ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ಎಮ್. ಪಣಿಕ್ಕರ್

 


ಕೆ. ಎಂ. ಪಣಿಕ್ಕರ್

ಕಾವಲಂ ಮಾಧವ ಪಣಿಕ್ಕರ್ ಸರ್ದಾರ್ ಕೆ. ಎಂ. ಪಣಿಕ್ಕರ್ ಎಂದು ಜನಪ್ರಿಯರಾಗಿ ಪರಿಚಿತರು.‍ ಅವರು ಮೈಸೂರು ವಿಶ್ವವಿದ್ಯಾಲಯವೂ ಸೇರಿದಂತೆ ಹಲವು ವಿಶ್ವವಿದ್ಯಾಲಯಗಳಲ್ಲಿ  ಉಪಕುಲಪತಿಗಳಾಗಿದ್ದರು.‍ ಅವರೊಬ್ಬ ಪ್ರಾಧ್ಯಾಪಕ, ಪತ್ರಿಕಾ ಸಂಪಾದಕ, ಇತಿಹಾಸಕಾರ,  ಕಾದಂಬರಿಕಾರ, ರಾಜತಾಂತ್ರಿಕ ಹೀಗೆ ಮಹಾನ್ ಸಾಧಕರು.

ಮಾಧವ ಪಣಿಕ್ಕರ್ ಅವರು 1895ರ ಜೂನ್ 3ರಂದು ತಿರುವಾಂಕೂರಿನಲ್ಲಿ ಜನಿಸಿದರು. ತಂದೆ ಪುತ್ತಿಲ್ಲತ್ತು ಪರಮೇಶ್ವರನ್ ನಂಬೂದರಿ.  ತಾಯಿ ಚಲಾಯಿಲ್ ಕುಂಜಿಕುಟ್ಟಿ ಕುಂಜಮ್ಮ. ಕೊಟ್ಟಾಯಂನ ಸಿಎಮ್ಎಸ್ ಶಾಲೆ ಮತ್ತು ಮದ್ರಾಸ್‌ನ ವೆಪೇರಿಯ ಸೇಂಟ್ ಪಾಲ್ಸ್ ಶಾಲೆಯಲ್ಲಿ ಅವರ ಓದು ನಡೆಯಿತು. ನಂತರ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿಗೆ ಸೇರಿದರು. ಅಲ್ಲಿ ಪುತೇಜತ್ ರಾಮನ್ ಮೆನನ್, ನಂದ್ಯೆಲತ್ ಪದ್ಮನಾಭ ಮೆನನ್ ಮತ್ತು ಸದಾಶಿವ ರೆಡ್ಡಿ ಮುಂತಾದವರು ಇವರ ಸಹಪಾಠಿಗಳಾಗಿದ್ದರು. 1914ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕ್ರೈಸ್ಟ್ ಚರ್ಚ್‌ನಲ್ಲಿ ಇತಿಹಾಸವನ್ನು ಓದಲು ಇಂಗ್ಲೆಂಡ್‌ಗೆ ತೆರಳಿದರು. ಮುಂದೆ ಲಂಡನ್‌ನ ಮಿಡಲ್ ಟೆಂಪಲ್‌ನಲ್ಲಿ ಬಾರ್‌ಗಾಗಿ ಓದಿದರು.

ಭಾರತಕ್ಕೆ ಹಿಂದಿರುಗಿದ ನಂತರ, ಪಣಿಕ್ಕರ್ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ,  ನಂತರ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. 1925ರಲ್ಲಿ ಹಿಂದೂಸ್ತಾನ್ ಟೈಮ್ಸ್‌ನ ಸಂಪಾದಕರಾಗಿ ಪತ್ರಿಕೋದ್ಯಮದತ್ತ ಮುಖ ಮಾಡಿದರು.

ಮುಂದಿನ 20 ವರ್ಷಗಳ ಕಾಲ, ಮಾಧವ ಪಣಿಕ್ಕರ್ ರಾಜಪ್ರಭುತ್ವದ ರಾಜ್ಯಗಳಿಗೆ ಸೇವೆ ಸಲ್ಲಿಸಿದರು. ಚೇಂಬರ್ ಆಫ್ ಪ್ರಿನ್ಸಸ್ನ ಕುಲಪತಿಗಳ ಕಾರ್ಯದರ್ಶಿಯಾದರು. ಅವರು ಪಟಿಯಾಲ ರಾಜ್ಯದ ವಿದೇಶಾಂಗ ಸಚಿವರಾಗಿ ಮತ್ತು ಬಿಕಾನೆರ್‌ನ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದರು.  1944ರಲ್ಲಿ ಬಿಕಾನೆರ್‌ನ ದಿವಾನರಾದರು. 1952 ರವರೆಗೆ ಚೀನಾದಲ್ಲಿ ಸೇವೆ ಸಲ್ಲಿಸಿದರು. ಚಿಯಾಂಗ್ ಕೈ-ಶೇಕ್ ಅವರೊಂದಿಗೆ ಸಂಬಂಧವನ್ನು ಬೆಳೆಸಿದರು. 1949ರಲ್ಲಿ ಕಮ್ಯೂನಿಸ್ಟರು ಸ್ವಾಧೀನಪಡಿಸಿಕೊಳ್ಳುವವರೆಗೂ  ಅಲ್ಲಿಯೇ ಇದ್ದರು. 

ಪಣಿಕ್ಕರ್ ಅವರು ಚೀನಾದಲ್ಲಿನ ತಮ್ಮ ಅನುಭವಗಳನ್ನು ಇನ್ ಟು ಚೈನಾಸ್ (1955) ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಇದೇ ಅವಧಿಯಲ್ಲಿ ಅವರ ಏಷ್ಯಾ ಮತ್ತು ಪಾಶ್ಚಿಮಾತ್ಯ ಪ್ರಾಬಲ್ಯ (1953) ಕೃತಿಯು ಪೂರ್ಣಗೊಂಡಿತು. ಅವರು ತರುವಾಯ ಈಜಿಪ್ಟ್ (1952-1953), ಮತ್ತು ಫ್ರಾನ್ಸ್ (1956-1959)ಗೆ ರಾಯಭಾರಿಯಾಗಿ ಸೇವೆ ಸಲ್ಲಿಸಿದರು. ತೀವ್ರವಾದ ಪಾರ್ಶ್ವವಾಯು ತೊಂದರೆಗೀಡಾಗಿ ಭಾರತಕ್ಕೆ ಮರಳಿದರು. ಚೇತರಿಸಿಕೊಂಡ ನಂತರ, ಮತ್ತೆ ತಮ್ಮ ಶೈಕ್ಷಣಿಕ ವೃತ್ತಿಜೀವನವನ್ನು ಕೈಗೊಂಡರು, ಜಮ್ಮು ಮತ್ತು ಕಾಶ್ಮೀರ ವಿಶ್ವವಿದ್ಯಾನಿಲಯ ಮತ್ತು ನಂತರ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಯಾದರು.

ಪಣಿಕ್ಕರ್ ಅವರ ಕೃತಿಗಳು ವಿಶಾಲ ವ್ಯಾಪ್ತಿಯದಾಗಿವೆ.  Essays on Educational Reconstruction in India,  Harsha of Kanauj: a monograph on the history of India in the first half of the 7th century; Indian Nationalism: its origin, history, and ideals; The Working of Dyarchy in India; The Evolution of British Policy towards Indian States; Malabar and the Portuguese: being a history of the relations of the Portuguese with Malabar from 1500 to 1663; The Founding of the Kashmir State: a biography of Maharajah Gulab Singh, 1792–1858; Federal India; Indian States and the Government of India; The New Empire: letters to a Conservative Member of Parliament on the future of England and India; The Indian Princes in Council: a record of the chancellorship of His Highness, the Maharaja of Patiala, 1926–1931 and 1933–1936; His Highness the Maharaja of Bikaner: a biography; Hinduism and the modern world;  The States and the Constitutional Settlement; Indian States; The Strategic Problems of the Indian Ocean; India and the Indian Ocean: an essay on the influence of sea power on Indian history; India through the Ages; Asia and Western Dominance: a survey of the Vasco Da Gama epoch of Asian history, 1498–1945; A Survey of Indian History; In Two Chinas: memoirs of a diplomat; The Principles and Practice of Diplomacy; Voice of Truth, a topical symposium: replies to attacks on Christians and missionaries in India; India and China: a study of cultural relations; The Determining Periods of Indian History; A History of Kerala, 1498–1801; The State and the Citizen; Hindu Society at Cross Roads; Essential Features of India Culture; In Defence of Liberalism; Studies in Indian History; The Ideas of Sovereignty and State in Indian Political Thought; The Foundations of New India; The Himalayas in Indian Life; A Survey of Indian History; Hinduism & the West: a study in challenge and response; The Serpent and the Crescent: a history of the Negro empires of western Africa; Lectures on India's Contact with the World in the pre-British Period; The Twentieth Century; Caste and Democracy & Prospects of Democracy in India; Geographical Factors in Indian History; An Autobiography ಮುಂತಾದವು ಅವರ ಕೃತಿಗಳಲ್ಲಿ ಸೇರಿವೆ. ಹಲವಾರು ಗ್ರೀಕ್ ನಾಟಕಗಳನ್ನು ಮತ್ತು ಕಾವ್ಯಗಳನ್ನು ಮಲಯಾಳಂಗೆ ಅನುವಾದಿಸಿದ್ದರು.

ಅವರು 1959 - 1961 ಅವಧಿಯಲ್ಲಿ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿದ್ದರು. ಪಣಿಕ್ಕರ್ ಕೇರಳ ಸಾಹಿತ್ಯ ಅಕಾಡೆಮಿಯ ಮೊದಲ ಅಧ್ಯಕ್ಷರೂ ಆಗಿದ್ದರು.

ಕಾವಲಂ ಮಾಧವ ಪಣಿಕ್ಕರ್ 1963ರ ಡಿಸೆಂಬರ್ 10ರಂದು ನಿಧನರಾದರು.

On Remembrance Day of great historian, diplomat and writer K. M. Panicker

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ