ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಕ್ಷಿತಾ

 

ರಕ್ಷಿತಾ

ನಮ್ಮ ಕನ್ನಡದ ಹುಡುಗಿ - ಕನ್ನಡವನ್ನು ಇಗ್ಲೀಷಿನಲ್ಲಿ ಮಾತಾಡುವವರೂ ಕನ್ನಡಿಗರೇ ತಾನೇ -  ರಕ್ಷಿತಾ ಅವರ ಹುಟ್ಟು ಹಬ್ಬ.  

ರಕ್ಷಿತಾ ಅವರು ಹುಟ್ಟಿದ್ದು 1984ರ ಮಾರ್ಚ್ 31.  ಅಪರೂಪಕ್ಕೆ ನಟಿಯರು ಹುಟ್ಟಿದ ದಿನದ ವಿವರ ಕೂಡಾ ಸಿಗುತ್ತೆ, ಅವರು ನಿವೃತ್ತಿ ಹೊಂದಿದ ಮೇಲೆ!  ಅಥವಾ ಅದಕ್ಕಿಂತ ಹೆಚ್ಚು ಸೂಕ್ತವಾಗಿ ಹೇಳುವುದಾದರೆ ಅವರು ರಾಜಕೀಯಕ್ಕೆ ಸೇರಿದ ಮೇಲೆ.  ರಕ್ಷಿತಾ  ಕನ್ನಡದ ಶ್ರೇಷ್ಠ ಛಾಯಾಗ್ರಾಹಕ ದಿವಂಗತ ಬಿ.ಸಿ. ಗೌರೀಶಂಕರ್ ಮತ್ತು ನಟಿ ಮಮತಾ ರಾವ್ ಅವರ ಮಗಳು.  ಬೆಳೆದದ್ದು ಹೆಚ್ಚು ಮುಂಬೈನಲ್ಲಿ. 

ಈಗಿನ ಕಾಲದ ಸಿನಿಮಾ ಹೆಸರು ಮತ್ತು ನಟ ನಟಿಯರ ಹೆಸರು ಸ್ವಲ್ಪ ನೆನಪಲ್ಲಿ ಉಳಿಯೋದು ಕಷ್ಟ. ಅಂದು ಒಬ್ಬೊಬ್ಬನಾಯಕ  ನಟ, ನಟಿಯರು  ನೂರು, ಇನ್ನೂರು ಚಿತ್ರದಲ್ಲಿ ಮಿಂಚ್ತಾ ಇದ್ರು.  ಇಂದು ಎರಡನೇ ಚಿತ್ರ ನಟಿಸುವವರೂ ಕಡಿಮೆ ಆಗ್ತಾ ಇದ್ದಾರೆ!   ಅಂದು ಬಂಗಾರದ ಮನುಷ್ಯ, ನಾಗರಹಾವು, ಬೆಳ್ಳಿಮೋಡ, ಹೊಂಬಿಸಿಲು ಇತ್ಯಾದಿ ಮುದ ನೀಡುವ ಹೆಸರು  ಇರ್ತಾ ಇತ್ತು.  ಇಂದು ಅಪ್ಪು, ಡೆಡ್ಲಿ ಸೋಮ, ಕಳಾಸಿಪಾಳ್ಯ, ಗೋಕರ್ಣ, ಲವ್ವು, ಪ್ರೇಮ ಪ್ರೀತಿ ಪ್ರಣಯ, ಅಯ್ಯಾ, ಮಂಡ್ಯ, ಸುಂಟರಗಾಳಿ   ಇತ್ಯಾದಿ ಹೆಸರು ಸಿನಿಮಾಗೆ ಇರುತ್ತೆ.  ಅಂದ ಹಾಗೆ ಇವು ರಕ್ಷಿತಾ  ಅವರು ನಟಿಸಿದ ಹಲವು ಚಿತ್ರಗಳು.  ಅಪ್ಪು ಚಿತ್ರದಲ್ಲಿ ರಾಜ್ ಅವರ ಮಗ ಪುನೀತ್ ಜೊತೆ ಬಂದ ರಕ್ಷಿತಾ ಮುಂದೆ ಹಲವಾರು ನಾಯಕ ನಟರಾದ ದರ್ಶನ್, ಸುದೀಪ್, ಉಪೇಂದ್ರ, ನಾಗಾರ್ಜುನ, ಶಿವರಾಜ್ ಕುಮಾರ್ ಮುಂತಾದವರ ಜೊತೆ ಅಭಿನಯಿಸಿದರು.  ನಾಗಾರ್ಜುನ ಇತ್ಯಾದಿ ಅಂದ್ರೆ ಕನ್ನಡದ ಗಡಿ ಆಚೆ ತಮಿಳು, ತೆಲುಗು ಇತ್ಯಾದಿ ಭಾಷೆಗೂ ಹೋಗಿದ್ರು ಅಂತ ಅಲ್ವ. ಜೋಗಿ ಚಿತ್ರದ ನಿರ್ದೇಶನದ ಮೂಲಕ ಜನಪ್ರಿಯರಾದ ಪ್ರೇಮ್ ಜೊತೆ ವಿವಾಹವಾದರು.  ಮುಂದೆ   ತಾಯಿಯಾದರು. ಚಿತ್ರ ನಿರ್ಮಾಪಕಿಯಾದರು.

ಬಂದಾಗ ಮುದ್ದು ಮುಖದ ಹುಡುಗಿ ಆಗಿದ್ದರು.  ತಮ್ಮ ರಾಶಿ  ಕ್ಯಾನ್ಸರ್ರು ಅನ್ನೋದನ್ನ ಸಾಧು ಕೋಕಿಲಾಗೆ ಕ್ಯಾನ್ಸರ್ ಅಂತ ಕೇಳಿಸಿ  ದುಃಖ ಹುಟ್ಟಿಸಿ, ನಾಗವಲ್ಲಿ ತರಹ ಹೆದರಿಸಿದ್ದರು, ಮಾಡರ್ನ್ ರೀತಿಯಲ್ಲಿ ಇನ್ನು ಯಾಕ ಬರಲಿಲ್ಲ ಹುಬ್ಬಳ್ಳಿಯವ ಅಂತ ಅಭಿನಯಿಸಿದ್ರು, ಈ ಟಚ್ಚಲಿ ಏನೋ ಇದೆ ಎಂದು ಬೋಲ್ಡ್ ಆಗಿದ್ರು ಹೀಗೆ ಅವರದ್ದು ಹಲವು ಪಾತ್ರಗಳು.

On the birthday of actress Rakshita 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ