ಜೋಹಾನ್ ಗ್ಯಾಡೊಲಿನ್
ಜೋಹಾನ್ ಗ್ಯಾಡೊಲಿನ್
ಜೋಹಾನ್ ಗ್ಯಾಡೊಲಿನ್ ಫಿನ್‍ಲೆಂಡಿನ ರಸಾಯನ ವಿಜ್ಞಾನಿ, ಭೌತ ವಿಜ್ಞಾನಿ ಮತ್ತು ಖನಿಜ ಸಂಶೋಧಕರು.
ಜೋಹಾನ್ ಗ್ಯಾಡೊಲಿನ್ ಅಬೊನಲ್ಲಿ 1760ರ ಜೂನ್ 5 ರಂದು ಜನಿಸಿದರು. ಅಬೊ ಮತ್ತು ಉಪ್ಸಲಾ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ನಡೆಸಿದರು. ರಸಾಯನಶಾಸ್ತ್ರವನ್ನು ಟಾವರ್ನ್ ಒಲೊಫ್ ಬರ್ಗ್‍ಮನ್ ಎಂಬಾತನಲ್ಲಿ ಅಭ್ಯಾಸ ಮಾಡಿ ಬಳಿಕ ಅಬೊ ವಿಶ್ವವಿದ್ಯಾಲಯದಲ್ಲಿ ರಸಾಯನ ವಿಜ್ಞಾನದ ಪ್ರಾಧ್ಯಾಪಕರಾಗಿ 1797 ರಿಂದ 1822ರ ವರೆಗೆ ಸೇವೆ ಸಲ್ಲಿಸಿದರು. ಲೋಹ ಮತ್ತು ಖನಿಜಗಳ ಸಂಶೋಧನೆ ಇವರ ಪ್ರಮುಖಾಸಕ್ತಿ. ಸ್ಟಾಕ್‍ಹೋಮ್ ಬಳಿಯ ಇಟರ್ಬಿಯಲ್ಲಿ
ದೊರೆತ (1794) ಒಂದು ಗಟ್ಟಿಯಾದ ಕಪ್ಪು ಕಲ್ಲಿನಲ್ಲಿ ವಿರಳ ಭಸ್ಮಧಾತುಗಳನ್ನು ಕಂಡುಹಿಡಿದ ಕೀರ್ತಿ ಜೋಹಾನ್ ಗ್ಯಾಡೊಲಿನ್ ಅವರದು. ಇವುಗಳ ಪೈಕಿ ತಾವು ಆವಿಷ್ಕರಿಸಿದ ಲೋಹಕ್ಕೆ ಇಟ್ರಿಯಮ್ ಎಂಬ ಹೆಸರಿಟ್ಟರು. ಈ ಲೋಹಗಳ ಖನಿಜಕ್ಕೆ ಗ್ಯಾಡೊಲಿನ್ನರ ಗೌರವಾರ್ಥವಾಗಿ ಇಂದು ಗ್ಯಾಡೊಲಿನೈಟ್ ಎಂದೇ ಹೆಸರಾಗಿದೆ.
ಗ್ಯಾಡೊಲಿನ್ ವಿರಳ ಭಸ್ಮಧಾತುಗಳ ಬಗ್ಗೆ ಹೆಚ್ಚು ಸಂಶೋಧನೆ ಮಾಡಿ ಹೆಸರು ಪಡೆದರೂ ಅವರು ರಸಾಯನ ಶಾಸ್ತ್ರದ ಇತರ ಭಾಗಗಳಾದ ಸಂಯೋಗ ದ್ರವ್ಯಸಂಬಂಧತೆ (ಸ್ಟಾಯ್‍ಕಿಯೊಮೆಟ್ರ), ಉಷ್ಣ ರಸಾಯನಶಾಸ್ತ್ರ ಹಾಗೂ ಕಬ್ಬಿಣದ ಅದುರುಗಳನ್ನು ವಿಭಜಿಸುವ ಸಲುವಾಗಿ ಸ್ರಾವಕಗಳ ಶೋಧನೆಯಲ್ಲೂ ಆಸಕ್ತರಾಗಿದ್ದರು.
ಜೋಹಾನ್ ಗ್ಯಾಡೊಲಿನ್ 1852ರ ಅಗಸ್ಟ್ 15 ರಂದು ನಿಧನರಾದರು.
On the birth anniversary of Johan Gadolin, Finnish chemist, physicist and mineralogist.
ಕಾಮೆಂಟ್‌ಗಳು