ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾಟ್ಯ ಸರಸ್ವತಿಗೆ

ನಾಟ್ಯ ಸರಸ್ವತಿಗೆ

ನರ್ತಿಸು, ತಾಯೆ,
ಅಜ ಜಾಯೆ,
ಮಮ ಮಸ್ತಕ ನೀರೇಜದಲಿ!

ಮಾನಸ ಅಧಿಮಾನಸಕೇರೆ
ಅತಿಮಾನಸ ಮೈದೋರೆ
ಆನಂದಾಮೃತ ರಸ ಸೋರೆ
ನರ್ತಿಸು, ತಾಯೆ,
ಅಜ ಜಾಯೆ,
ಮಮ ಮಸ್ತಕ ನೀರೇಜದಲಿ!

ಅಡಿ ಸೋಂಕಿಗೆ ಮುಡಿ ಅರಳೆ
ಅಜ್ಞಾನದ ಗಡಿ ಉರುಳೆ
ವಿಜ್ಞಾನದ ಕಾಂತಿ
ಅವತರಿಸುತ ಬರೆ ಶಾಂತಿ
ನರ್ತಿಸು, ತಾಯೆ,
ಅಜ ಜಾಯೆ
ಮಮ ಮಸ್ತಕ ನೀರೇಜದಲಿ!

ಸಾಹಿತ್ಯ: ಕುವೆಂಪು

(ನಾಗಮಂಗಲದ ಜನರು ಕುವೆಂಪು ಅವರಿಗೆ ಅರ್ಪಿಸಿದ ನಾಟ್ಯ ಸರಸ್ವತಿಯ ದಿವ್ಯಸುಂದರವಾದ ಪಂಚಲೋಹ ವಿಗ್ರಹವನ್ನು ನಿರ್ದೇಶಿಸಿ, ದೇವೀ ಮೂರ್ತಿಯನ್ನು ನಿರ್ಮಿಸಿದ ಅಜ್ಞಾತಶಿಲ್ಪಿಗೆ ಕವಿಯ ಅನಂತ ಕೃತಜ್ಞತೆಯ ಫಲರೂಪಕವಾಗಿ ಈ ಕವಿತೆಯನ್ನು ರಚಿಸಿದ್ದಾಗಿ ಕುವೆಂಪು ಹೇಳಿದ್ದಾರೆ.  ಈ ಕವಿತೆಯ ರಚನೆಯ ದಿನಾಂಕ 1-8-1960. ಕೃಪೆ: ಕುವೆಂಪು ಅವರ 'ಅನಿಕೇತನ' ಕಾವ್ಯ ಸಂಕಲನ ).



Tag: Natya Sarasvatige, Naatya Sarasvatige

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ