ನು ನಿಂದಿಸಿದ ಫಲ ಇದೆಂದನು ಬಭ್ರುವಾಹನ. ಸಾಕು. ಇನ್ನು ಕೃಷ್ಣನನ್ನು ನೆನೆ ಎಂದನು. ಏನಾದರಾಗಲಿ ಎಂದು ಇನ್ನೂ ರೋಷದಿಂದ ಅರ್ಜುನನು ಮಗನ ಮೇಲೆ ಶರಗಳ ಮಳೆಗರೆದನು. ದೇವತೆಗಳಿತ್ತ ದಿವ್ಯಾಸ್ತ್ರಗಳನ್ನೆಲ್ಲ ಬಳಸಿದರೂ ಜಾಹ್ನವಿಯ ಶಾಪದ ಫಲದಿಂದ ಅವು ಯಾವುವೂ ಪ್ರಯೋಜನಕ್ಕೆ ಬರಲಿಲ್ಲ. ಬಭ್ರುವಾಹನ ಕೋಪದಿಂದ ಇನ್ನಷ್ಟು ಅಂಬುಗಳನ್ನು ಎಸೆದನು. ಅತ್ಯುಗ್ರ ಬಾಣವು ಬರಲು ಪಾರ್ಥನು ಅದನ್ನು ಎದುರಿಸಲಾರದೆ ಹೋದನು. ಅವನ ತಲೆ ಉರುಳಿತು. ಕೃಷ್ಣಾ ಎನ್ನುತ್ತ ಕರ್ಣಜನ ಶಿರದ ಬಳಿಗೆ ಹೋಗಿ ಬಿದ್ದಿತು. ಬಭ್ರುವಾಹನನ ಬಲವು ವಿಜಯೋತ್ಸವದ ಕೇಕೆ ಹಾಕಿತು.


ಸಕಲ ವೈಭವದಿಂದಾ ಅವನು ಅರಮನೆಯತ್ತ ನಡೆದನು. ಆ ವೇಳೆಗೆ ರಾಣಿಯರಿಗೆ ಎಲ್ಲ ಸಂಗತಿ ತಿಳಿದು ಗೋಳಿಡುತ್ತಿದ್ದರು. ಅರ್ಜುನ ತನ್ನ ಸಾವಿನ ಕುರುಹು ಎಂದು ಹೇಳಿದ್ದ ಪಂಚದಾಡಿಮ ವೃಕ್ಷವು ಒಣಗಿದ್ದುದನ್ನೂ ಉಲೂಪಿಯು ನೋಡಿದಳು. ಪತಿಯನ್ನು ಕಳೆದುಕೊಂಡು ಬಹಳವಾಗಿ ರೋಧಿಸುತ್ತಿದ್ದರು. ಬಭ್ರುವಾಹನನಿಗೆ ಸಾಕಷ್ಡು ಬೈಯ್ದರು. ರಣರಂಗಕ್ಕೆ ಹೋಗಿ ಅಲ್ಲಿ ಅರ್ಜುನನ ಕಳೇಬರವನ್ನು ನೋಡಿ ಅಪ್ಪಿ ಮುದ್ದಾಡಿ ಗೋಳಿಟ್ಟರು. ರವಿ ಶಶಿಯರಂತೆ ಕರ್ಣಜ ಮತ್ತು ಅರ್ಜುನನ ದೇಹಗಳು ಆಕಾಶದಿಂದ ಬಿದ್ದಿವೆಯೆಂದು ಹೇಳುತ್ತ ಕಣ್ಣೀರುಗರೆದರು. ಅರ್ಜುನನ ರೂಪ, ಶಕ್ತಿ, ಗುಣಗಳನ್ನು ನೆನಪಿಸಿಕೊಂಡು ತೊಳಲಿದರು. ನೆಲದಲ್ಲಿ ಹೊರಳಾಡಿದರು. ಬಳಿಗೆ ಬಂದ ಮಗನನ್ನು ಮೂದಲಿಸಿದರು.


ತನ್ನ ತಪ್ಪನ್ನು, ದುಡುಕನ್ನು ಮನಗಂಡ ಅವನು ಸಾಕಷ್ಟು ಪಶ್ಚಾತ್ತಾಪ ಪಟ್ಟನು. ಬೇರೆ ಯಾವುದೇ ಪಾಪಗಳಿಗೆ ಪ್ರಾಯಶ್ಚಿತ್ತ ಉಂಟು. ಆದರೆ ಪಿತೃಘಾತಕನಿಗೆ ಯಾವ ಪ್ರಾಯಶ್ಚಿತ್ತವೂ ಇಲ್ಲವೆಂದು ತಾನು ಅಗ್ನಿಪ್ರವೇಶ ಮಾಡಲು ಉದ್ಯುಕ್ತನಾದನು. ಆಗ ಚಿತ್ರಾಂಗದೆಯು ಅವನನ್ನು ತಡೆದಳು. ಶ್ರೀ ಕೃಷ್ಣ ಅರ್ಜುನನನ್ನು ಸಾಯಲು ಬಿಡುವುದಿಲ್ಲ. ಕಾಪಾಡುತ್ತಾನೆ. ಕಾದು ನೋಡುವಾ ಎಂದು ಸಮಾಧಾನ ಹೇಳಿದಳು.


ಇಪ್ಪತ್ತಮೂರನೆಯ ಸಂಧಿ ಕೊನೆಯ ಭಾಗ

ಪದ್ಯ 33 ರಿಂದ 64


ನೋಡಿದಂ ತಿರುಗಿ ಕಣ್ಣಾಲಿಗಳ್ ಕೆಂಪಡರೆ | ಮಾಡಿದಂ ಕೋಪಮಂ ಧೈರ್ಯದಿಂದಳಲನೀ | ಡಾಡಿದಂ ಕರ್ಣಜನ ಶಿರವನಲ್ಲಿರಿಸಿದಂ ಕೊಂಡನುರು ಕಾರ್ಮುಕವನು || ತೀಡಿದಂ ಜೇಗೈದು ತಿರುವಿನೊಳ್ ಬಾಣಮಂ | ಪೂಡಿದಂ ತೆಗೆದೆಚ್ಚು ರುಧಿರ ಪ್ರವಾಹವಂ | ತೋಡಿದಂ ಬಭ್ರುವಾಹನನ ಸರ್ವಾಂಗದೊಳ್ ಕಲಿಪಾರ್ಥನಾ ಕ್ಷಣದೊಳು|೩೩'||


ಮೈಸಿರಿಯ ಳಲ್ಗಳಿವು ಲೇಸಾಯ್ತು, ಪಗೆಯ ಮಗ | ನೈಸಲೇ ಕರ್ಣಜಂ ಸಾಕಿದೇತಕೆ ಬರಿದೆ | ವೈಸಿಕದ ದಾಣಪ್ರಯೋಗಂಗಳಿಂದ್ರ ಕೀಲದೊಳುಮಾಕಾಂತನಿಂದೆ || ಕೈಸಾರ್ದ ಸಾಯಕವನುಗಿಯೆನುತ ಪಾರ್ಥನಂ | ಪೈಸರಿಸದೆಚ್ಚನೀ ಬಭ್ರುವಾಹನನ ಕ ಣೆ | ಗೈಸದು ನಭೋವಲಯಮೆನೆ ಕವಿದುವಂಬುಗಳ ದೇವತತಿ ಬೆರಗಾಗಲು || ೩೪


ಮತ್ತವು ಮಸುಳ್ಳಂತೆ ನರನಾರ್ದು ತೆಗೆದಿಸಲ್ | ಪೆತ್ತುವು ಸರಳಳೊಂದೊಂದಯುತ ನಿಯುತಮಂ | ಪೊತ್ತುವು ನಭಸ್ಥಳಕೆ ಕೊಂಡು ರಿಪುಸೇನೆಯಂ ತಾರೆಗಳನುದಿರಿಸಿದುವು ॥ ಕಿತ್ತುವು ಕುಲಾದ್ರಿಗಳನಾಗಸದ ಬಟ್ಟೆಯಂ । ಕೆತ್ತುವು ದಿಗಂತಮಂ ತುಂಬಿದುವು ಬಾಣಂಗ | ಳಿತ್ತುವು ಜಗತ್ರಯಕೆ ಕಂಪಮಂ ಪಿಂತೆಂದುಮಿಲ್ಲಿದು ವಿಚಿತ್ರವೆನಲು || ೩೫||


ಕೊರೆದುವಂಗೋಪಾಂಗಮಂ ಪಾರ್ಥನಂಬುಗಳ್ | ತೆರದ ಜಾಳಾಂದ್ರದಂತಾಯ್ತುಗಿದ ಬಟ್ಟೆಗಳ್ | ಕರೆದ ಪೆರ್ಮಳೆಯಿಂದೆ ನಡೆದ ಜಾದಿನ ಗಿರಿಯೊಳಿರದಿಳಿವ ಕೆಂಬೊನಲ್ಗಳ || ತೆರದೊಳೆಸೆದುವು ರಕ್ತಧಾರೆಗಳ್ ಗಾಯದೊಳ್ | ಮರೆದನೊಡಲಂ ನಿಮಿಷಕೊಡನೆ ತರಹರಿಸಿದಂ । ಜರೆದನರ್ಜುನನಂ ರಣಾಗ್ರದೊಳ್ ಮೂದಲಿಸಿ ಬಭ್ರುವಾಹನಂ ಕನಲ್ದು |೩೬||


ಕರ್ಣ ಭೀಷ್ಮ ದ್ರೋಣರಂ ಗೆ ಲ್ದುಕೊಟ್ಟಂ ಸು | ಪರ್ಣಧ್ವಜಂ ನಿನಗೆ ಕರುಣದಿಂ ಕಾದಿದ ನ| ಪರ್ಣಾಧವಂ ನಿನ್ನೊಳಗ್ಗಳಿಕೆ ಪಿರಿದೆಂದು ಮೇದಿನಿಯೊಳರಿಯದವರು || ವರ್ಣಿಸುವರೆಂದು ಬೆರೆತಿಹೆ ತನ್ನ ಸಮರಮಂ | ನಿರ್ಣೈಸಿದೊಡೆ ವೀರನಹುದೆಂದು ಬಾಣಮಯ | ದರ್ಣವವಿದೆತ್ತಣಿಂ ಮೆರೆದಪ್ಪಿ ದುದೆನಲ್ ಬಭ್ರುವಾಹನನೆಚ್ಚಲು ||೩೭||


ಕೆತ್ತಿದುವು ದಿಕ್ತಟದ ಭಿತ್ತಿಗಳನದ್ರಿಗಳ | ನೆತ್ತಿದುವು ಧರೆಯನುಚ್ಚಳಿಸಿ ಕೂ ರ್ಮನ ಬೆನ್ನ | ನೊತ್ತಿದುವು ಕಲಕಿದುವು ಸಾಗರವನಾದಿತ್ಯಮಂಡಲವ ನಂಡಲೆದುವು || ಮುತ್ತಿದುವು ಬಾಂದಳವನೆಲ್ಲಮಂ ಕೆಲಕೆಲವು | ಪ ತ್ತಿದುವು ಪರಿದುವಿಳಿದುವು ಸಕಲಲೋಕಕ್ಕೆ 1 ಬಿತ್ತಿದುವು ಭೀತಿಯಂ ಬಭ್ರುವಾಹನನ ಶರಜಾಲಮದನೇವೇಳ್ವೆನು||೩೮||


ಹಾರಿಸಿತು ರಥಮಂ ತುರಂಗಮಂ ರುಧಿರಮಂ | ಕಾರಿಸಿತು ಸಾರಥಿಯ ಜೀವಮಂ ಸುರಲೋಕ | ಕೇರಿಸಿತು ಛತ್ರಚಾಮರ ಪತಾಕಾಳಿಯಂ ಕೆಂಗರಿಯ ಗಾಳಿಯಿಂದೆ| | ತೂರಿಸಿತು ಟೆಕ್ಕೆಯದ ಮೇಲೆ ಹನುಮಂತನಂ | ಚೀರಿಸಿತು ಪಾರ್ಥನ ಶರೀರದೊಳ್ ಬಟ್ಟೆಯಂ | ತೋರಿಸಿತು ಬಭ್ರುವಾಹನನ ಶರ ಸಂಕುಲಂ ಫಲುಗುಣಂ ಕಂಪಿಸಿ ॥ ೩೯||


ಮತ್ತೆ ಸಂಗರದೊಳ ನ್ಯೋನ್ಯಮವರಿರ್ವರ್ಗೆ ಚಿತ್ತದೊಳ್ ಮುಸುಗಿತು ಘನ ಕ್ಷಾತ್ರತಾಮಸಂ| ಪೊತ್ತಿ ತತ್ತಿರೋಷಾಗ್ನಿ ಬಳಿಕೊರ್ವ ರೊರ್ವರಂ ಜೈಸುವಭಿಲಾಷೆಯಿಂದ || ತೆತ್ತಿಸಿದ ಕ ಣೆಗಳಿಂ ಮೈಗಳೈಮೊಗದೊದರೆ | ನೆತ್ತರೊರತೆಗಳಿಂದ ತನುಗಳುರೆ ಪೂತ ಮು | ಳ್ಳುತ್ತಗದೊಲರೆ ತಂದೆಮಕ್ಕಳೆಚ್ಚಾಡಿದರ್ ನಿಚ್ಚಟದೊಳಚ್ಚರಿಯೆನೆ||೪೦||



ಜನಪ ಕೇಳ್ ಜಾಹ್ನವಿಯ ಶಾಪದಿಂ ಬಳಿಕ ಪಾ | ರ್ಥನ ಸ ತ್ವಮೆಳದಾಗಿ ಬರೆ ಕಂಡು ಬಭ್ರುವಾ|ಹನನೆಂದನೆಲೆ ಧನಂಜಯ ತನ್ನ ಜನನಿ ಚಿತ್ರಾಂಗದೆ ವತಿವ್ರತೆ ಕಣಾ | ಅನಿಮಿತ್ತಮಾಕೆಯಂ ಪಳಿದ ಕಾರಣದಿಂದೆ | ನಿನಗೆ ಕೈಗುಂದುತ್ತಿದೆ ಸಾಕಿನ್ನು ಕೃಷ್ಣನಂ | ನೆನೆ ಮರುಳೆ ಮುರಹರನ ಸಾರಥ್ಯವಿಲ್ಲವಾರಂ ಗೆ ಲ್ದೆ ಹೇಳೆಂದನು||೪೧||


 ಕ್ಷೋಣಿಗೋಸುಗ ಕೊಂದೆ ನೀನಂದು ಕರ್ಣನಂ | ಮೇಣವನ ತನಯನ ನೆಳಲ್ಗೆ ಸೇರದೆ ಮನದ | ಕೇಣದಿಂದೆನ್ನ ಕೈಯಿಂದ ಕೊಲಿಸಿದೆ ನಾಕು ಹಗೆ ಹರಿದುದಿನ್ನು ನಿನಗೆ || ಪ್ರಾಣಮಂ ಕಾದುಬಿಡುವೆಂ ಪೋಗು ಬಿಲ್ಗೊಳಲ್ | ತ್ರಾಣಮುಳ್ಕೊಡೆ ನಿಂದು ಚಿತ್ತದೊಳ್ ನೆನೆ ಚಕ್ರ | ಪಾಣಿಯಂ ಬಲಮಪ್ಪುದೆಂದು ಜರೆದಂ ಬಭ್ರುವಾಹನಂ ಫಲುಗುಣನನು |೪೨||


ಹೊಣೆ ಹೊಕ್ಕಿದು ತಾಂ ಪಗೆವನಂ ಗೆಲ್ಗೊಡಂ| ಮಾಣದೆ ರಣಾಗ್ರೆದೊಳ್ ಮಡಿದೊಡಂ ಕ್ಷತ್ರಿಯ | ರ್ಗೂಣೆಯಮೆ ಕರ್ಣನಂ ಕೊಂದೊಡೇನವನ ಸುತನಳಿದೊಡೇನಾಹವದೊಳು || ಕ್ಷೀಣಬಲನೆ ತಾನಕಟ ನೀಂ ಸಮರ್ಥನೇ | ಕಾಣಬಹುದೆನುತೆ ಭೀಮಾನುಜಂ ಕೋವಿದಿಂ | ಬಾಣಂಗಳಂ ಮಗನಮೇಲೆ ಕರೆಯಲ್ಕ ವಂ ಪರೆಗಡಿಯು ತಿಂತೆಂದನು||೪೩||


ಪ್ರೀತಿಯಿಂ ದ್ರೋಣನಿತ್ತಂಬುಗಳ ಮನ್ಮಥಾ | ರಾತಿ ಮುಖ್ಯಾಮರ‌ರ್ ಕೊಟ್ಟ ಬಾಣಂಗಳ 1 ಜ್ಞಾತವಾದುವು ನಿನಗೆ ಮರುಳೆ ನಿನ್ನೊಡನಾಡಿ ಕೃಷ್ಣನಂ ಮರೆದೆಯಾಗಿ|| ಏತಕಾಹವ ಮಿನ್ನು ಸಾಕೆನಲ್ ಫಲುಗುಣಂ | ಖಾತಿಯಿಂ ಮಗುಳಿಸಾ ಬಭ್ರುವಾಹನಂ। ಘಾತಿಸಿದನಡಿಗಡಿಗೆ ಪಾರ್ಥನಂ ಜಾಹ್ನವಿಯ ಶಾಪದಿಂ ಕೈಗಿಡಲ್ಕೆ||೪೪||


ಸುರನದಿಯ ಶಾಪದಿಂ ಮೋಹಿಸಿ ನರಂ ಮುಳಿದು | ಪರೆಗಡಿದು ಕೋಪದಿಂದೆ ಪೂಡಿದಂ ಬಭ್ರುವಾಹಂ ತನ್ನ ಕಾರ್ಮುಕದೊಳು || ಧುರದೊಳಾವಾವಂಬನಿಸುವ ನದನೆಲ್ಲಮಂ। ನಿರುಪಮ ಜ್ವಾಲಾಮುಖದ ಕಾಮರೂಪದುರು | ತರ ವಡಬಶಿಖಿಯಂದದರ್ಧಚಂದ್ರಾಕೃತಿಯ | ಶರವನುರ್ಣಸ್ಪುಲಿಂಗ ಪ್ರಕರವನುಗ್ರ ಪ್ರಭಾಭೀಕರವನು||೪೫||


ಅರ್ಕಾದಿ ಸರ್ವಗ್ರಹಗಳಿಂದ್ರಾದಿ ದೇ| ವರ್ಕಳಾಂಗಿರಸಾದಿ ಮುನಿಗಳೆಲ್ಲರ್ ಮರುಗಿ ದರ್ಕರೆದು ವರುಣಾಂಬಲೆವಂ ಮೇಘಮುದಿರಿತುಲ್ಲಾ ಪಾತಮಿಳೆ ನಡುಗಿತು |! ಶರ್ಕರಾವರ್ತ೦ ಪ್ರವರ್ತಿಸಿತು ಪಾರ್ಥಜಂ| ಕರ್ಕಶದ ಬಾಣಮಂ ತೆಗೆದಿಸಲ್ ಕಿಡಿಗಳ ಪೊ | ದರ್ಕವಿಯೆ ದೆಸೆದೆಸೆಗೆ ಭುಗುಭುಗಿಸುವ ಜ್ವಾಲೆ ಮೇಲ್ಪಾಯು ಬರುತಿರ್ದುದು ||೪೬||


ಅತ್ಯುಗ್ರ ಸಾಯಕಂ ಬರೆ ಪಾರ್ಥನಿದಿರಾಗಿ ಪ್ರತ್ಯಸ್ತ್ರದಿಂದಿಸಲದಂ ಕೊಳ್ಳದೈತರಲ್ | ಸತ್ಯಭಾಮಾ ಕಾಂತನಂ ಚಿಂತಿಪನಿತರೊಳ್ ತೀವ್ರದಿಂ ಕೊರಳನರಿಯೆ || ಅತ್ಯಧಿಕ ಕುಂಡಲದ ತಲೆ  ಚಿಗಿದು ನಭದೊಳಾ | ದಿತ್ಯ ಮಂಡಲಮಿಳೆಗುರುಳ್ಳಂತೆ ಮುನಿಗಣ | ಸ್ತುತ್ಯ ಕೇಶವ ಕೃಷ್ಣಯೆನುತ ಬಿದ್ದುದು ಕರ್ಣಸುತನ ಶಿರದೆಡೆಗೆ ಪೋಗಿ [೪೭]|


ಕಲಿ ವೃಷಧ್ವಜನ ಶಿರದೊಡನೆ ಕೂಡಿತು ನರನ | ತಲೆ ಕರ್ಣಜನ ಕಬಂಧವನಪ್ಪಿ ಕೊಂಡುದಾ ! ಫಲುಗುಣನ ಮುಂಡವಿದನೆಲ್ಲರುಂ ಕಂಡು ಮರುಗಿದರಾಗ ಕರುಣದಿಂದೆ|| ನಲವಿಂದೆ ಬೊಬ್ಬಿರಿದುದಾ ಬಭ್ರುವಾಹನನ | ಬಲಮೈದೆ ಮೊಳಗಿದುವು ವಾದ್ಯಂಗಳಾಹವದ | ಗೆಲವಿಂದೆ ಪುರಕೆ ತಿರುಗಿದನವಂ ವಂದಿ ಸಂದೋಹದ ಪೊಗಳ್ವೆಯಿಂದ [೪೮]|


ತ್ರಿಜಗಂ ಮರುಗುವಂತೆ ಕಾರ್ತಿಕೈಕಾದಶೀ | ಕುಜವಾರದುತ್ತರಾನಕ್ಷತ್ರದಂದು ವಾ| ರಿಜಮಿತ್ರನಸ್ತಮಯ ಸಮಯದೊಳ್ ಕೃಷ್ಣಯೆನುತರ್ಜುನನ ತಲೆ ಬೀಳಲು|| ವಿಜಯೋತ್ಸವದೊಳ್ಳೆದಿದಂ ಬಭ್ರುವಾಹನಂ | ನಿಜಪುರಕೆ ಗುಡಿ ತೋರಣದೊಳೆಸೆಯ ಬಣ್ಣಿಸಲ್ | ಪ್ರಜೆಗಳಂಗನೆಯರಾರತಿ ಪುಷ್ಪ ದಧಿ ಲಾಜ ದೂರ್ವೆಯೊಳಿದಿರ್ಗೊಳಲಲ್ಕೆ |೪೯||


ಮಿಗೆ ಜಯೋತ್ಸವದಿಂದೆ ಪೌರಜನದೊಸಗೆಯಿಂ| ಬಗೆಬಗೆಯ ಸಿಂಗರದ ಪೆ ಣ್ಗಳ ಸೊಡರ್ಗಳಿಂ| ನಗರ ಪ್ರವೇಶಮಂ ಮಾಡಿದಂ ಬಭ್ರುವಾಹನನಿತ್ತಲರಮನೆಯೊಳು || ಸೊಗಸಿಂದುಲೂಪಿ ಸಹಿತಿರುತಿರ್ದ ಚಿತ್ರಾಂಗ । ದೆಗೆ ಬಂದು ಸುದತಿಯರ್ ದೇವಿ ನೀನೇಂ ನೋಂತು | ಮಗನಂ ಪಡೆದೆಯೊ ನರನಂ ಕೊಂದು ಬರ್ಪನಾರತಿಗಳಂ ತರಿಸೆಂದರು | ೫೦ ||


ಮಾನಿನಿಯರಿಂತಾಗ ಚಿತ್ರಾಂಗದೆಗೆ ನಿನ್ನ | ಸೂನು ಕಲಿ ಪಾರ್ಥನಂ ಸಮರದೊಳ್ ಕೊಂದು ಸುಂ| ಮಾನದಿಂದೈ ತಪ್ಪನೆಂದು ಪೊಗಳಲ್ ಕೇಳಿ ಹಮ್ಮೆಸಿ ಬಿದ್ದಿಳೆಯೊಳು || ಹಾ ನಾಥ ಕೆಟ್ಟೆನಕಟೆಂದು ಕಂಬನಿಯೊಳ |  ಳ್ದಾನಾರಿ ದುಃಖಾರ್ತೆಯಾಗಲಂತಃಪುರದ | ಮೀನಾಕ್ಷಿಯ‌ರ್ ಕೂಡೆ ರೋದಿಸಲ್ ಪೆರ್ಚಿತು ವಿಷಾದರವಮರಮನೆಯೊಳು ||೫೧||


ರಾಜಾಲಯ ದ್ವಾರದೊಳ್ ತೇರನಿಳಿದು ನೀ | ರಾಜನಾದಿಗಳಿಂದಿದಿರ್ಗೊಂಬ ಸಂಭ್ರಮದ | ರಾಜವದನೆಯರೊಳಗೆ ಚಿತ್ರಾಂಗದೆಯ ಶೋಕದಿಂದಮಾರ್ತೆಯರಾಗಿರೆ || ಈ ಜಯೋತ್ಸವದೊಳಿಂತೀ ವಿಷಾದ ಧ್ವನಿ ವ। ಧೂ ಜನಕಿದೇಕೆನುತ ಪೊಕ್ಕನಂತಃಪುರವ | ನಾ ಜನನಿಯಂಗದಿರವಂ ಕಂಡು ಬೆರಗಾಗಿ ಪಾರ್ಥ ಸುತ ನಿಂತೆಂದನು ||೫೨ ||


ಅಪಜಯಂ ತನಗಾದುದಿಲ್ಲ ಸಂಗ್ರಾಮದೊಳ್ | ವಿಪರೀತಮೇತಕಿಂತಾನಂದ ಕಾಲದೊಳ್ | ಕುಪಿತ ಮುಖನಾಗಿ ತನ್ನ ಜರೆದೊಡರ್ಜುನನ ಶಿರವನರಿದೆಂ ಧುರದೊಳು || ರಿಪುಭಯಂಕರ ಕರ್ಣ ತನಯಂಗೆ ಸಂಗರದೊ | ಳುಪಹತಿಯನಿತ್ತೆಂ ಪ್ರಯಾಸದಿಂದದಕೆ ನೀಂ | ತಪಿಸಬೇಕೆಂದು ಕಣ್ಣೀರ್ದೊಡೆದು ಮಾತೆಯಂ ಸಂತೈಸಲಿಂತೆಂದಳು | ೫ ೩||


ಲೇಸು ಮಾಡಿದೆ ಮಗನೆ ಪಗೆಯಾದನೇ ನರಂ | ವಾಸಿ ಬಂದುದೆ ನಿನಗೆ ಮತ್ಕಾಂತನಳಿದನೇ | ವಾಸವನ ಸೂನು ಮೃತನಾದನೇ ಧರ್ಮಾನುಜಂ ಪ್ರಾಣಮಂ ತೊರೆದನೇ || ವಾಸುದೇವನ ಸಖಂ ಮಾಡಿದನೇ ನಿನ್ನಂತ । ದಾಸುರ ಪರಾಕ್ರಮದೊಳಾತ್ಮ ಪಿತೃ ಘಾತಮಂ । ಹೇಸದೆಸಗಿದರುಂಟೆ ಸುಡಲಿ ಸುತರೇಕೆಂದಳಲ್ದಳಾ ಚಿತ್ರಾಂಗದೆ ||೫೪||



ಈ ಕರ್ಣಸೂತ್ರಮಿಾಕರ್ಣ ತಾಟಂಕಮಾ | ಶ್ರೀಕರಂ ನಿಜ ಜನನಿಗೇಕೆಂದು ಬಿಡಿಸಿದ್ದೆ | ಸಾಕಿನ್ನು ಮಗಮೊಮ್ಮಗರಳಿದುದಂ ಕೇಳೆಂತು ಸೈರಿಪಳೊ ಕುಂತಿದೇವಿ || ಭೂಕಾಂತನೇ ಗೈದಪನೊ ಧರ್ಮರಾಜ ನವಿ ! ವೇಕದಿಂ ಬಾಳ್ವೆಗಿಡಿಸಿದೆಯೆಂದು ತನಯನಂ | ಶೋಕದಿಂ ಮಿಗೆ ಬೈದಳಲ್ವ ಚಿತ್ರಾಂಗದೆ ಗುಲೂಪಿ ಬಳಿಕಿಂತೆಂದಳು ||೫೫॥


ದೇವಿ ನಿಲ್ಲಿನ್ನು ಮರ್ಜುನನ ಮೃತಿ ಸಂಶಯಂ । ಭಾವಿಸುವೊಡೆನಗೊಂದು ಕುರುಪುಂಟು ತನ್ನ ಕೇ | ಳೀವನದೊಳಂದು ಪಾರ್ಥಂ ತನಗೆ ತೋರಿದಂ ದಾಡಿಮ ದ್ರುಮಮೈದನು || ಆವ ದಿನಕೊಣಗುವುವು ತರುಗಳಾ ದಿನಕೆನ್ನ | ಜೀವಕಳಿವಹುದೆಂದು ತಾನದಂ ನೋಡಿ ಬಹೆ | ನೀ ವಿಷಾದಂ ಬೇಡ ಸೈರಿಸೆನೆ ಕಳುಹಿದ ಳುಲೂಪಿಯಂ ಚಿತ್ರಾಂಗದೆ | ೫೬ ||


ಕ್ರೀಡಾವನಕೆ ಪೋಗಿ ನಿಮಿಷದೊಳಹೀಂದ್ರಸುತೆ | ನೋಡಿ ಬಂದಲ್ಲಿಯ ದವಾಗ್ನಿಯಿಂದಾ ಪಂಚ | ದಾಡಿಮ ದ್ರುಮಮೊಣಗಿತರ್ಜುನನ ಮೃತಿ ದಿಟಂ ನಡೆ ಪೋಪೆವಲ್ಲಿಗೆಂದು || ಪೀಡಿಸುವ ಶೋಕದಿಂ ಚಿತ್ರಾಂಗದೆಗೆ ನುಡಿಯೆ | ಕೂಡೆ ಪೊರಮ ಟ್ಟೆಲ್ಲರುಂ ರಣಕೆ ನಡೆತಂದು | ಜೋಡಾಗಿ ಬಿದ್ದಿರ್ದ ಕರ್ಣಸುತ ಪಾರ್ಥರಂ ಕಂಡಲ್ಲಿ ಕೆಡೆದಳಲ್ದರು ॥ ೫೭ ||


ಶೀತೋಷ್ಣರುಚಿಗಳಂ ಗಗನ ಗತಿಯಂ ಬಿಟ್ಟು । ಭೂತಳದ ಮೇಲೆ ರವಿ ಶಶಿಗಳೆಸೆವಂತೆ ಪುರು| ಹೂತಸುತ ಕರ್ಣಜರ ತಲೆಗಳೊಪ್ಪಿರೆ ಕಂಡುಲೂಪಿ ಚಿತ್ರಾಂಗದೆಯರು | |ಕಾತ ರಿಸಿ ಕರಗಿ ಕಂಬನಿಯೊಳಾಳ್ದಾಗ ಶೋ | ಕಾತಿಶಯದಿಂದೆ ಪಾರ್ಥನ ಪಾದದೊಳ್ ಪೊರ | ಳ್ದಾತನ ಗುಣಂಗಳಂ ಪಾಲ್ಗೊಳಿಸಿ ಬಣ್ಣಿಸಿ ಪೊರಳ್ದು ಗೋಳಿಡುತಿರ್ದರು ||೫೮||


ನಿನ್ನಂಗ ಸಂಗಮನಗಲ್ಲಾಯ್ತು, ಪಲಕಾಲ । ಮಿನ್ನೊಮ್ಮೆ ನೆರೆಯಲಾಗದೆ ನಾಥ ಮೂಜಗದೊ । ಳುನ್ನಿ ಸಲ್ ನಿನಗೆ ಪಡಿಯಹರುಂಟೆ ರೂಪ ಗುಣ ವಿಕ್ರಮ ಪ್ರೌಢಿಗಳೊಳು || ಭಿನ್ನಿಸದೆ ಕೆಚ್ಚೆದೆಯ ಸತಿಯರಾವಸುವಿಡಿದೆ | ವಿನ್ನೆಗಂ ಕೇಳೆಂತು ಪೈರಿಪರೊ ಕಾಂತನೊಳ್ | ನನ್ನಿಯುಳ್ಳರಸಿಯರ್ ದ್ರೌಪದಿ ಸುಭದ್ರೆಯರದೆಂತುಳಿವರಕಟೆಂದರು | ॥ 59||



ಅಡಿಯೊಳ್ ಪೊರ ಳ್ದು ಕಾಯವನಪ್ಪಿ ಕೈಗಳಂ | ಪಿಡಿದುರಸ್ಥಳಕೆ ತೆಗೆದೊಂದಿಸಿ ಕೊರಲ್ಗೆ ಕಡಿ | ವಡೆದ ತಲೆಯಂ ಕೂಡಿ ನೋಡಿ ಮುಂಡಾಡಿ ಪಣೆಗಿಟ್ಟು ಮೊಗಮಂ ಚುಂಬಿಸಿ || ಒಡನೊಡನೆ ಪಾರ್ಥನ ಚರಿತ್ರಮಂ ಸಾಲ್ಗೊಳಿಸಿ | ನುಡಿನುಡಿಗಳನ್ನು ಕೆಲದೊಳ್ ಕಡೆದ ಕರ್ಣಜಂ | ಗೊಡಲುರಿಯೊಳಕಟ ಸುತ ಹಾಯೆಂದು ಮರುಗಿದರುಲೂಪಿ ಚಿತ್ರಾಂಗದೆಯರು ॥|೬೦||


ಬಳಿಕ ಚಿತ್ರಾಂಗದೆ ಕುಮಾರನಂ ನೋಡಿ ಕೊಲೆ! ಗೆಳಸಿದ್ಯೆ ಜನಕಂಗೆ ಜನನಿಯರ್ ನಾವಿರ್ವ | ರುಳಿಯಲೇಕಿನ್ನ ಕಟ ವೈಧವ್ಯಮಂ ತಾಳಬಲ್ಲೆವೆ ಮಹೀತಳದೊಳು || ಸೆಳೆದು ಪೊಡೆ ಖಡ್ಗದಿಂದೆಮೀಶಿರಂಗಳಂ | ಬಳಿಕೈದೆ ಭಾರ್ಗವಂ ಕೊಂದುದಿಲ್ಲವೆ ತಾಯ | ನಳುಕದಿರ್ ಪಿತನ ಮಾತೃದ್ವಯದ ವಧೆ ನಿನಗೆ ಸಫಲವಾದಪುದೆಂದಳು || ೬೧||


ತಾಯ ಮಾತಂ ಕೇಳ್ದು ಶೋಕಕಲುಷಿತನಾಗಿ | ಪ್ರೀಯದಿಂ ಪೋಗಿ ಕಂಡೊಡೆ ತನುಜನಲ್ಲೆಂದು | ನೋಯೆ ನುಡಿದಾಹವಂ ಬೇಕೆಂದೊಡೀತನಂ ಕೊಂದೆ ನಾಂ ಪಂತವೆಂದು || ದಾಯತಪ್ಪಿದ ಬಳಿಕ ಪೇಳ್ಕೊಡೇನಹುದಿನ್ನು | ಹೇಯಮಾದುದು ತನ್ನ ಬಾ ಳ್ವೆ ಪಿತೃವಧೆಯೊಳೀ| ಕಾಯಮಂ ಬಿಡುವೆನೀಗಲೆ ನೋಳ್ಪುದೆಂದವಂ ಕಿಚ್ಚುವುಗಲನುವಾದನು | ೬೨ ||


ತಂದೆಯಂ ಕೊಂದುಳಿದನೆಂದು ಲೋಕದ ಜನಂ । ನಿಂದಿಸದೆ ಬಿಡದಿದಕೆ ನಿಷ್ಕೃತಿಗಳಂ ಕಾ ಣೆ | ನೊಂದು ಮಂತ್ರಧ್ಯಾನ ಜಪ ತೀರ್ಥ ಯಾಗ ಯೋಗಂಗಳಿಂ ಕಳೆದುಕೊಳಲು || ಸಂದಿಗ್ಧವಾಗಿರ್ದ ಪಾತಕಂ ಪೋಪುದು ಮು | ಕುಂದ ಸ್ಮ ರಣೆಯಿಂದಮರ್ಜುನಂ ವೈಷ್ಣವಂ | ಬಂದುದಪಕೀರ್ತಿ ನಾಂ ನಾಚದೆಂತಿರ್ದಪೆಂ ಪುಗುವೆನಗ್ನಿಯೊಳೆಂದನು |೬೩ ||


ಅನಲಪ್ರವೇಶಮಂ ನಿಶ್ಚಯಿಸಿ ಬಭ್ರುವಾ | ಹನನಗುರು ಚಂದನದ ಕಾ ಷ್ಠಂಗಳಂ ತರಿಸು | ವನಿತ ರೊಳ್ ಕಂಡು ಚಿತ್ರಾಂಗದೆ ಕನಲ್ದುಸುತನಂ ಬೈದು ಫಲುಗುಣಂಗೆ || ವನಜನಾಭಂ ಮಿತ್ರನ್ನೆಗಂ ಮನದೊಳಂ | ದನುಪಮ ಕೃಪಾಳು ತಾನಿಲ್ಲಿ ಗೈದದೆ ಮಾ ಣ್ದ| ಪನೆ ಸೈರಿಸನ್ನೆಗಂ ನರನ ಜೀವಕ್ಕೆ ಪೊಣೆ ದೇವಪುರ ಲಕ್ಷ್ಮೀಶನು||೬೪||





ಜೈಮಿನಿ ಭಾರತ 46

ಇಪ್ಪತ್ತನಾಲ್ಕನೆಯ ಸಂಧಿ ಮೊದಲ ಭಾಗ

ಪದ್ಯ 1 ರಿಂದ 30

ಪುಂಡರೀಕನ  ಪ್ರಸಂಗ

ನಿರೂಪಣೆ: ಸುಬ್ಬುಲಕ್ಷ್ಮಿ Lrphks Kolar


ಸಂಕ್ಷಿಪ್ತ ರೂಪ


ಚಿತ್ರಾಂಗದೆಯು ಬಭ್ರುವಾಹನನನ್ನು ಅಗ್ನಿ ಪ್ರವೇಶದಿಂದ ತಡೆದಳು. ಆಗ ಅವಳ ಸೋದರಿ ಉಲೂಪಿಯು ಇದಕ್ಕೊಂದು ಉಪಾಯವಿದೆಯೆಂದು ಸೂಚಿಸಿದಳು. ಹಿಂದೆ ಶಿವ ತನ್ನ ತಂದೆಗೆ ಇತ್ತ ಸಂಜೀವಮಣಿಯು ಸತ್ತವರನ್ನು ಬದುಕಿಸಬಲ್ಲದು. ತಕ್ಷಣ ಅವನು ತಾನು ಅದನ್ನು ತರುವೆನು. ನನ್ನ ಪರಾಕ್ರಮದಿಂದ ಎಂದು ಹೇಳುವನು. ಅದಕ್ಕೆ ಅವಳು ಅವನನ್ನು ತಡೆದು ಇಲ್ಲಿ ಪರಾಕ್ರಮವಲ್ಲ. ವಿನಯ ಮುಖ್ಯವೆಂದು ಒಡಂಬಡಿಸಿ ತನ್ನ ಪರಿಚಿತನಾದ ಪುಂಡರೀಕ ಎಂಬುವನನ್ನು ಬರಮಾಡಿಕೊಂಡು ಅವನಿಗೆ ಎಲ್ಲಾ ವಿಷಯ ತಿಳಿಸಿ ಆ ಮಣಿಯನ್ನು ತರಲು ಕೇಳಿಕೊಂಡಳು. ಆಗ ಅವನು ಆಗಲಿ ಎಂದು ಅಲ್ಲಿಯವರೆಗೆ ಇವರ ದೇಹಗಳು ಕೆಡದಿರಲೆಂದು ಕರ್ಣತನಯ ಮತ್ತು ಅರ್ಜುನರ ದೇಹವನ್ನು ಕಚ್ಚಿ ನೋಡಿಕೊಳ್ಳಲು ಹೇಳಿ ಹೊರಟನು. ಉಲೂಪಿಯು ತನ್ನ ಕಿವಿಯ ಓಲೆಗಳನ್ನೂ ಕಂಠಾಭರಣವನ್ನೂ ಗುರುತಿಗಾಗಿ ಕೊಟ್ಟು ಕಳಿಸಿದಳು.



ಅತಲ, ವಿತಲ ಸುತಲ, ಮಹಾತಲ, ತಳಾತಳ ರಸಾತಳಗಳ ವೈಭವವನ್ನು ನೋಡುತ್ತಾ ಆಶ್ಚರ್ಯ ಪಡುತ್ತಾ ಪಾತಾಳಲೋಕಕ್ಕೆ ನಡತಂದನು ಪುಂಡರೀಕ. ಅಲ್ಲಿನ ರತ್ನಗಳ ವೈಭವ ನಾಗವಧೂಗಳ ಗಾನ ಸೌಂದರ್ಯ, ಬೀದಿಗಳು ಮಹಲುಗಳ ವೈಭವ ಎಲ್ಲ ನೋಡುತ್ತ ಒಡ್ಡೋಲಗಕ್ಕೆ ಬಂದು ಸಮಯವರಿತು ಅರಸನನ್ನು ಕಂಡು ಎಲ್ಲ ವಿಷಯವನ್ನು ವಿವರಿಸಿ ಅವನ ಮಗಳ ಆಭರಣಗಳನ್ನು ಕೊಟ್ಟನು.


 ಜಾಹ್ನವಿಯ ಶಾಪದಿಂದ ಸತ್ತು ಬಿದ್ದಿರುವ ಅರ್ಜುನ ಮತ್ತಿತರರನ್ನು ಬದುಕಿಸಲು ಸಂಜೀವಮಣಿಯನ್ನು ಕೊಡಬೇಕೆಂದು ಪ್ರಾರ್ಥಿಸಿದನು. ಅಂತಹವರಿಗೆ ಉಪಕಾರ ಮಾಡುವುದರಿಂದ ನಿನ್ನ ಗೌರವ ಹೆಚ್ಚುತ್ತದೆ ಎಂದನು. 


ಫಣಿರಾಜನು ಇದನ್ನು ಒಪ್ಪಿದನು. ಅರ್ಜುನನು ಕೃಷ್ಣನ ಭಕ್ತ. ಪರಾಕ್ರಮಿ. ತನ್ನ ಅಳಿಯನೂ ಹೌದು. ಮಣಿಯನ್ನು ಕೊಡುವುದರಲ್ಲಿ ಲೋಪವೇನಿದೆ ಎಂದು ಚಿಂತಿಸಿದನು.

ಇದನ್ನು ಕೇಳಿ ತಮ್ಮತಮ್ಮಲ್ಲಿ ಚಿಂತಿಸಿ  ಕೊನೆಗೆ ಧೃತರಾಷ್ಟ್ರ ಎಂಬುವನು ರಾಜನಿಗೆ ಮಾನವರು ಮೋಸಗಾರರು. ಖೂಳರು. ಕೃತಘ್ನರು. ಇದನ್ನು ಅವರಿಗೆ ಕೊಟ್ಟರೆ ಮರಳಿ ಬರುವುದು ಸಂದೇಹ. ರಾಜನು ಎಲ್ಲೆಡೆಯೂ ನಿನ್ನಂತಹವರು ಇದ್ದೇ ಇರುತ್ತಾರೆ. ಕಷ್ಟದಿಂದಬೇಡಿದೃ ಕೊಡದಿರಲಾಗುವುದೆ? ಕಿರೀಟಿಗೆ ಇದನ್ನು ಕೊಡುವೆನೆನಲು ಧೃತರಾಷ್ಟ್ರ ಒಪ್ಪಲಿಲ್ಲ.ಸಾವು ಎಲ್ಲರಿಗೂ ತಪ್ಪಿದ್ದಲ್ಲ. ಒಂದಲ್ಲ ಒಂದು ದಿನ ಅರ್ಜುನನು ಸಾಯುತ್ತಾನಲ್ಲವೆ? 

 ರಾಜನು ತಾವು ಮಣಿಯನ್ನು ಕೊಡದಿದ್ದರೂ ಕೃಷ್ಣನು ಅರ್ಜುನನನ್ನು ಉಳಿಸಿಕೊಳ್ಳುತ್ತಾನೆ. ಸಂದೇಹವಿಲ್ಲ. ಆದರೆ ನಾವು ಕೊಟ್ಟರೆ ಗೌರವವುಂಟು ಎನ್ನಲು ಧೃತರಾಷ್ಟ್ರ ನು ಹಾಗೇ ಆಗಲಿ. ವಾಸುದೇವನೇ ಅವನನ್ನು ಉಳಿಸಿಕೊಳ್ಳಲಿ. ನೀನು ಮಣಿಯನ್ನು ಕೊಟ್ಟು ನಮ್ಮನ್ನು ಕೆಡಿಸಬೇಡ. ಪುಂಡರೀಕನನ್ನು ತಿರುಗಿ ಕಳಿಸು ಎನ್ನಲು ಕೊನೆಗೆ ಒಪ್ಪಿದ ಫಣಿರಾಜನು ಮಂತ್ರಿಗಳು, ಪ್ರಜೆಗಳ ಮಾತನ್ನು ಮೀರಲಾರೆನು. ನೀನು ವಾಪಸಾಗು ಎನ್ನಲು ಅದರಂತೆ ಪುಂಡರೀಕನು ಎಲ್ಲರೂ ಕಾಯುತ್ತಿದ್ದ ರಣಭೂಮಿಗೆ ಬಂದು ಎಲ್ಲ ವಿಷಯ ತಿಳಿಸುತ್ತಾನೆ.


 ಬಭ್ರುವಾಹನನಿಗೆ ಕೋಪ ಉಕ್ಕುತ್ತದೆ. ಚಿತ್ರಾಂಗದೆ ಅಗ್ನಿಪ್ರವೇಶ ಮಾಡುವೆನೆನ್ನುತ್ತಾಳೆ. ಆಗ ಮಗನು ಅವಳನ್ನು ತಡೆದು ಯಾರೇ ಎದುರಾದರೂ ಬಿಡದೆ ಅವರ ಹಣೆಬರಹ ಅಳಿಸಿಯಾದರೂ ಸರಿ ನಾನು ಸಂಜೀವಮಣಿ ತರುತ್ತೇನೆಂದೂ ಅಲ್ಲಿಯವರೆಗೆ ಇವರ ದೇಹಗಳನ್ನು ಕಾಪಾಡಿಕೊಂಡಿರಬೇಕೆಂದೂ ಹೇಳಿ ಸೈನ್ಯವನ್ನು ಸಜ್ಜುಗೊಳ್ಳಲು ತಿಳಿಸುತ್ತಾನೆ. ಇದನ್ನು ತಿಳಿದ ಫಣಿರಾಜನು ಧೃತರಾಷ್ಟ್ರನನ್ನು ಬಯ್ದು ಫಣಿಗಳನ್ನು ಯುದ್ಧವನ್ನು ಎದುರಿಸಲು ಹೇಳುತ್ತಾನೆ.


ಇಪ್ಪತ್ತುನಾಲ್ಕನೆಯ ಸಂಧಿ ಮೊದಲ ಭಾಗ

ಪದ್ಯ 1 ರಿಂದ 30


ಸೂಚನೆ | ಪತ್ನಿಯರ ದೆಸೆಯಿಂದ ಮಡಿದಿರ್ದ ಪಾರ್ಥ೦ ಪ್ರ | ಯತ್ನದಿಂ ನಿಜಸುತಂ ತಂದ ಸಂಜೀವಕದ | ರತ್ನದಿಂ ಕೃಷ್ಣಪ್ರಸಾದದಿಂ ಜೀವಿಸಿದನುರ್ವಿಗಾಶ್ವರ್ಯಮೆನಲು |


ರಾಯ ಕೇಳ ಲ್ಲಿಗಸುರಾಂತಕಂ ಬಂದು ಕೌಂ | ತೇಯನಂ ನೋಡದಿರನನ್ನೆಗಂ ಸೈರಿಪುದು | ಪಾಯಮುಳ್ಕೊಡೆ ನರನ ಜೀವಮಂ ಪಡೆವುದಿಂತಗ್ನಿ ಪ್ರವೇಶದಿಂದ || ಸಾಯಲೇನಹುದೆಂದಳಲ್ದು ಸುತನಂ ಬೈದು | ಬಾಯಾರಿ ಚೀರಿ ಚಿತ್ರಾಂಗದೆ ಹಲುಬಲೊಂದು | ಪಾಯಮಂ ಕಂಡು ನುಡಿದಳ್ ಪನ್ನಗೇಂದ್ರ ಸಂಭವೆ ಬಭ್ರುವಾಹನಂಗೆ||೧||


ಮಗನೆ ಮಡಿದರ್ಜುನಂ ಮಗುಳೇ ಳ್ವತೆರನಂ ನಿ । ನಗೆ ಪೇಳ್ವೆ ನಾನೀಗ ಪಾತಾಳ ಲೋಕದೊಳ್ | ಖಗರಾಜನೊರಸಿದಹಿ ನಿಕರದಸು ಮರಳ್ವಂತೆ ಫಣಿವರಂ ಬೇಡಿಕೊಳಲು || ಅಗಜಾರಮಣನಿತ್ತ ಸಂಜೀವಕದ ಮಣಿಯು | ರಗಪತಿಯೊಳಿಹುದದಂ ಸತ್ವದಿಂ ತರಬಲ್ಲ | ವಿಗಡರಂ ಕಾಣೆನೀ ಮೂಜಗದೊಳೆನೆ ಬಭ್ರುವಾಹನಂ ಖತಿಗೊಂಡನು ||೨||


ಸಂಜೀವಕದ ಮಣಿಯನೀಗ ತಾರದೊಡೆ ತ | ನ್ನಂ ಜನನಿ ಪೆತ್ತಳೇತಕೆ ಮತ್ತೆ ಮಡಿದಿಹ ಧ | ನಂಜಯನ ಹರಣಮಂ ಪಡೆವೆ ನವನೀಯದೊಡೆ ಫಣಿಲೋಕಮಂ ಸುಡುವೆನು|| ಕಂಜಜ ಕಪರ್ದಿಗಳೊಳ್ ತೊಡಕಿದೊಡೊರ ಲ್ಚು ವೆಂ | ಭಂಜಿಸುವೆನಖಿಳ ದಿಕ್ಷಾಲರಂ ಸೆಣಸಿದೊಡೆ | ಸಂಜಾತನಾದುದಕೆ ಸಫಲವಾಯ್ತೆ ನುತುಬ್ಬಿದಂ ಬಭ್ರುವಾಹನಂದು||೩||


ಮರುಳಾಟಮೇಕೆ ನಿನ್ನ ದಟು ಕೊಳ್ಳದು ಮಗನೆ | ಗರಳಮಯದುರಿಯೊಳೆವೆ ಸೀವುದು ಕಣಾ ನೋಡ | ಲುರಗಪತಿ ಶೇಷರಾಜನ ಕೋಶದೆಡೆಯೊಳಿಹ ಸಂಜೀವಕದ ಮಣಿಯನು || ತರಬಲ್ಲನಾವವಂ ಗುಳಿಕ ವಾಸುಕಿ ತಕ್ಷ | ಕರ ಶಂಖ ಪದ್ಮ ಕರ್ಕೋಟಕಾದಿಗಳ ಭೀ | ಕರ ವಿಷೋತ್ಕರದಿಂದೆ ಕಾಹು ಬಲಿದಿಹುದೆನಲುಲೂಪಿಗವ ನಿಂತೆಂದನು||


ಈ ಮಹಾಹಿಗಳ ವಿಷಕಳಕುವೆನೆ ಯೆನ್ನ ಮಾ | ತಾಮಹಂ ಹರಿಗೆ ಹಾಸಿಗೆಯಾದವಂ ಮೇಲೆ | ಭೂಮಿಯಂ ಪೊತ್ಸವಂ ಶೇಷರಾಜಂ ಗಾಸಿಯಹನೆಂಬ ಭಯವಲ್ಲದೆ ॥ ಆ ಮಣಿಯನೀಯದೊಡೆ ಸಪ್ತಪಾತಾಳಮಂ | ಸಾಮರ್ಥ್ಯದಿಂದ ಭೇದಿಸಿಕೊಂಡು ಬಂದು ಸು | ತ್ರಾಮಸುತನಂ ಬರ್ದುಕಿಸದೆ ಮಾಣ್ಣ ಪೆನೆ ತಾಯೆ ಹೇಳೆಂದೊಡಿಂತೆಂದಳು ||೫||


ಒಂದು ಮೊದಲೊಂಬತ್ತು ನೂರು ಕಡೆಯಾದ ಪೆಡೆ | ಯಿಂದೆಸೆವ ನಾಗಂಗಳತಿ ವಿಷಷೋಲ್ಬಣದುರಗ | ವೃಂದ ವೋಲೈಸುವುದು ಸಾಸಿರ ಮೊಗದ ಶೇಷರಾಜನಂ ಪಾತಾಳದ || ಮಂದಿರದೊಳೊಮ್ಮೊಮ್ಮೆ ಗರುಡನಲ್ಲಿಗೆ ಬಂದು | ಕೊಂದಹಿಗಳಂ ಬರ್ದುಕಿಪೊಡೆ ತೋರಿಸುವರಲ್ಲ | ದೆಂದುಂ ತೆಗೆಯರಾ ಮಣಿಯನೆಂದುಲೂಪಿ ನುಡಿಯಲ್ಕಾತ ನಿಂತೆಂದನು ॥ ೬||


ಲೇಸನಾಡಿದೆ ತಾಯೆ ಪಾತಾಳದಲ್ಲಿಹ ಮ | ಹಾಸರ್ಪ ಸಂಕುಳವನೆಲ್ಲಮಂ ಕೊಂದಳಿದ | ವಾಸವನ ಸುತನಂ ಮಡಿದ ವೀರವೃಷಕೇತುವಂ ಬಿದ್ದ ಸೈನಿಕವನು || ಆ ಸುಮಣಿಯಂ ಕೊಂಡು ಬಂದೆಬ್ಬಿಸಿದ ಬಳಿಕ |  ಮೀಸಲಾಗಿರ್ದ ಸಂಜೀವಕವನೀವೆಂ ಗ | ತಾಸುವಾಗಿರ್ದ ಫಣಿಗಳೆಂದು ಪಾರ್ಥಜಂ ನುಡಿದೊಡವಳಿಂತೆಂದಳು. ||೭||


ತನಯ ಕೇಳನ್ಯರೊಳ್ ಕೊ ಳ್ವಕಜ್ಜದ ಮಾಳ್ಕೆ | ವಿನಯದಿಂದೆಸಗಿದೊಡೆ ಸಲೆ ಸುಗುಣಮಾದಪುದು | ಮೊನೆಯ ಮೇಲಪ್ಪುದಾಯಾಸಮಂತದರಿಂದ ನೀನತಿಕ್ರಮಿಸಬೇಡ || ತನಗುಂಟು ಕೆಳೆ ಪುಂಡರೀಕನೆಂಬಹಿಯೊರ್ವ | ನನುಕೂಲನೆಮ್ಮ ತಂದೆಗೆ ಮಂತ್ರಿ ತಾನೀಗ | ನೆನೆದೊಡಿಲ್ಲಿಗೆ ಬರ್ಪನಾತನಂ ಕಳುಹಿ ತರಿಸುವೆನಾ ಮಣಿಯನೆಂದಳು || ೮ ||


ಇಂತೆಂದುಲೂಪಿ ಬಳಿಕಾ ಪುಂಡರೀಕನಂ | ಚಿಂತಿಸುವಿನಂ ಬಂದಿದೇಕೆ ಬರಿಸಿದೆಯೆನಲ | ನಂತನಲ್ಲಿಗೆ ಪೋಗಿ ನಿನ್ನ ತನುಜೆಯ ಕರ್ಣ ತಾಟಂಕದುಳಿವಿಗಳಿದ || ಕುಂತೀಕುಮಾರಕಂ ತನ್ನ ರಮಣಂ ಬರ್ದುಕು | ವಂತಮೃತ ಸಂಜೀವಕದ ಮಣಿಯನೀವುದೆಂ । ದಂತರಿಸದಖಿಳ ವೃತ್ತಾಂತಮಂ ಪೇಳದಂ ಕೊಂಡು ಬಾ ನಡೆಯೆಂದಳು || ೯ ||


ಆ ಪುಂಡರೀಕ ಫಣಿ ಬಳಿಕ ದುಃಖತೆಯಾದು | ಲೂಪಿಯಂ ಸೈತಿಟ್ಟು ಸಂಜೀವಕದ ಮಣಿಗೆ | ಪೋಪೆನಾ ನಹಿಪತಿಯ ಸಮಯಮಂ ಕಾಣ್ಣು ದರಿದಲಿ ತಳುವಾಗದಿರದು|| ಈ ಪಾರ್ಥನಂಗ ಕಳವಾಗದಿರದನ್ನೆ ಗಂ | ರೂಪು ಕೆಡದಂತೆ ಕಚ್ಚುವೆನೀಗ ಮದ್ವಿಷಂ | ವ್ಯಾಪಿಸಲೊಡಲ್ ಕಳಲದೆನೆ ಬಭ್ರುವಾಹನಂ ಕೇ ಳ್ದು ಮತ್ತಿಂತೆಂದನು ||೧೦||


ಎಲೆ ಪುಂಡರೀಕ ಕೇ ಳೀ ಕರ್ಣಸಂಭವಂ | ಕಲಿ ಚೆಲ್ವನತಿಬಲಂ ಶುಚಿ ಸುಗುಣಿ ಕೋವಿದಂ। ಕುಲವರ್ಧನೀತನಂಗಮಂ ಕೆಡದಂತೆ ಮೊದಲೆ ನೀ ಕಚ್ಚಿ ಬಳಿಕ ಫಲುಗುಣನ ದೇಹಮಂ ಕಚ್ಚೆನಲೊಡರ್ಚಿ ಫಣಿ | ತಿಲಕನವರಿರ್ವರ ಶರೀರಂಗಳಂ ಕಚ್ಚಿ | ನೆಲೆ ಸಂತವಿಟ್ಟು ನಂಬುಗೆಗೊಟ್ಟು ಬೀಳ್ಕೊಂಡು ಪಾತಾಳಕ್ಕೆ ತಂದನು |೧~||


ಆತಳದಾಶ್ಚರ್ಯಮಂ ವಿತಳದ ವಿಚಿತ್ರಮಂ | ಸುತಳದ ಸುರುಚಿಯಂ ಮಹಾತಳದ ಮಣಿಯೋ |  ನ್ನತಿಯಂ ತಳಾತಳದ ತಾಣದತಿಶಯಮಂ ರಸಾತಳದ ರಂಜಿತವನು | |ಪ್ರತಿದಿನದೊಳರಿದರಿಯುತಾ ಪುಂಡರೀಕಫ ಣಿ | ಪತಿ ನೋಡಿ ನೋಡಿ ವಿಸ್ಮಿತನಾಗುತೈದಿದಂ | ವಿತತ ರತ್ನ ಪ್ರಭಾ ಶೋಭಿತದ ಪಾತಾಳಲೋಕದಹಿರಾಜನೆಡೆಗೆ||೧೨||


ಫಲಿತ ಕಾಂಚನ ವೃಕ್ಷಲತೆಗಳ ಬನಂಗಳಿಂ | ಜ್ವಲಿತ ನವರತ್ನ ಸೌಧಂಗಳ ಪುರಂಗಳಿಂ | ಕಲಿತ ಪೀಯೂಷ  ದೀರ್ಘಿಕೆಗಳಿಂ ಕನಕಾರವಿಂದದ ಕೊಳಂಗಳಿಂದದೆ || ಲಲಿತ ಲಾವಣ್ಯದುರಗಾಂಗನೆಯರಿಂ ಸಮಾ | ಕುಲಿತವಾಗಿಹ ಭೋಗವತಿಯ ನದಿಯಿಂದ ನಿ। ಶೈಲಿತ ಸುಖನಿಲಯಮೆನಿಸಿರ್ದ ಪಾತಾಳಕ್ಕೆ ಪುಂಡರೀಕಂ ಬಂದನು |೧೩||


ನವರತ್ನ ಮಯದ ಗೋಪುರದ ಕಾಂತಿಯ ದಿವ್ಯ | ಭವನದಿಂ ನಾಗ ವಧುಗಳ ನೃತ್ತಗೀತದು | ತ್ಸವದಿಂದ ಪುಣ್ಯ ಗಂಥೋತ್ಕರದ ಪದ್ಮವನ ಪುಷ್ಪವಾಟಿಕೆಗಳಿಂದೆ || ವಿವಿಧೋಪಚಾರ ಕೃತಪೂಜೆಗಳ ನಾನಾ ವಿ | ಭವದಿಂದೆಸೆವ ಮಹಾ ಹಾಟಕೇಶ್ವರನೆಂಬ | ಶಿವಲಿಂಗಮಿರೆ ಭೋಗವತಿಯ ತಟದೊಳ್ ಕಂಡು ಪುಂಡರೀಕಂ ಮಣಿದನು||೧೧೪||


ದಿವ್ಯಭವನದೊಳನೇಕಾಸುರ ಸುರಾದಿ ವಿಖಿ| ಳ ವ್ಯಾಳೆ ವೃತನಾಗಿ ವರ ಫಣಾಮಣಿ ಸಹ | ಸ್ರವ್ಯೂಹದರ್ಚಿಯಿಂದುರು ಕಾಯಕಾಂತಿಯಿಂ ವೇದಿಪ್ಯಮಾನವಾಗಿ || ಅವ್ಯಾಕುಲದೊಳಚ್ಯುತ ಧ್ಯಾನದಿಂದೆ ಕ | ರ್ತವ್ಯದಿಂದ ನಿಜಾಂ ತಾಳನರ್ಘೋತ್ತಮ/ದ್ರವ್ಯಕಧಿಪತಿಯಾಗಿ ರಂಜಿಸುವ ಶೇಪನೋಲಗಕುರುಗ  ನೈತಂದನು||೧೫||


ಪುಂಡರೀಕಂ  ಸಮಯಮರಿದುರೆಗೆ ರಾಜನಂ| ಕಂಡೆರಗಿ ನುಡಿದನಾಧರಿಸಿರೆ ವಣೇಂದ್ರ ಭೂ । ಮಂಡಲದ ರಾಯರೊಳ್ ಪಾಂಡುಸುತ ಕೌರವರ್ಗದುವಾಹವಮದರೊಳು || ದಿಂಡುವರಿದಷಿತರು ಭೀಷ್ಮನಂ ಕೊಂದನಾ | ಖಂಡಲಾತ್ಮ ಜನದರ ಪಾತಕಕೆ ವ ನೃವತಿ ಕೈ! ಕೊಂಡನಚ್ಯುತನಾಜ್ಞೆಯಿಂ ಕ್ರತುವನಾಯ್ತು ಗಂಗಾಶಾಪಮರ್ಜುನಂಗೆ ||೧೬||


ಆ ಜಾಹ್ನವಿಯ ಶಾಪದಿಂ ಬಭ್ರುವಾಹ ನಂ । ವಾಜಿನಹಿತೈದಿದ ಧನಂಜಯನ ತಲೆಯಿಂ ಮ ಹಾಜಿಯೊಳ್ ತರಿದಯೆ ಪತಿತೋಕಮಂ ತಾಳಲಾರದೆ ನಿನ್ನ ಮಗಳುಲೂಪಿ | ತೇಜದಿಂದೆಸೆವ ಸಂಜೀವಕದ ಮಣಿಯಂ ಪ್ರ| ಯೋಜನಕೆ ತಹುದೆಂದು ಕಳು ಹಿದೊಡೆ ಬಂದೆನೀ |ವ್ಯಾಜದಿಂದೆ ನೋಡೆನುತೆ ಕೊಟ್ಟ ನವಳ ಕುರಹಂ ಪನ್ನ ಗೇಶ್ವರಂಗೆ ||೧೭||


ಆ ಪುಂಡರೀಕನಿಂತೆಂದುರಗ ರಾಜಂಗು | ಲೂಪಿ ಕಳುಸಿದ ಕರ್ಣಕಂಠ ಭೂಷಣದ ಸ್ವ| ರೂಪಮಂ ಮುಂದಿರಿಸಿ ನಿನ್ನ ವಿಜ ಜಾಮಾತನರ್ಜುನಂ ಸುಜನನಿಳೆಗೆ || ಶ್ರೀಪತಿಯ ಸಖನಿಂದ್ರ ಸೂನು ಧರ್ಮಾನುಜಂ ಭೂಪಾಲರೊಳ್' ಪೆಸರ್ವಡೆದವಂ ಜೀವಿಸೆ ಪ | ರೋಪಕಾರಂ ಪೊಲ್ಲಮಲ್ಲ ನಿನಗದರಿಂದ ಕುಡುವುದು ಮಣಿಯನೆಂದನು |೧೮)|


ಶೇಷರಾಜಂ ಬಳಿಕ ತನ್ನ ತಮಜೆಯ ಕರ್ಣ | ಭೂಷಣವನಾ ಕಂಠಸೂತ್ರಮಂ ಕಂಡು ಸಂ | ತೋಪವರ್ಜಿತನಾಗಿ ಪೊರೆಯೊಳಿಹ ತಕ್ಷಕಾದ್ಯಹಿವತಿಗಳಂ ನೋಡುತೆ || ದೋಪಮೇನಿದಕೆ ಮಣಿಯಂ ಕುಡುವೆವೈ ಸಲೆ  ವಿ। ಶೇಷ ಫಲಮಹುದಾರ್ಜಿಸಿದ ವಸ್ತು ಲೋಗರಭಿ | ಲಾಷೆ ಗಾದೊಡೆ ಪಾರ್ಥನುತ್ತಮಂ ವೈಷ್ಣವ ಜಾಮಾತನೆ ಮಾಗೆಂದನು |೧೯||


ಕೇಳಿ ದುಮ್ಮಾನದಿಂ ತಮತಮಗೆ ನಿಖಿಳ ಸ | ರ್ಪಾಳಿ ಚಿಂತಿಸೆ ಬಳಿಕ ಧೃತರಾಷ್ಟ್ರನೆಂಬ ದು | ರ್ವ್ಯಾಳಪತಿ ನುಡಿದನೆಲೆ ನಾಗೇಂದ್ರ ತಮ್ಮ ವಸರಕ್ಕೆ ಬೇಹುರದನ ನ್ಯರ || ವೇಳೆಗಿತ್ತೊಡೆ ಮರಳಿ ಬಂದಪುದೆ ಮಾನವರ್ | ಖೂಳರ್ ಕೃತಘ್ನ ರುಪಕಾರಮಂ ಬಲ್ಲರೆ ವೃ | ಥಾಳೋಚನೆಗಳೇತಕಿದಕೆ ಮಣಿಯಂ ಕುಡದಿರೆನೆ ಫಣಿಪನಿಂತೆಂದನು | ೨೦ ||


ನಾಡೊಳೂರೊಳ್ ಮನೆಯೊಳೋರೋರ್ವರುಂಟು ಪರ | ಪೀಡೆಗಳುಕದೆ ವಕ್ರಗತಿಯಿಂದೆ ನಡೆವ ಕಡು | ಗೇಡಿಗರ್‌ ನಿನ್ನಂತೆ ಶಿವಶಿವಾ ಪ್ರಾಣಿಗಳ್ ದುಃಖಾರ್ತರಾಗಿ ಬಂದು || ಬೇಡಿದೊಡೆ ತನಗುಳ್ಳ ವಸ್ತುವಂ ಕುಡದೆ ಕೆಡೆ | ನೋಡುವವನಧಿಕನೆ ದಧೀಚಿ ಶಿಬಿಗಳ ಮಾಲೆ | ಜೋಡಿಯಾದುದೆ ಮಣಿವೆಂ ಕಿರೀಟಿಗೆನೆ ಧೃತರಾಷ್ಟ್ರನಿಂತೆಂದನು |೨೧||


ಹೇಳಿದಂತಿರದು ಪುರುಷಾರ್ಥಮಂ ನೋಡಿದೊಡೆ | ಕಾಳಹುದು ನಾಗಲೋಕದ ಬಾಳಳ್ವೆ ಮೀರಿ ಪಾ | ತಾಳಕೆ ಮತಂಗ ಋಷಿಶಾಪದಿಂ ಬಾರನೈಸಲೆ ಗರುಡನಿಳೆಯಮೇಲೆ || ತಾಳಬಲ್ಲನೆ ನಮ್ಮ ರತ್ನ ಮಂ ಕಂಡು ನರ | ರಾಳಿಕೆಗಳಲ್ಪ ಕಾಲಂಗಳಿಂದುಳಿದೊಡಂ | ನಾಳೆ ಪಾಂಡವನಳಿಯದಿರ್ದಪನೆ ಮಣಿಯಂ ಕುಡದಿರ ಲ್ಕಿಂತೆಂದನು | ೨೨ ||


ಕಷ್ಟ ದಿಂದಾವು ಮಣಿಯಂ ಕುಡದೆ ಮಾಣ್ದೊಡೇಂ । ನಷ್ಟ ಮಾದಪುದೆ ಪಾರ್ಥನ ಜೀವನಸುರಾರಿ | ಯಪ್ಪನಲ್ಲವೆ ಪಾಂಡವಪ್ರಾಣನಾಗಿರ್ಪನಂತಲ್ಲ ದಾನತರ್ಗೆ || ಸ್ಪಷ್ಟದಿಂ ಕೃಷ್ಣ ಕಾರುಣ್ಯಸಂಜೀವನಂ | ದೃಷ್ಟವಾಗಿರಲಿದರ ಹಂಗದೇತಕೆ ನೀನ | ರಿಪ್ಪನಾಗದಿರಿನ್ನು ಮಿಗಿಸಿಕೊಟ್ಟೆವು ಲೇಸನೆಂದೊಡವನಿಂತೆಂದನು | ೨೩ ||


ಉರಗೇಂದ್ರ ನೀನಾಡಿದವೊಲೆಂತುಮರ್ಜುನಂ | ಮುರಹರನ ಕರುಣದಿಂ ಸಪ್ರಾಣನಪ್ಪನದ | ಕುರುತರದ ಸಂಜೀವಕದ ಮಣಿಯನಿತ್ತು ನಮ್ಮೆಲ್ಲರಂ ಕೆಡಿಸಬೇಡ || ಗರುಡದೇವನ ಹಾವಳಿಗೆ ಜೋಕೆಯಾಗಿರಲಿ | ತಿರುಗಿ ಕಳುಹಿಸು ಪುಂಡರೀಕನಂ ತವಸುತೆಯ | ಪೊರೆಗೆಂದು ಧೃತರಾಷ್ಟ್ರನೆನಲೊಪ್ಪಿ ನಿಖಿಳ ಸರ್ಪಾಳಿ ಗರ್ಜಿಸುತಿರ್ದುದು |೨೪||


ಭೂಪಾಲ ಕೇಳ್ ದೊರೆಗಳೊಲಿದೀವ ಕಜ್ಜಂ ಸಂ।  ಮೀಪದ ದುರಾತ್ಮರಿಂ ಕೆಡದೆ ಮಾಣ್ಯಪುದೆ ಹೇ | ಳಾಪನ್ನಗೇಶ್ವರಂ ದೃತರಾಷ್ಟ್ರನೆಂದ ಮಾತಿನ ಮೇಲೆ ಖಿನ್ನನಾಗಿ || ಆ ಪುಂಡರೀಕನಂ ಕರೆದು ಕುಡಲೀಸರ್‌ ಪ | ರೋಪಕಾರಕೆ ಮಣಿಯನ್ನೀ ಫಣಿಗಳಿಂತೆಂದು | ಲೂಪಿಗರಿಪೆಂದು ಕಳುಹಿದೊಡಮಂ ನರನಳಿದ ರಣಭೂಮಿಗೈತಂದನು ॥೨೫||


ಚಂದನದ ತೈಲದಿಂದುರಿವ ಬೊಂಬಾಳಂಗ ಳಿಂದೆ ಕರ್ಪೂರದ ಸೊಡರ್ಗಳಿಂ ಮಣಿಲೀಪ | ದಿಂದಿರುಳ್ ಕಂಗೊಳಿಸುತಿರೆ ಬಭ್ರುವಾಹನಂ ಮಂದಿಸಹಿತಾ ರಣದೊಳು || ನಿಂದಿರಲುಲೂಪಿ ಚಿತ್ರಾಂಗದೆಯರಮರೇಂದ್ರ | ನಂದನನ ಬಳಿಯ ಸಂಜೀವಕದ ರತ್ನಮಂ | ದಂದ ಶೂಕೇಶ್ವರಂ ಕುಡುವನೆಂಬಾಸೆಯಿಂ ಪಂಬಲಿಸುತಿರುದಿರ್ದರು ||೨೬||


ಆನ್ನೆಗಂ ಪುಂಡರೀಕಂ ಬಂದುಲೂಪಿಯೊಳ್ | ಪನ್ನಗೇಂದ್ರಂ ಸುಧಾಮಣಿಯಂ ಕುಡದೆ ತಿರುಗಿ | ತನ್ನಂ ಕಳುಹಿದ ವೃತ್ತಾಂತಮನುಸಿರಲದಂ ಚಿತ್ರಾಂಗದೆಗೆ ಸೂಚಿಸೆ || ಇನ್ನು ವೈಧವ್ಯದಿಂದೊಡಲಂ ಪೊರೆಯೆನೆಂದು | ನನ್ನಿಯಿಂದಗ್ನಿ ಪ್ರವೇಶಮಂ ನಿ ಶ್ಚೈ ಪ | ಳಂ ನೋಡಿ ಕೋಪದಿಂದಾ ಬಭ್ರುವಾಹನಂ ನಿಜಮಾತೆಗಿಂತೆಂದನು||೨೭||


ಚಕ್ರಿಸೇವಕನೀ ಕಿರೀಟಿ ಧರ್ಮಾನುಜಂ | ಶಕ್ರಸುತನೆನ್ನ ತಾತಂ ಮೇಲೆ ತುರಗಮೇ | ಧ ಕ್ರತುವಿಗೋಸುಗಂ ಮಡಿದಿರಲ್ ಬೇಡಿದೊಡೆ ಮಣಿಯಂ ಕುಡದೆ ಶೇಷನು || ವಕ್ರನಾದೊಡೆ ವಾಸುಕಿ ಪ್ರಮುಖ ಫಣಿಗಳ ನ| ತಿಕ್ರಮಿಸಿ ತದ್ರತ್ನಮಂ ಕೊಂಡುಬಹೆನೆನ್ನ | ವಿಕ್ರಮನನೀಗ ನೋಡೆನುತೆದ್ದು ಕರೆಸಿದಂ ಪಾರ್ಥಿ ನಿಜಸೈನಿಕವನು||೨೮||


ಫಣಿಕುಲವನಾಕ್ರಮಿಸಿಕೊಂಡು ಬಹೆನಾ ಮಹಾ | ಮಣಿಯ ನಲ್ಲಹುದೆಂದೊಡಜ ಹರಿ ಪಿನಾಕಿಗಳ | ಪಣೆಯಕ್ಕ ರಂಗಳಂ ತೊಡವೆ ನೊರಸುವೆನಪ್ಪದಿಕ್ಷಾಲರಾಯುಗಳನ್ನು || ಎಣಿಕೆ ಬೇಡಿದಕಿನ್ನು ವೀರ ವೃಷಕೇತು ಫ| ಲ್ದುಣರ ದೇಹಂಗಳತಿ ಜತನವೆಂದಾ ಪ್ತರ್ಗೆI ರಣದ ಸುದ್ಧಾನಮಂ ಪೇಳ್ದು ನಿಜ ಬಲಸಹಿತ ಪಾರ್ಥಸುತ ನನುವಾದನು ||೨೯||


ಏರಿಸಿ ಮಹಾಧನುವನತನಿಬಾಣವನೆಚ್ಚು | ತೋರುಗಳೆದವನಿಯಂ ಸಪ್ತ ಪಾತಾಳಕ್ಕೆ| ತೋರಿಸಿದನೊಂದು ಪರ್ಬಟ್ಟೆಯಂ ನಡೆದ ನಾರ್ಜುನಿ ತನ್ನ ಸೇನೆ ಸಹಿತ||  ಮೀರಿದ ಶರಾವಳಿಯ ಘಾತಿಯಂ ತವೆ ತಾಳ | ಲಾರದೆ ಸಕಲ ಭೋಗಿತತಿ ಬಂದನಂತಂಗೆ | ದೂರಲ್ಕೆ ಧೃತರಾಷ್ಟ್ರ ನಂ ಬೈದು ಫಣಿಗಳಂ ಕಾಳಗಕೆ ಬೀಳ್ಕೊಟ್ಟನು||೩೦||


( ಮುಂದುವರೆಯುತ್ತದೆ )



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!