ಸುಬ್ರಹ್ಮಣ್ಯ ಹೆಗಡೆ ಅಬ್ಳಿ
ಸುಬ್ರಹ್ಮಣ್ಯ ಹೆಗಡೆ ಅಬ್ಳಿ
ಕೃಷಿಕರಾದ ಸುಬ್ರಹ್ಮಣ್ಯ ಹೆಗಡೆ ಅಬ್ಳಿ ಅವರು ಸಾಹಿತ್ಯ ಕೃಷಿಯಲ್ಲೂ ಸಾಧನೆ ಮಾಡುತ್ತ ಬಂದಿದ್ದಾರೆ.
ಜೂನ್ 1, ಸುಬ್ರಹ್ಮಣ್ಯ ಹೆಗಡೆ ಅವರ ಜನ್ಮದಿನ. ಇವರ ಊರು ಹೊನ್ನಾವರ.
ಬಹಳ ವರ್ಷಗಳಿಂದಲೇ ಹೃದಯಾಂತರಾಳದಲ್ಲಿ ಸಾಹಿತ್ಯಕ ಆಪ್ತತೆಯನ್ನು ಪೋಷಿಸಿಕೊಂಡು ಬಂದಿರುವ ಸುಬ್ರಹ್ಮಣ್ಯ ಹೆಗಡೆ ಅಬ್ಳಿ ಅವರು, ತಮ್ಮ ಬರೆಹಗಳನ್ನು ಹೊರ ಪ್ರಪಂಚಕ್ಕೆ ತಂದಿರುವುದು ಇತ್ತೀಚಿನ ವರ್ಷಗಳಲ್ಲಿ.
ಸುಬ್ರಹ್ಮಣ್ಯ ಹೆಗಡೆ ಅವರ ಬರೆಹಗಳು ಎಲ್ಲ ನಿಯತಕಾಲಿಕಗಳಲ್ಲಿ ಮತ್ತು ಅಂತರಜಾಲ ಮಾಧ್ಯಮಗಳಲ್ಲಿ ಕಂಗೊಳಿಸುತ್ತಿವೆ. ಇವರ 'ಗುಂದ' ಎಂಬ ಕಾದಂಬರಿ ಮತ್ತು 'ಸಣಕಲು ಗಿಡದ ಸವಕಲು ಕನಸು' ಎಂಬ ಕಾವ್ಯ ಸಂಕಲನದ ಕೃತಿಗಳು ಪ್ರಕಟಗೊಂಡು ಉತ್ತಮ ವಿಮರ್ಶೆ ಮತ್ತು ಜನರ ಆದರಗಳನ್ನು ಗಳಿಸಿವೆ.
ಸರಳ ಸಹೃದಯಿ ಸಾಹಿತಿ ಸುಬ್ರಹ್ಮಣ್ಯ ಹೆಗಡೆ ಅಬ್ಳಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ
Happy birthday Abli Hegde Sir 🌷🙏🌷
ಕಾಮೆಂಟ್‌ಗಳು