ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ.ಎಸ್.ಎಸ್. ಕೌಶಿಕ್

 ಬಿ.ಎಸ್.ಎಸ್. ಕೌಶಿಕ್

ವಿದ್ವಾಂಸರಾದ ಬಿ.ಎಸ್.ಎಸ್. ಕೌಶಿಕ್ ಗಮಕ ಗಂಧರ್ವರೆನಿಸಿದವರು.

ಬಿ.ಎಸ್.ಎಸ್. ಕೌಶಿಕ್ 1916ರ ಏಪ್ರಿಲ್ 25ರಂದು  ಕೃಷ್ಣರಾಜ ಪೇಟೆ ತಾಲ್ಲೂಕಿನ ಹೇಮಗಿರಿ ಕುಪ್ಪಹಳ್ಳಿಯಲ್ಲಿ ಜನಿಸಿದರು. ತಂದೆ ಸುಬ್ಬಯ್ಯ.  ತಾಯಿ ಸುಬ್ಬಮ್ಮ. ತಾಯಿಯವರು ಅಕ್ಷರ ಜ್ಞಾನವಿಲ್ಲವಿದ್ದರೂ ಶ್ರೀನಿವಾಸ ಕಲ್ಯಾಣ, ರಾಮಾಯಣ, ಪ್ರಹ್ಲಾದ ಚರಿತ್ರೆಯಂತಹ ದೊಡ್ಡ ದೊಡ್ಡ ಹಾಡುಗಳ ಸುಶ್ರಾವ್ಯ ಹಾಡುಗಾರ್ತಿಯಾಗಿದ್ದರು. 

ಬಿ.ಎಸ್.ಎಸ್. ಕೌಶಿಕ್ ಅವರು ಸಾಮಾನ್ಯ ಶಿಕ್ಷಣ ಪಡೆದದ್ದು ಮೈಸೂರಿನಲ್ಲಿ. ಬೆಳಗೊಳದ ಎಂ.ಸಿ.ಎಂ. ಕಾರ್ಖಾನೆಯಲ್ಲಿ ಕೆಲಕಾಲ ಉದ್ಯೋಗ ಮಾಡಿದರು. ನಂತರ ಶಾರದಾ ವಿಲಾಸ ಕಾಲೇಜಿನಲ್ಲಿ ಗ್ರಂಥಪಾಲಕರಾದರು.  

ಕೌಶಿಕ್ ಅವರು ಉದ್ಯೋಗದ ಜೊತೆಗೆ ಹಾಡುಗಾರಿಕೆಯನ್ನು ರೂಢಿಸಿಕೊಂಡರು. ರಾಮೋತ್ಸವ, ಗಣೇಶೋತ್ಸವ ಸಂದರ್ಭಗಳಲ್ಲಿ ಭಜನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಮೈಸೂರು ದಸರಾ ವಸ್ತುಪ್ರದರ್ಶನ ಸಮಿತಿಯವರು ಏರ್ಪಡಿಸುತ್ತಿದ್ದ ಭಾವಗೀತೆ, ದೇವರನಾಮ, ಗಮಕ ಗಾಯನ ಸ್ಪರ್ಧೆಯಲ್ಲಿ ಬಹುಮಾನ ಗಳಿಸುತ್ತಿದ್ದರು. 

ಕೌಶಿಕ್ ಕೆಲಕಾಲ ಖ್ಯಾತನಟರಾಗಿದ್ದ ಡಿಕ್ಕಿ ಮಾಧವರಾವ್, ಅಶ್ವತ್ಥ್‌, ಪಂಢರೀಬಾಯಿ, ಹುಣಸೂರು ಕೃಷ್ಣಮೂರ್ತಿ ಇವರುಗಳೊಡನೆ ಆದರ್ಶ ನಾಟಕ ಮಂಡಲಿ ಸೇರಿ ಚಲನಚಿತ್ರ ಮತ್ತು ನಾಟಕಗಳಲ್ಲಿ ಅಭಿನಯಿಸಿದರು.

ಕೌಶಿಕ್ ಅವರು ಗಮಕ ಭಗೀರತರೆನಿಸಿದ್ದ ಕೃಷ್ಣಗಿರಿ ಕೃಷ್ಣರಾಯರ ಬಳಿ ಗಮಕ ವಾಚನ ಶಿಕ್ಷಣ ಪಡೆದರು. ಗಮಕ ವ್ಯಾಖ್ಯಾನಕಾರರೆನಿಸಿದ್ದ ವೆಂಕಟಸುಬ್ಬಯ್ಯರೊಡನೆ ಭಾರತ ವಾಚನ ಪ್ರಾರಂಭ ಮಾಡಿದರು. ನಾರಣಪ್ಪನ ಭಾರತವನ್ನು ಆಧರಿಸಿ ಕೃಷ್ಣಸಾರಥ್ಯ, ಕೃಷ್ಣ ಸಂಧಾನ, ಕುಂತಿಕರ್ಣ, ವಿಶ್ವೇಶ್ವರ ಸಾಕ್ಷಾತ್ಕಾರ, ಭಕ್ತ ಸುಧನ್ವ ಮುಂತಾದ ಗಮಕ ರೂಪಕ ಪಂಚಕ ಪ್ರಕಟಣೆ ಮಾಡಿದರು. 

ಕೌಶಿಕ್ ಮಹಾರಾಜ ಜಯಚಾಮರಾಜೇಂದ್ರ ಒಡೆಯರ ಪತ್ನಿ ತ್ರಿಪುರ ಸುಂದರಮ್ಮಣ್ಣಿ ಅವರ ಸಮ್ಮುಖದಲ್ಲಿ ಭಾರತ ವಾಚನ ಮಾಡಿದ್ದರು. ಕೆ.ವಿ. ಪುಟ್ಟಪ್ಪನವರ ಬಳಿ ರಾಮಾಯಣ ದರ್ಶನಂ ವಾಚನ ಮಾಡಿದ್ದರು.  ನಾಡಿನೆಲ್ಲೆಡೆಯಲ್ಲಿ ಅವರ ಗಮಕ ವಾಚನ ಕಾರ್ಯಕ್ರಮಗಳು ನಿರಂತರವಾಗಿ ನಡೆದವು. ರಾಜ್ಯದ ಹೊರಗೆ ಜಮಷಡ್ಪುರ, ಕೋಲ್ಕತ್ತಾ, ಕಾಶಿ, ಮುಂಬಯಿಯಲ್ಲೂ ಕಾರ್ಯಕ್ರಮ ನೀಡಿದರು.  

1999ರಲ್ಲಿ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ‍್ಪಡಿಸಿದ ಜಿಲ್ಲಾ ಕಲಾವಿದರ ಸನ್ಮಾನದಲ್ಲಿ ತಂದೆ, ಮಗಳು ವಸಂತಲಕ್ಷ್ಮಿ ಇಬ್ಬರಿಗೂ ಒಟ್ಟಿಗೆ ಸನ್ಮಾನ ನಡೆಯಿತು. 1976ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬೆಂಗಳೂರಿನಲ್ಲಿ ನಡೆದ 2ನೇ ಕರ್ನಾಟಕ ಗಮಕ ಸಮ್ಮೇಳನದ ಅಧ್ಯಕ್ಷತೆ, ಗಮಕ ರತ್ನಾಕರ ಪ್ರಶಸ್ತಿ, ಆಸೂರಿ ರಾಮಸ್ವಾಮಿ ಅಯ್ಯಂಗಾರ್ಯರಿಂದ ಗಮಕ ಕವಿತಾ ವನಜ ಭಾಸ್ಕರ, ಮೈಸೂರಿನ ರೇಣುಕೇಶ್ವರ ಸನ್ನಿಧಿಯಲ್ಲಿ ಗಮಕ ಕೋಕಿಲ ಬಿರುದು ಮುಂತಾದ ಗೌರವಗಳು ಸಂದವು.  2015ರಲ್ಲಿ ಬಿ. ಎಸ್. ಎಸ್. ಕೌಶಿಕ್ ಅವರ ನೂರನೇ ವರ್ಷದ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಗಳು ವಿಶೇಷ ಸನ್ಮಾನ ಗೌರವವವನ್ನು ಸಲ್ಲಿಸಿದವು.

ಬಿ. ಎಸ್. ಎಸ್.  ಕೌಶಿಕ್ ಅವರು 2017ರ ಜನವರಿ 19ರಂದು ನಿಧನರಾದರು.

ಬಿ.ಎಸ್.ಎಸ್. ಕೌಶಿಕ್
On the birth anniversary of Great Gamaki and Scholar B. S. S. Kaushik 🌷🙏🌷

B S S Kaushik, Koushik, 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ