ಗಂಧದ ಗುಡಿ
ನಾವಾಡುವ ನುಡಿಯೇ ಕನ್ನಡ ನುಡಿ
ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಚೆಂದದ ಗುಡಿ
ಹಸುರಿನ ಬನಸಿರಿಗೇ ಒಲಿದು
ಸೌಂದರ್ಯ ಸರಸ್ವತಿ ಧರೆಗಿಳಿದು
ಹರಿಯುವ ನದಿಯಲಿ ಈಜಾಡಿ
ಹೂಬನದಲಿ ನಲಿಯುತ ಓಲಾಡಿ
ಚೆಲುವಿನ ಬಲೆಯ ಬೀಸಿದಳು
ಈ ಗಂಧದ ಗುಡಿಯಲಿ ನೆಲೆಸಿದಳು
ಇದು ಯಾರ ತಪಸಿನ ಫಲವೋ
ಈ ಕಂಗಳು ಮಾಡಿದ ಪುಣ್ಯವೋ
ನಾವಿರುವ ತಾಣವೆ ಗಂಧದ ಗುಡಿ
ಚಿಮ್ಮುತ ಓಡಿವೆ ಜಿಂಕೆಗಳು
ಕುಣಿದಾಡುತ ನಲಿದಿವೆ ನವಿಲುಗಳು
ಮುಗಿಲನು ಚುಂಬಿಸುವಾಸೆಯಲಿ
ತೂಗಾಡುತ ನಿಂತ ಮರಗಳಲಿ
ಹಾಡುತಿರೆ ಬಾನಾಡಿಗಳು
ಎದೆಯಲ್ಲಿ ಸಂತಸದಾ ಹೊನಲು
ಇದು ವನ್ಯ ಮೃಗಗಳ ಲೋಕವೋ
ಈ ಭೂಮಿಗೆ ಇಳಿದ ನಾಕವೋ
ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ
ಚೆಂದದ ಗುಡಿ ಶ್ರೀಗಂಧದ ಗುಡಿ
ಚಿತ್ರ: ಗಂಧದಗುಡಿ
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಪಿ. ಬಿ. ಶ್ರೀನಿವಾಸ್
ಕಾಮೆಂಟ್‌ಗಳು