ಮಂಗಳ ಲಕ್ಷ್ಮೀ
ಮಂಗಳ ಲಕ್ಷ್ಮೀ
ಇಂದು ಕಲಾವಿದೆ, ಬರಹಗಾರ್ತಿ, ಎಲ್ಲರ ಪರಮ ಸ್ನೇಹಿತೆ, ಉತ್ಸಾಹಿ ಮಂಗಳ ಲಕ್ಷ್ಮೀ ಅವರ ಹುಟ್ಟುಹಬ್ಬ. ಬದುಕೇ ಒಂದು ಕಲೆ ಎಂಬ ಮಾತು ಇಂಥ ಸ್ವಸಂತೋಷ - ಆತ್ಮತೃಪ್ತಿಗಳಿಗಾಗಿ ಕಲಾವಂತಿಕೆಯನ್ನು ಉಸಿರಾಡುತ್ತಿರುವ ಅಪೂರ್ವ ಹೃದಯಿಗಳಿಂದ ಅನಿಸುತ್ತೆ.
ಮಂಗಳ ಲಕ್ಷ್ಮೀ ಅವರ ಬರಹಗಳೂ ಅವರ ಕಲಾವಂತಿಕೆಯಷ್ಟೇ ಸುಂದರ. ಅವರ ಬರಹಗಳ ಆಳದಲ್ಲಿ ಬದುಕಿನ ಆಳ ಅನುಭವ, ಅನುಭಾವ, ಸುಜ್ಞಾನಗಳ ಪರಿಪಕ್ವತೆಯಿದೆ. ಅದೆಲ್ಲಕ್ಕೂ ಕಳಶಪ್ರಾಯವಾದ ಪ್ರೀತಿ ತುಂಬಿದ ಹೃದಯವಂತಿಕೆ ಇದೆ.
ಮಂಗಳ ಲಕ್ಷ್ಮೀ ಅವರಿಗೆ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.
Happy birthday Mangala Lakshmi
ಕಾಮೆಂಟ್‌ಗಳು