ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ. ಜಯಾ



 ಬಿಜಯಾ


ಬಿಜಯಾ ಕನ್ನಡದ ನಿಷ್ಠಾವಂತ ಕಲಾವಿದೆ ಎನಿಸಿದ್ದವರು


ಕೊಳ್ಳೇಗಾಲದ ಮೂಲದವರಾದ ಬಿ.ಜಯಾ 1944 ಸೆಪ್ಟೆಂಬರ್ 3ರಂದು ಜನಿಸಿದರುಅವರತಂದೆ ಬಸಪ್ಪನವರು ರಂಗಭೂಮಿ ಕಲಾವಿದರು ಬಾಲಕಿ ಜಯಾ ಚಿಕ್ಕಂದಿನಲ್ಲೇ ನೂರಾರುನಾಟಕಗಳಲ್ಲಿ ನಟಿಸಿದ್ದರು.


ಜಯಾ ಎಂದರೆ ತಕ್ಷಣ ನೆನಪಿಗೆ ಬರುವುದು ನರಸಿಂಹರಾಜು ಮತ್ತು ದ್ವಾರಕೀಶ್ ಅವರೊಂದಿಗೆಲೀಲಾಜಾಲವಾಗಿ ಅವರು ಅಭಿನಯಿಸುತ್ತಿದ್ದ ಹಾಸ್ಯಪಾತ್ರಗಳುಭಾವಪೂರ್ಣತೆಯನ್ನೂ ಅವರಅಭಿನಯದಲ್ಲಿ ಕಾಣಬಹುದಿತ್ತು.


1958ರಲ್ಲಿ ‘ಭಕ್ತ ಪ್ರಹ್ಲಾದ’ ಸಿನಿಮಾ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದ್ದ ಜಯಾ ಅವರುಇತ್ತೀಚಿನ ವರ್ಷಗಳಲ್ಲಿನ ಟಿವಿ ಯುಗದ 'ಪಾಪ ಪಾಂಡು', 'ಸರಸುಸೇರಿದಂತೆ ಅನೇಕಧಾರಾವಾಹಿಗಳಲ್ಲಿ ಸಹಾ ನಟಿಸುತ್ತಿದ್ದರು.  


350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ  ಜಯಾ ಅವರು 2004-05 ಸಾಲಿನಲ್ಲಿ ‘ಗೌಡ್ರು’ ಚಿತ್ರಕ್ಕೆರಾಜ್ಯ ಸರ್ಕಾರದ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದರು ಹಾಸ್ಯನಟರಾದನರಸಿಂಹರಾಜುದ್ವಾರಕೀಶ್‌ ಮುಂತಾದವರ ಜೊತೆಗಿನ ಜಯಾ ಅವರ ನಟನೆ ಇನ್ನೂ ಪ್ರೇಕ್ಷಕರಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆವಿಷ್ಣುಸೇನೆ ಚಿತ್ರದಲ್ಲಿ ವಿಷ್ಣುವರ್ಧನ್ ಅವರೊಂದಿಗೆಭಾವಪೂರ್ಣ ಸನ್ನಿವೇಶಗಳಲ್ಲಿ ಅವರು ನಟಿಸಿದ್ದುದೂ ನೆನಪಾಗುತ್ತಿದೆಪ್ರತಿಜ್ಞೆಬೆಟ್ಟದ ಹುಲಿನ್ಯಾಯವೇ ದೇವರುದಶಾವತಾರಕನ್ಯಾರತ್ನಮನ ಮೆಚ್ಚಿದ ಮಡದಿಸತೀ ಶಕ್ತಿವಾಲ್ಮೀಕಿವೀರಕೇಸರಿಪ್ರೇಮಮಯಿಎಮ್ಮೆ ತಮ್ಮಣ್ಣ ಬೆಳ್ಳಿಮೋಡನಮ್ಮ ಮಕ್ಕಳುತಾಯಿ ದೇವರುಕುಳ್ಳ ಏಜೆಂಟ್ 000, ಗಂಧದ ಗುಡಿಸಂಪತ್ತಿಗೆ ಸವಾಲ್ದೇವರ ಗುಡಿಶುಭಮಂಗಳಮಿಲನಮುರಾರಿಕಲ್ಪನ 2 ಹೀಗೆ ಅವರ ಚಿತ್ರವೈವಿಧ್ಯಗಳು ಅನೇಕ.


ಬಿಜಯಾ 2021 ಜೂನ್ 3ರಂದು  ಲೋಕವನ್ನಗಲಿದರು ಹಿರಿಯ ಕಲಾವಿದರು ತಮ್ಮಬದುಕಿನಲ್ಲಿ ಎಷ್ಟೇ ಕಷ್ಟಗಳನ್ನುಂಡಿದ್ದರೂ ತಮ್ಮ ಕಲಾಪ್ರತಿಭೆಯ ಮೂಲಕ ಉಳಿಸಿ ಹೋದನೆನಪುಗಳು ಸ್ಮರಣೀಯವಾದದ್ದು.



On Remembrance Day of actress B. Jaya

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ