ರುಕ್ಮಿಣಿ
ರುಕ್ಮಿಣಿ ಜಯರಾಮ ರಾವ್
ಇಂದು ನಮ್ಮೆಲ್ಲರ ಆತ್ಮೀಯ ಹಿರಿಯರಾದ ಸುಜ್ಞಾನಿ ರುಕ್ಮಿಣಿ ಜಯರಾಮ ರಾವ್ ಅವರ ಜನ್ಮದಿನ.
ಪ್ರತಿದಿನದ ವಿಶೇಷಗಳನ್ನು ರುಕ್ಮಿಣಿ ಜಯರಾಮ ರಾವ್ ಅವರು ಅಪ್ಯಾಯಮಾನವೆನ್ನುವಂತೆ ಫೇಸ್ಬುಕ್ಕಿನಲ್ಲಿ ಭಿತ್ತಿಸುವ ರೀತಿ ಅನನ್ಯವಾದದ್ದು. ಅಲ್ಲಿ ಮಾಹಿತಿ ಮಾತ್ರವಲ್ಲ , ಸಾಂಸ್ಕೃತಿಕ ಕಾಳಜಿ, ಇಂದಿನ ಕಾಲದಲ್ಲಿ ಅಪರೂಪ ಅನ್ನುವಂತಹ ಸಾರ್ವಜನಿಕ ಜೀವನದ ಕುರಿತಾದ ಪ್ರೀತಿ, ಪ್ರತಿಯೊಬ್ಬರನ್ನೂ ಆತ್ಮೀಯ ಸ್ನೇಹಿತರೆ ಎಂದು ಸಂಬೋಧಿಸುವ ಸಹಜ ವಾತ್ಸಲ್ಯ, ಇವೆಲ್ಲ ಹೃದಯವನ್ನು ತಟ್ಟುವಂತದ್ದು.
ಈ ಸಕಲ ಮೌಲ್ಯಗಳ ಸದ್ಗುಣಿ ನಮ್ಮ ಅತ್ಮೀಯ ಅಕ್ಕರೆಯ ತಾಯಿಗೆ ನಮಸ್ಕರಿಸುತ್ತಾ ನಿಮ್ಮ ಮತ್ತು ನಿಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸೌಭಾಗ್ಯ, ಸಂತಸ, ಸಂಪದ, ಸಂತೃಪ್ತಿ ಮತ್ತು ಸಾಧನೆಗಳಿಂದ ಕಂಗೊಳಿಸುತ್ತಿರಲಿ ಎಂದು ಹಾರೈಸುತ್ತಾ ಹುಟ್ಟು ಹಬ್ಬದ ಶುಭಹಾರೈಕೆಗಳನ್ನು ಸಲ್ಲಿಸುತ್ತಿದ್ದೇನೆ. ಅಮ್ಮಾ ನಿಮ್ಮ ಈ ಪ್ರೀತಿ, ಆಶೀರ್ವಾದ ನಮ್ಮೊಂದಿಗೆ ಸದಾ ಇರಲಿ. ಸಾಷ್ಟಾಂಗ ನಮಸ್ಕಾರ.🌷🙏🌷🙏🌷🙏🌷
On the birth day of our affectionate reservoir of wisdom Rukmini Jayarama Rao
ಕಾಮೆಂಟ್‌ಗಳು