ರಾಮಾಭಿರಾಮ
ರಾಮಾಭಿರಾಮ ರಮಣೀಯ ನಾಮ
ಸಾಮಜ ರಿಪು ಭೀಮ ಸಾಕೇತ ಧಾಮ
ವನಜಲೋಚನ ನೀ ವಲನಯಲಸಿತಿನಿ
ಮನಸುನ ದಯಲೇದು ಅಲ್ಲಾಡಿ ಫಲಮೇಮಿ (ರಾ)
ಮನಸು ಚೆಲಿ ನೀಕೇ ಮರುಲುಕೊನ್ನದಿ ಕಾನಿ
ಚನುವುನ ಚೆಯಿ ಪಟ್ಟಿ ಮಮುಲ ರಕ್ಷಿಂಪವು (ರಾ)
ಕೋರಿ ಕೋರಿ ನಿನ್ನು ಕೊಲುವಗ ನೀ
ದಾರಿ ವೇರೈನದಿ ಧಾತ ವ್ರಾಲೇಮೋ (ರಾ)
ಕಮನೀಯಮಗು ಪಾನ್ಪು ಕಾವಿಂಚಿತಿನಂದು
ರಮಿಯಿಂಪಕ ನನ್ನು ರಚ್ಚ ಜೇಸೆದವು (ರಾ)
ದಿಕ್ಕು ನೀವನಿ ನೇನು ದಿನ ದಿನಮುನು ನಮ್ಮ
ಎಕ್ಕುವ ತಕ್ಕುವಲಂದು ಎನಸೆಡು ಗುಣಮೇಮೋ (ರಾ)
ನೀಕೇ ದಯ ಪುಟ್ಟಿ ನೀವು ಬ್ರೋವವಲೆ
ರಾಕೇಂದು ಮುಖ ತ್ಯಾಗರಾಜ ವರದ ಶ್ರೀ (ರಾ)
ಸಾಹಿತ್ಯ: ಸಂತ ತ್ಯಾಗರಾಜರು
_________________
*ಭಾವಾರ್ಥ* —
ಓ ರಾಮ, ಅಭಿರಾಮ!
ರಮಣೀಯ ಹೆಸರಿನವನೆ! ಗಜೇಂದ್ರನ ಶತ್ರುವಿಗೆ,
ಸಿಂಹದಂತೆ ಭಯಂಕರನಾದವ ನೀನು!
ಅಯೋಧ್ಯೆಯ ಪ್ರಭುವೇ! ಕಮಲ ನಯನನೆ! ಹುಣ್ಣಿಮೆಯ ಮೊಗದವನೆ! ಈ ತ್ಯಾಗರಾಜನಿಗೆ ವರಗಳನ್ನು ಕೊಡುವವ ನೀನು.
ಪ್ರಭು, ನಿನ್ನ ನಿಮಿತ್ತ ನಾನು ದಣಿದಿದ್ದೇನೆ ; ಆದರೂ, ನಿನ್ನ ಹೃದಯದಲ್ಲಿ ಕನಿಕರವಿಲ್ಲ; ಅಲೆದಾಡುವುದರಿಂದ ಏನು ತಾನೇ ಪ್ರಯೋಜನ? ನನ್ನ ಮನಸ್ಸೆಂಬ ದಾಸಿಯು(ಸಖಿ?) ನಿನ್ನಲ್ಲಿ ಮಾತ್ರ ಮೋಹಗೊಂಡಿದ್ದಾಳೆ ; ಆದರೆ, ನೀನು ನನ್ನ ಕೈಯನ್ನು ಪ್ರೇಮದಿಂದ ಹಿಡಿದು ರಕ್ಷಿಸುತ್ತಿಲ್ಲ.
ನಾನಾದರೋ, ನಿನ್ನನ್ನು ಅಷ್ಟೊಂದು ಉತ್ಸುಕತೆಯಿಂದ ಸೇವಿಸುತ್ತಿರುವಾಗ, ನಿನ್ನ ಮಾರ್ಗವು ಮಾತ್ರ ವಿಭಿನ್ನವಾಗಿರುವುದು ಬ್ರಹ್ಮಲಿಖಿತವೇ ಎಂದು ನನಗೆ ತಿಳಿಯುತ್ತಿಲ್ಲ.
ನಾನೋ ನಿನಗಾಗಿ ಸುಂದರವಾದ ಹಾಸಿಗೆಯನ್ನು ಸಿದ್ಧಪಡಿಸಿದೆ; ಆದರೆ, ನೀನು ಮಾತ್ರಾ ಅದರಲ್ಲಿ ಆನಂದಿಸುವ ಬದಲು, ನನಗೆ ವೇದನೆಯನ್ನೇ ತಂದೆ.
ನನಗೆ ಆಶ್ರಯವು ನೀನೇ ಎಂದು ಅನುದಿನವೂ ನಾನು ನಂಬಿರುವಾಗ, ಅದರಲ್ಲಿ ನ್ಯೂನತೆಗಳನ್ನು ಮಾತ್ರಾ ಕಾಣುತ್ತಿರುವ ನಿನ್ನ ಮನಸ್ಥಿತಿಯಾದರೂ ಎಂತಹದ್ದು?
ಪ್ರಭು, ಚಂದ್ರವದನ, ನಿನಗೇ ನನ್ನಲ್ಲಿ ದಯೆಯು ಹುಟ್ಟುವಂತಾಗಿ ಈ ನಿನ್ನ ತ್ಯಾಗರಾಜನನ್ನು ರಕ್ಷಿಸಬೇಕು 🌷🙏🌷
ಚಿತ್ರವನ್ನು ಕಳಿಸಿದವರು Prakash Kaushik Sir 🌷🙏🌷 🌷
ಕಾಮೆಂಟ್‌ಗಳು