ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆಶಾ ಜಗದೀಶ್


 ಆಶಾ ಜಗದೀಶ್ 

ಆಶಾ ಜಗದೀಶ್ ಕನ್ನಡದ ಬಹುಮುಖಿ ಪ್ರತಿಭಾನ್ವಿತ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ. 

ನವೆಂಬರ್ 21 ಆಶಾ ಅವರ ಜನ್ಮದಿನ. ಸೊರಬದಲ್ಲಿ ವಿದ್ಯಾಭ್ಯಾಸ ನಡೆಸಿದ ಆಶಾ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಆಶಾ ಜಗದೀಶ್ ಅವರ ಕತೆ, ಕವಿತೆ, ಪ್ರಬಂಧ ಮತ್ತು ಅಂಕಣಗಳು ನಾಡಿನ ಎಲ್ಲ ಪ್ರಸಿದ್ಧ ನಿಯತಕಾಲಿಕಗಳಲ್ಲಿ, ವಿಶೇಷ ಸಂಚಿಕೆಗಳಲ್ಲಿ ಮತ್ತು ಅಂತರಜಾಲ ಮಾಧ್ಯಮಗಳಲ್ಲಿ ನಿರಂತರವಾಗಿ ಮೂಡಿ ಬರುತ್ತಿವೆ. 

'ಮೌನ ತಂಬೂರಿ’ ಎಂಬ ಕವನ ಸಂಕಲನ ಆಶಾ ಜಗದೀಶ್ ಅವರ ಪ್ರಥಮ ಪ್ರಕಟಿತ ಕೃತಿ. ಇವರ ಇತರ ಕೃತಿಗಳಲ್ಲಿ 'ಮಳೆ ಮತ್ತು ಬಿಳಿ ಬಟ್ಟೆ' ಕಥಾ ಸಂಕಲನ ಮತ್ತು 'ನಾದಾನುಸಂಧಾನ' ಅಂಕಣ ಬರಹಗಳ ಸಂಕಲನ, ನಡು ಮಧ್ಯಾಹ್ನದ ಕಣ್ಣು ಕಾವ್ಯ ಸಂಕಲನ ಕೃತಿಗಳೂ ಹೆಸರಾಗಿವೆ. ಅನೇಕ ಸಂಕಲನಗಳಲ್ಲಿಯೂ ಇವರ ಬರಹಗಳು ಮೂಡಿವೆ.

ಆಶಾ ಜಗದೀಶ್ ಅವರ ಕಥೆ, ಕವಿತೆಗಳು ಹಲವಾರು ಸ್ಪರ್ಧೆಗಳಲ್ಲಿ ಬಹುಮಾನಿತಗೊಂಡಿರುವುದರ ಜೊತೆಗೆ, ಅವರಿಗೆ ಅನೇಕ ಕೃತಿ ಪ್ರಶಸ್ತಿಗಳೂ ಸಂದಿವೆ.

ಆಶಾ ಜಗದೀಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Asha Jagadish

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ