ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಂಕರನಾರಾಯಣನ್


 ಟಿ. ವಿ. ಶಂಕರನಾರಾಯಣನ್


ವಿದ್ವಾನ್ ಟಿ. ವಿ. ಶಂಕರನಾರಾಯಣನ್ ಪ್ರಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರಾಗಿದ್ದವರು.‍ 2013ರಲ್ಲಿ ನಾನು ಮೈಸೂರಲ್ಲಿ ಶಂಕರನಾರಾಯಣನ್ ಅವರ ಸಂಗೀತ ಕೇಳಿದ್ದೆ.  ಅದೊಂದು ಅದ್ಭುತ ಅನುಭವದಂತಿತ್ತು.


2013ರಲ್ಲಿ ಮೈಸೂರಲ್ಲಿ ಶಂಕರನಾರಾಯಣನ್ ಅವರ ಸಂಗೀತ ಕೇಳಿದ್ದೆ.  ಅದೊಂದು ಅದ್ಭುತ ಅನುಭವಂತಿತ್ತು. 

ಕರ್ಣಾಟಕ ಸಂಗೀತದಲ್ಲಿ ಶಂಕರನಾರಾಯಣನ್ ಅವರದು ಒಂದು ರೀತಿಯ ಸುಮಧುರ ಸಂಚಾರವಿದ್ದಂತೆ.  ಬಹುಶಃ ಶಂಕರನಾರಾಯಣನ್ ಅವರಿಗೆ ಈ ಕಲೆ ಅವರ ಸೋದರಮಾವಂದಿರಾದ ಕರ್ಣಾಟಕ ಸಂಗೀತದ ಮೇರು ಶಿಖರರೆನಿಸಿದ್ದ ಮದುರೈ ಮಣಿ ಅಯ್ಯರ್ ಅವರಿಂದಲೇ ಕರಗತವಾಗಿತ್ತು  ಎನಿಸುತ್ತದೆ.  ಮಧುರೈ ಮಣಿ ಅಯ್ಯರ್ ಅವರ ಸಂಗೀತವನ್ನು ಕಿವಿಗೆ ಹಾಕಿಕೊಂಡಿದ್ದವರಿಗೆ ಶಂಕರನಾರಾಯಣನ್ ಅವರ ಸಂಗೀತ ಅದರ ಸಾಮ್ಯತೆಯನ್ನು ತಂದುಕೊಡುವಂತಿತ್ತು.       

ಟಿ. ವಿ. ಶಂಕರನಾರಾಯಣನ್ 1945ರ ಮಾರ್ಚ್ 7ರಂದು ತಂಜಾವೂರು ಜಿಲ್ಲೆಗೆ ಸೇರಿದ ಗ್ರಾಮವೊಂದರಲ್ಲಿ ಜನಿಸಿದರು.  ಬಾರ್ ಕೌನ್ಸಿಲ್ಗೆ ಸ್ವರ್ಣಪದಕದೊಂದಿಗೆ ಪ್ರವೇಶಿಸಿ ಕಾನೂನು ವ್ಯವಹಾರದಲ್ಲಿ ತೊಡಗಿ ಎರಡು ವಾರವೂ ಕಳೆದಿರಲಿಲ್ಲ, ಮಧುರೈ ಮಣಿ   ಅಯ್ಯರ್ ಅವರಿಂದ ಕರೆಬಂತು.  ನಿಜ ಹೇಳು ನೀನು ಹಾಡಿ ಎಷ್ಟು ದಿನ ಆಯ್ತು.  ಬಹಳ ದಿನಗಳಿಂದ ನೀನು ಒಂದು ಕಿಂಚಿತ್ತೂ ಧ್ವನಿ ಹೊರಡಿಸಿಲ್ಲ. ಇದು ಅಕ್ಷಮ್ಯ ಅಪರಾಧ.  ಮೊದಲು ನಿನ್ನ ಕೆಲಸಕ್ಕೆ ಗಂಟೂ ಮೂಟೆ ಕಟ್ಟಿ ಸಂಗೀತದಲ್ಲಿ ತಲ್ಲೀನನಾಗು ಎಂದು ಆದೇಶಿಸಿದರು.  ಹೀಗಾಗಿ ಸಂಗೀತಕ್ಕೊಬ್ಬರು ಮಹಾನ್ ಕಲಾವಿದರು ದಕ್ಕಿದರು.  

1968 ವರ್ಷದಲ್ಲಿ ಕಚೇರಿ ನೀಡಲು ಪ್ರಾರಂಭಿಸಿದ ಶಂಕರನಾರಾಯಣರು ಕ್ರಮೇಣವಾಗಿ ಕರ್ನಾಟಕ ಸಂಗೀತ ಕ್ಷೇತ್ರದ ಪ್ರಧಾನ ಗಾಯಕಾರಾಗಿ ರೂಪುಗೊಂಡರು.  ಮಧುರೈ ಮಣಿ  ಅಯ್ಯರ್ ಅವರಂತೆಯೇ ಸಾಹಿತ್ಯ ಶುದ್ಧಿಯಿಂದ ಕೂಡಿದ  ಭಾವುಕಭರಿತ ಗಾಯನದಿಂದ ಅಸಂಖ್ಯಾತ ಸಂಗೀತ ಪ್ರೇಮಿಗಳನ್ನು ಗಳಿಸಿದರು.  ಭಾರತ ಮತ್ತು ವಿದೇಶಗಳಲ್ಲಿ ಅಸಂಖ್ಯಾತ ಕಾರ್ಯಕ್ರಮಗಳನ್ನು ನೀಡಿರುವುದರ ಜೊತೆಗೆ ಹಲವಾರು ಪ್ರಸಿದ್ಧ ಆಲ್ಬಂಗಳನ್ನು ಕೂಡಾ ಹೊರತಂದಿದ್ದರು.     
 
ಪದ್ಮಭೂಷಣ ಪ್ರಶಸ್ತಿ, ಸಂಗೀತ ಕಲಾನಿಧಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳು ಟಿ. ವಿ. ಶಂಕರನಾರಾಯಣನ್ ಅವರನ್ನು ಅರಸಿ ಬಂದಿದ್ದವು.

ಟಿ. ವಿ. ಶಂಕರನಾರಾಯಣನ್ ಅವರು 2022ರ ಸೆಪ್ಟೆಂಬರ್ 2ರಂದು ನಿಧನರಾದರು.  ಅವರ ನಿಧನದಿಂದ ಶ್ರೇಷ್ಠ ಸಂಗೀತ ಪರಂಪರೆಯ ಮತ್ತೊಂದು ಕೊಂಡಿ ನಮ್ಮ ಲೋಕದಿಂದ ಹೊರನಡೆದಂತೆನಿಸಿತು.

great musician Vidwan T. V. Sankaranarayanan

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ