ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀ ವರಮಹಾಲಕ್ಷ್ಮಿ



ಹಬ್ಬಗಳ ಸರಣಿಗೆ ಸುಸ್ವಾಗತ

ವರಮಹಾಲಕ್ಷ್ಮಿ ಹಬ್ಬ ಬಂತೆಂದರೆ, ಹಬ್ಬ, ಸಡಗರ, ಸಂತೋಷ, ನಲಿವುಗಳ ಸರಣಿಗಳು ಉದಯಿಸಿದ ಸಂಭ್ರಮ ಮೂಡುತ್ತದೆ. ಈ ಹಬ್ಬಗಳ ಸರಣಿಗೆ ಎಲ್ಲರಿಗೂ ಶುಭ ಸುಸ್ವಾಗತ.

ಜಗಜ್ಜನನಿ ಮಂಗಳಧಾತೆ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷ ನಮ್ಮೆಲ್ಲರ ಮೇಲಿರಲಿ. ಈ ವಿಶ್ವದಲ್ಲಿ ಶಾಂತಿ, ಸಂತಸ, ಸೌಹಾರ್ದ, ಆರೋಗ್ಯ, ಸದ್ಗುಣ, ಸಂಪದಗಳು ನೆಲೆಗೊಂಡು ಎಲ್ಲೆಲ್ಲೂ ಸುಭಿಕ್ಷತೆ ನೆಲೆಗೊಳ್ಳಲಿ.

ಭಾಗ್ಯದ ಲಕ್ಷ್ಮಿ ಬಾರಮ್ಮ
ನಮ್ಮಮ್ಮ
ನೀ ಸೌಭಾಗ್ಯಾದ ಲಕ್ಷ್ಮಿ ಬಾರಮ್ಮ

ಹೆಜ್ಜೆಯ ಮೇಲೆ ಹೆಜ್ಜೆಯ ನಿಕ್ಕುತ,
ಗೆಜ್ಜೆಯ ಕಾಲ್ಗಳ ನಾದವ ತೋರುತ,
ಸಜ್ಜನ ಸಾಧು ಪೂಜೆಯ ವೇಳೆಗೆ,
ಮಜ್ಜಿಗೆಯೊಳಗಿನ ಬೆಣ್ಣೆಯಂತೆ
ಭಾಗ್ಯದ ಲಕ್ಷ್ಮಿ ಬಾರಮ್ಮ

ಕನಕ ವೃಷ್ಟಿಯ ಕರೆಯುತ ಬಾರೆ
ಮನ ಕಾಮನೆಯ ಸಿದ್ಧಿಯ ತೋರೆ
ದಿನಕರ ಕೋಟಿ ತೇಜದಿ ಹೊಳೆವ,
ಜನಕ ರಾಯನ ಕುಮಾರಿ ಬಾರೆ
ಭಾಗ್ಯದ ಲಕ್ಷ್ಮಿ ಬಾರಮ್ಮ

ಅತ್ತಿತ್ತಲುಗದೆ ಭಕ್ತರ ಮನೆಯಲಿ,
ನಿತ್ಯ ಮಹೋತ್ಸವ ನಿತ್ಯ ಸುಮಂಗಲ
ಸತ್ಯವ ತೋರುತ ಸಾಧು ಸಜ್ಜನರ
ಚಿತ್ತದಿ ಹೊಳೆವ ಪುತ್ಥಳಿ ಬೊಂಬೆ
ಭಾಗ್ಯದ ಲಕ್ಷ್ಮಿ ಬಾರಮ್ಮ

ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು,
ಕಂಕಣ ಕೈಯ ತಿರುವುತ ಬಾರೆ
ಕುಂಕುಮಾಂಕಿತೆ ಪಂಕಜ ಲೋಚನೆ
ವೆಂಕಟ ರಮಣನ ಬಿಂಕದ ರಾಣಿ
ಭಾಗ್ಯದ ಲಕ್ಷ್ಮಿ ಬಾರಮ್ಮ

ಸಕ್ಕರೆ ತುಪ್ಪ ಕಾಲುವೆ ಹರಿಸಿ ಹರಿಸಿ
ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರೆಯುಳ್ಳ ಅಳಗಿರಿ ರಂಗನ
ಚೊಕ್ಕ ಪುರಂದರ ವಿಠ್ಠಲನ ರಾಣಿ
ಭಾಗ್ಯದ ಲಕ್ಷ್ಮಿ ಬಾರಮ್ಮ

ಭಾಗ್ಯದ ಲಕ್ಷ್ಮಿ ಬಾರಮ್ಮ
ನಮ್ಮಮ್ಮ
ನೀ ಸೌಭಾಗ್ಯಾದ ಲಕ್ಷ್ಮಿ ಬಾರಮ್ಮ

ಸಾಹಿತ್ಯ: ಪುರಂದರದಾಸರು



May Godess Mahalakshmi bless every one

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ