ಎನ್. ವೆಂಕಟಾಚಲ
ಎನ್. ವೆಂಕಟಾಚಲ
ನ್ಯಾಯಮೂರ್ತಿ ಎನ್. ವೆಂಕಟಾಚಲ ಕರ್ನಾಟಕದ ಲೋಕಾಯುಕ್ತರಾಗಿ ಮತ್ತು ಸರ್ವೋಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾಗಿ ಪ್ತಸಿದ್ಧರು.
ಎನ್. ವೆಂಕಟಾಚಲ 1930ರ ಜುಲೈ 3ರಂದು ಕೋಲಾರ ಜಿಲ್ಲೆ ಮುಳಬಾಗಲು ತಾಲ್ಲೂಕಿನ ಮಿಟ್ಟೂರು ಗ್ರಾಮದಲ್ಲಿ ಜಮೀನುದಾರ ಮನೆತನದಲ್ಲಿ ಜನಿಸಿದರು. ಇವರ ಪೂರ್ಣಹೆಸರು ನಂಜೇಗೌಡ ವೆಂಕಟಾಚಲ. ಅನಸೂಯ ಇವರ ಪತ್ನಿ. ಇವರು ಮಿಟ್ಟೂರು, ಕೋಲಾರ, ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿ ಬಿ.ಎಸ್ಸಿ ಪದವಿ ಪಡೆದರು. ಮುಂದೆ ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು, ಮೈಸೂರು ಉಚ್ಚನ್ಯಾಯಾಲಯದಲ್ಲಿ ವಕೀಲ ವೃತ್ತಿ ಆರಂಭಿಸಿದರು(1955). ಅವರು ವಕೀಲ ವೃತ್ತಿಯ ಜೊತೆಗೆ ಉಪನ್ಯಾಸಕರಾಗಿಯೂ ಕೆಲಸ ಮಾಡಿದರು.
ಸರ್ಕಾರಿ ವಕೀಲರಾಗಿ ಸೇವೆಸಲ್ಲಿಸುತ್ತಿದ್ದ ವೆಂಕಟಾಚಲ ಉಚ್ಚನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ ಗೊಂಡರು (1977 ನವೆಂಬರ್ 28). ಅನಂತರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದರು (1992 ಜುಲೈ 3). ನಿವೃತ್ತಿಯ ತರುವಾಯ ಬೆಂಗಳೂರಿಗೆ ಬಂದು ನೆಲೆಸಿದರು. 2001ರಿಂದ 2006 ಅವಧಿಯಲ್ಲಿ ಕರ್ನಾಟಕದ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಿದರು.
ವೆಂಕಟಾಚಲ ಅವರು ಲೋಕಾಯುಕ್ತರಾಗಿ ಭ್ರಷ್ಟಚಾರದ ವಿರುದ್ಧ ಬಹಿರಂಗವಾಗಿ ದನಿಯೆತ್ತಿದರು. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಓಡಾಡಿ ಆಸ್ಪತ್ರೆ, ಸರ್ಕಾರಿ, ಖಾಸಗಿ, ಅರೆಖಾಸಗಿ ಕಚೇರಿಗಳು, ಶಾಲೆಗಳು ಮೊದಲಾದ ಸ್ಥಳಗಳ ಭ್ರಷ್ಟಾಚಾರದ ವಿವಿಧ ರೂಪಗಳನ್ನು ಬಯಲಿಗೆಳೆದರು. ಅನೇಕ ಭ್ರಷ್ಟ ಅಧಿಕಾರಿಗಳ ಲೆಕ್ಕಕ್ಕೆ ಸಿಗದ ಆಸ್ತಿಪಾಸ್ತಿಗಳನ್ನು ಹೊರಕ್ಕೆ ತೆಗೆದರು. ಭ್ರಷ್ಟಾಚಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಸೇವೆಯಿಂದ ಅಮಾನತುಗೊಳಿಸಲು ಶಿಫಾರಸು ಮಾಡಿದರು. ಬೆಂಗಳೂರಿನ ಸುತ್ತುಮುತ್ತ ಇರುವ ಐದು ನಗರ ಸಭೆಗಳಲ್ಲಿ ನಡೆದ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ಬಯಲಿಗೆಳೆದರು.
ನ್ಯಾಯಮೂರ್ತಿ ವೆಂಕಟಾಚಲ ಅವರು 2019ರ ಅಕ್ಟೋಬರ್ 30ರಂದು ಈ ಲೋಕವನ್ನಗಲಿದರು.
On the birth anniversary of Supreme Court and Lokayukta of Karnataka Justice N. Venkatachala
ಕಾಮೆಂಟ್‌ಗಳು