ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ವಿ. ಅರ್ಕನಾಥ್


ಕೆ. ವಿ. ಅರ್ಕನಾಥ್


ಪ್ರೊ. ಕೆ. ವಿ. ಅರ್ಕನಾಥ್ ಮೈಸೂರಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಹೆಸರಾಗಿದ್ದ ಗಣ್ಯರು.  ಇಂದು ಅವರ ಸಂಸ್ಮರಣೆ ದಿನ.


ಅರ್ಕನಾಥ್ ಅವರು 1932ರ ಏಪ್ರಿಲ್ 25ರಂದು ಕೃಷ್ಣಾಪುರದಲ್ಲಿ ಜನಿಸಿದರು.  ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪಡೆದ ಇವರು ಕೆ.ಆರ್.ನಗರದಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. 1952ರಲ್ಲಿ ಬಿಎಸ್ಸಿ, 1954 ರಲ್ಲಿ ಎಂಎಸ್ಸಿ ಪದವಿಗಳನ್ನು ಪಡೆದರು. 

ಅರ್ಕನಾಥ್ ಅವರು 1955ರಲ್ಲಿ ಶಿಕ್ಷಕ ವೃತ್ತಿಗೆ ಕಾಲಿರಿಸಿದರು. 1956ರಲ್ಲಿ ಮೈಸೂರಿನ ಶಾರದಾ ವಿಲಾಸ ಶಿಕ್ಷಣ ಸಂಸ್ಥೆಗೆ ಭೌತಶಾಸ್ತ್ರ ಉಪನ್ಯಾಸಕರಾಗಿ ಸೇರ್ಪಡೆಯಾದರು. ಇದೇ ವಿಭಾಗದಲ್ಲಿ ಫ್ರೊಫೆಸರ್ ಮತ್ತು ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಇವರು 1988ರಲ್ಲಿ ನಿವೃತ್ತರಾದರು.  ಇದೇ ಸಂಸ್ಥೆಯಲ್ಲಿ ಇವರು ಕ್ರೀಡಾ ಚಟುವಟಿಕೆಗಳ ಕಾರ್ಯದರ್ಶಿಗಳಾಗಿ 18 ವರ್ಷಗಳ ಕಾಲ ಸಕ್ರಿಯರಾಗಿದ್ದರು.

ಮುಂದೆ ಅರ್ಕನಾಥ್ ಅವರು ಮೈಸೂರಿನ ಸದ್ವಿದ್ಯಾ ಶಿಕ್ಷಣ ಸಂಸ್ಥೆಯಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಆ ವಿದ್ಯಾಸಂಸ್ಥೆಯು ಅಗ್ರಗಣ್ಯ ವಿದ್ಯಾಸಂಸ್ಥೆಯಾಗಿ ಹೆಸರಾಗುವಲ್ಲಿ ಪ್ರಮುಖ ಪಾತ್ರ ವಹಿಸಿದರು.  ಇದಲ್ಲದೆ 2006ರಲ್ಲಿ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ ಸದ್ವಿದ್ಯಾ ಸೆಮಿ ರೆಸಿಡೆನ್ಸಿಯಲ್ ಶಾಲೆಯನ್ನು ಸ್ಥಾಪಿಸಿದರು. ಮೈಸೂರು ವಿಶ್ವ ವಿದ್ಯಾನಿಲಯದ ಅಕಡೆಮಿಕ್ ಕೌನ್ಸಿಲ್, ಅಧ್ಯಯನ ಮಂಡಳಿ, ಪಠ್ಯಪುಸ್ತಕ ಸಮಿತಿ, ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಪರೀಕ್ಷಾ ಮಂಡಳಿಯಲ್ಲೂ ಸೇವೆ ಸಲ್ಲಿಸಿದ್ದರು.

ಅರ್ಕನಾಥ್ ಅವರು 1973-78 ಅವಧಿಯಲ್ಲಿ ಎಬಿವಿಪಿ ರಾಜ್ಯ ಅಧ್ಯಕ್ಷರಾಗಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದ ಇವರಿಗೆ ಅನೇಕ ರಾಜ್ಯ ಮತ್ತು ರಾಷ್ಟ್ರಮಟ್ಟದ  ನಾಯಕರೊಂದಿಗೆ ಆಪ್ತ ಸಂಪರ್ಕವಿತ್ತು. ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷರಾಗಿದ್ದ ಇವರು ಮೈಸೂರು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿದ್ದರು. ಬ್ರಾಹ್ಮಣ ಧರ್ಮ ಸಹಾಯ ಸಭಾ ಉಪಾಧ್ಯಕ್ಷರಾಗಿ, ಬಿಡಾರಂ ಕೃಷ್ಣಪ್ಪ ರಾಮಮಂದಿರದ ಗೌರವ ಕಾರ್ಯದರ್ಶಿಗಳಾಗಿ,  ಚಾಮರಾಜ ಪುರಂನ ಕಾಶಿ ವಿಶ್ವನಾಥ ಟ್ರಸ್ಟ್‌ನ ಸದಸ್ಯರಾಗಿ, ಕೃಷ್ಣಮೂರ್ತಿಪುರಂನ ಶ್ರೀರಾಮ ಮಂದಿರ ಸದಸ್ಯರಾಗಿ, ಕೌಶಿಕ ಸಂಕೇತಿ ಸಂಘದ ಅಧ್ಯಕ್ಷರು ಮತ್ತು ಸಕ್ರಿಯ ಕಾರ್ಯಕರ್ತರಾಗಿ ಹೀಗೆ ಅನೇಕ ರೀತಿಯಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಸಕ್ರಿಯರಾಗಿದ್ದರು.

ಅರ್ಕನಾಥ್ ಅವರಿಗೆ ಅನೇಕ ಸಂಘ ಸಂಸ್ಥೆಗಳ ಗೌರವಗಳು ಸಂದಿದ್ದವು.  ಅವರ ಅಭಿಮಾನಿಗಳು 'ಸೇವಾರ್ಕ' ಎಂಬ ಅಭಿನಂದನ ಗ್ರಂಥ ಅರ್ಪಿಸಿದ್ದರು.

ಅರ್ಕನಾಥ್ ಅವರು 2012ರ ಏಪ್ರಿಲ್ 30ರಂದು ಈ ಲೋಕವನ್ನಗಲಿದರು. 🌷🙏🌷

ಕೃತಜ್ಞತೆಗಳು: Amba Arkanath, Krupa Shamasundar 🌷🙏🌷

On Rememberance Day of Prof. K.V. Arkanath 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ