ಅಕ್ಕನ ನೆನಪು
ಅಕ್ಕನ ನೆನಪು
ಇಂದು ನಮ್ಮ ಹಿರಿಯಕ್ಕ ಮತ್ತು ಅತ್ತೆ (ನನ್ನ ಪತ್ನಿ ಲಲಿತಳ ತಾಯಿ) ಶ್ರೀಮತಿ ವೆಂಕಟಲಕ್ಷಮ್ಮ ತಿರು ನಾರಾಯಣ ಅಯ್ಯಂಗಾರ್ ಅವರ ಸಂಸ್ಮರಣೆ ದಿನ. ಅವರು ಹಲವರಿಗೆ ಕಮಲಮ್ಮ ಮತ್ತು ಬಹುತೇಕರಿಗೆ ಕುಟ್ಟಿಮ್ಮ. ನನಗೆ ಅಕ್ಕ, ಪತ್ನಿ ಲಲಿತಳಿಗೆ ಅಮ್ಮ ಮತ್ತು ಮಗಳು ಮಾಧುರಿಗೆ ಪಾಟಿ. ಒಂದು ರೀತಿ ಅಕ್ಕರೆಯ ಲಹರಿಯಲ್ಲಿ ಆಕೆ ಎಲ್ಲವೂ.
ಜೀವನದಲ್ಲಿ ಇಂದಿನ ಯುಗದಲ್ಲಿ ಊಹಿಸಲೂ ಆಗದ ಕ್ಲಿಷ್ಟ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ, ವಿವಿಧ ತಲೆಮಾರುಗಳ ಜೊತೆ ಏಗಿ, ವ್ಯಾಪಕ ಬಂಧು ಬಳಗ ಮತ್ತು ಸ್ನೇಹಲೋಕವನ್ನೆಲ್ಲ ಸಮಸ್ತವನ್ನೂ ತಮ್ಮದೆಂದು ಭಾವಿಸಿಕೊಂಡು ಭೀಗಿ ಸಂಭ್ರಮಿಸುತ್ತಾ ಒಂದಾಗುತ್ತಿದ್ದವರು ಈಕೆ.
ನಮ್ಮ ಅಕ್ಕರೆಯ ಅಕ್ಕ ನಮ್ಮನ್ನಗಲಿದ್ದು 2021ರ ಸೆಪ್ಟಂಬರ್ 3ರಂದು.
ಈ ಹಿರಿಯ ಚೇತನ ಬದುಕಿದ ರೀತಿ, ಅವರು ನೀಡಿದ ಬೆಂಬಲ ಅವರು ತೋರಿದ ಅಕ್ಕರೆ ನಾನೆಂದೂ ಮರೆಯಲಾರೆ.
On Remembrance Day of my sister & mother-in-law
ಕಾಮೆಂಟ್‌ಗಳು