ರಾಮು
ರಾಮು
ಕನ್ನಡದಲ್ಲಿ ಅದ್ಧೂರಿ ಚಿತ್ರಗಳ ನಿರ್ಮಾಣಕ್ಕೆ ಹಸರಾದ ರಾಮು ಅವರ ಸಂಸ್ಮರಣೆ ದಿನವಿದು.
ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆ ಇದ್ದದ್ದು ಸೀಮಿತವಾಗಿ ಅದು ಇತರ ಭಾಷೆಗಳಿಂದ ಎದುರಿಸಬೇಕಾದ ಸ್ಪರ್ಧೆ ಅಪಾರ ಎಂಬಂತಹ ಕಾಲದಲ್ಲಿ ಧೈರ್ಯವಾಗಿ ಚಿತ್ರನಿರ್ಮಿಸಿ, ವಿತರಿಸಿ, ಹಣಹೂಡಿದವರಲ್ಲಿ ರಾಮು ಪ್ರಮುಖರು.
'ಲಾಕಪ್ ಡೆತ್', 'AK-47', 'ರಾಕ್ಷಸ', 'ಕಲಾಸಿಪಾಳ್ಯ', 'ಅರ್ಜುನ್ ಗೌಡ','99’, ‘ಮುಂಬೈ', 'ದಂಡು', 'ಡೇಂಜರ್ ಝೋನ್', 'ಗಂಗಾ', 'ಶಿವಾಜಿನಗರ', 'ವೀರ', 'ಎಲೆಕ್ಷನ್', 'ಸಾಗರ್', 'ಕಂಠಿವೀರ', 'ಶಕ್ತಿ', 'ಗಂಡೆದೆ', 'ಕನ್ನಡದ ಕಿರಣ್ ಬೇಡಿ', 'ರಜನಿ', 'ಗೂಳಿ', 'ಮಸ್ತಿ', 'ಪ್ರೀತಿಗಾಗಿ', 'ತವರಿನ ಸಿರಿ', 'ರಾಕ್ಷಸ', 'ಆಟೋ ಶಂಕರ್', 'ಮಲ್ಲ', 'ದುರ್ಗಿ', 'ಕಲಾಸಿ ಪಾಳ್ಯ', 'ಕಿಚ್ಚ', 'ನಂಜುಂಡಿ', 'ಹಾಲಿವುಡ್', 'ಲಾ ಆಂಡ್ ಆರ್ಡರ್', 'ಬಾವ ಬಾಮೈದ', 'ಚಾಮುಂಡಿ', 'ಸಿಬಿಐ ದುರ್ಗ', 'ಲೇಡಿ ಕಮಿಷನರ್', 'ಸಿಂಹದ ಮರಿ', 'ಹೆಲೋ ಸಿಸ್ಟರ್', 'ಮುತ್ತಿನಂಥ ಹೆಂಡತಿ', 'ಗೋಲಿಬಾರ್' ಮುಂತಾದ ಸಿನಿಮಾಗಳಿಗೆ ರಾಮು ಹಣ ಹೂಡಿದ್ದರು.
ರಾಮು ಎಂಟರ್‌ಪ್ರೈಸಸ್ ಮೂಲಕ ರಾಮು ಅವರು 30ಕ್ಕೂ ಅಧಿಕ ಸಿನಿಮಾಗಳ ನಿರ್ಮಾಣ ಮಾಡಿದ್ದರು. ಇನ್ನೂ ಚಿಕ್ಕ ವಯಸ್ಸನಲ್ಲೇ ಪತ್ನಿ ಖ್ಯಾತ ನಟಿ ಮಾಲಾಶ್ರೀ, ಮಗ ಮತ್ತು ಮಗಳನ್ನು 2021 ವರ್ಷದಲ್ಲಿ ಅಗಲಿದರು.
ಕಾಮೆಂಟ್‌ಗಳು