ನಳಿನಿ ಸೋಮಯಾಜಿ
ನಳಿನಿ ಸೋಮಯಾಜಿ
ನಳಿನಿ ಸೋಮಯಾಜಿ ಸದಾ ಹಸನ್ಮುಖಿ, ಉತ್ಸಾಹಿ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಆಸಕ್ತೆ, ಪ್ರೋತ್ಸಾಹದಾಯಿನಿ, ಮಕ್ಕಳೊಂದಿಗೆ-ಹಿರಿಯರೊಂದಿಗೆ-ಎಲ್ಲರೊಂದಿಗೆ ಬೆರೆವವರು. ನಳಿನಿ ಸೋಮಯಾಜಿ ಮತ್ತು Jayarama Somayaji ದಂಪತಿಗಳು ಯುನೈಟೆಡ್ ಅರಾಬ್ ಎಮಿರೇಟ್ಸ್ ದೇಶದಲ್ಲಿ ಕನ್ನಡ ಸಾಂಸ್ಕೃತಿಕ ವಾತಾವರಣ ನಿರ್ಮಿಸುವಲ್ಲಿ ವಹಿಸಿದ ಪಾತ್ರವನ್ನು ಇಲ್ಲಿನ ಜನ ಇಂದೂ ಆಪ್ತವಾಗಿ ಸ್ಮರಿಸುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿಯೂ ಅಪಾರ ಕೆಲಸ ಮಾಡಿರುವ ಈ ದಂಪತಿಗಳು ಇಂದೂ ಆ ಕ್ಷೇತ್ರದಲ್ಲಿ ಸಾಕಷ್ಟು ಆಪ್ತತೆಯಿಂದ ಆಸಕ್ತಿವಹಿಸಿದ್ದಾರೆ.
ಪಾಕ ವಿಚಾರದಲ್ಲಾಗಲಿ, ಪ್ರಾಣಿ - ನಿಸರ್ಗ ವಿಚಾರದಲ್ಲಾಗಲಿ, ಮಕ್ಕಳಿಗೆ ಕಥೆ ಹೇಳುವುದರಲ್ಲಾಗಲಿ, ಸಾಂಸ್ಕೃತಿಕ ಚಟುವಟಿಕೆಗಳ ಭಾಗವಹಿಕೆಯನ್ನು ಅಭಿವ್ಯಕ್ತಿಸುವುದರಲ್ಲಾಗಲಿ ಈ ಹಿರಿಯ ದಂಪತಿಗಳ ಮನೋಧರ್ಮ ಮೆಚ್ಚುಗೆ ಹುಟ್ಟಿಸುತ್ತದೆ. ಈ ಹಿರಿಯ ದಂಪತಿಗಳಿಗೆ ಮತ್ತು ಅವರ ಕುಟುಂಬವರ್ಗದವರಿಗೆ ಶುಭಕೋರುತ್ತಾ, ನಳಿನಿ ಸೋಮಯಾಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಸಲ್ಲಿಸೋಣ.
ಅಮ್ಮಾ, ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.
🎂🎉🍰🎁🍦💐😊
Happy Birth Day Nalini Somayaji Amma 🌷🙏🌷
ಕಾಮೆಂಟ್‌ಗಳು