ದರ್ಶೀಲ್ ಸಫಾರಿ
ದರ್ಶೀಲ್ ಸಫಾರಿ
ತಾರೆ ಜಮೀನ್ ಪರ್ ಎಂಬ ಚಿತ್ರದಿಂದ ಭಾರತೀಯ ಚಿತ್ರರಂಗದ ಪುಟ್ಟ ನಕ್ಷತ್ರವೇ ಆಗಿ ಮಿಂಚಿದ ದರ್ಶೀಲ್ ಸಫಾರಿ ಹುಟ್ಟಿದ ದಿನ ಮಾರ್ಚ್ 9, 1996. 2007ರ ವರ್ಷದಲ್ಲಿ ತೆರೆಕಂಡ ‘ತಾರೆ ಜಮೀನ್ ಪರ್’ ಚಿತ್ರ ಭಾರತೀಯ ಚಿತ್ರಪ್ರೇಮಿಗಳ ಮನಸ್ಸಿಗೆ ಲಗ್ಗೆ ಇಟ್ಟಿದ್ದರಲ್ಲಿ ಈ ಬಾಲಕನ ಅಪೂರ್ವ ಅಭಿನಯ ಪೂರಕವಾಗಿದ್ದಂತದ್ದು.
‘ತಾರೆ ಜಮೀನ್ ಪರ್’ ಚಿತ್ರದ ಶ್ರೇಷ್ಠ ಅಭಿನಯಕ್ಕೆ ಪ್ರಶಸ್ತಿ ಗೆದ್ದ ನಂತರದಲ್ಲಿ ನಂತರದಲ್ಲಿ ದರ್ಶೀಲ್ ಕಂಡದ್ದು ‘ಬಂ ಬಂ ಭೋಲೆ’, ಇತ್ತೀಚಿನ ‘ಮಿಡ್ ನೈಟ್ ಚಿಲ್ಡ್ರನ್’ ಚಿತ್ರಗಳಲ್ಲದೆ ಒಂದು ಕಿರುತೆರೆಯ ಸ್ಪರ್ಧಾತ್ಮಕ ಕಾರ್ಯಕ್ರಮದಲ್ಲಿ ಮಾತ್ರ. ಇದೀಗ ಹದಿನೇಳನೆಯ ವಯಸ್ಸಿಗೆ ತಲುಪುತ್ತಿರುವ ಈ ಹುಡುಗ ಬದುಕೆಂಬ ಕಲಾಲೋಕದಲ್ಲಿ ಮುಂದೆಯೂ ಯಶಸ್ಸು ಕಾಣಲಿ ಎಂದು ಆಶಿಸೋಣ.
Tag: Darsheel Safari
ಕಾಮೆಂಟ್‌ಗಳು