ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಂಗಳದಾ ಈ ಸುದಿನ ಮಧುರವಾಗಲಿ


ಮಂಗಳದಾ ಈ ಸುದಿನ ಮಧುರವಾಗಲಿ
ನಿಮ್ಮೊಲವೆ ಈ ಮನೆಯ ನಂದಾದೀಪವಾಗಲಿ 

ಅನುರಾಗದ ರಾಗಮಾಲೆ ನಿಮ್ಮದಾಗಲಿ
ಅಪಸ್ವರದ ಛಾಯೆ ಎಂದೂ ಕಾಣದಾಗಲಿ
ಶ್ರುತಿಯೊಡನೆ ಸ್ವರ ತಾಳ ಲೀನವಾಗಲಿ
ಶುಭ ಗೀತೆ ಮಿಡಿಯಲೀ 

ತಂದೆ-ತಾಯಿ ದಾರಿ ತೋರೊ ಕಣ್ಣುಗಳೆರಡು
ಅವರ ಪ್ರೇಮ ದೂರವಾಗೆ ಮಕ್ಕಳು ಕುರುಡು
ಮಮತೆ ಇರುವ ಮನೆಯೆ ಸದಾ ಜೇನಿನಗೂಡು
ಅದೇ ಶಾಂತಿಯ ಬೀಡು 

ಸಾಹಿತ್ಯ: ಆರ್. ಎನ್. ಜಯಗೋಪಾಲ್


ಸಂಗೀತ: ವಿಜಯಭಾಸ್ಕರ್
ಗಾಯನ: ಎಸ್. ಜಾನಕಿ


Tag: Mangalada ee sudina

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ