ಹಟ್ಟಿ ಸಾವಿತ್ರಿ ಪ್ರಭಾಕರಗೌಡ
ಹಟ್ಟಿ ಸಾವಿತ್ರಿ ಪ್ರಭಾಕರಗೌಡ
ಹಟ್ಟಿ ಸಾವಿತ್ರಿ ಪ್ರಭಾಕರಗೌಡ ಅವರು ಕನ್ನಡದ ಮಣ್ಣಿನ ಅನೇಕ ವೈಶಿಷ್ಟ್ಯಗಳನ್ನು ಹೃದಯದಲ್ಲಿ ಪ್ರೀತಿಯಿಂದ ತುಂಬಿಕೊಂಡಿರುವ ಹೆಣ್ಣುಮಗಳು. ಇಂದು ಇವರ ಜನ್ಮದಿನ.
ಗದಗದ ಲಕ್ಕುಂಡಿಯ ಸಮೀಪದ ಮೂಲದವರಾದ ಸಾವಿತ್ರಿ, ಜೀವನ ತಂದ ವಿವಿಧ ಪರೀಕ್ಷೆಗಳನ್ನು ಎದುರಿಸಿ ವಿದ್ಯಾಭ್ಯಾಸ ಸಾಧಿಸಿದವರು. ಪ್ರಸಕ್ತ ಕುಣಿಗಲ್ ತಾಲ್ಲೂಕಿನ ಯಡಿಯೂರು ಬಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ನಾಗಸಂದ್ರದ ನಿವಾಸಿಯಾಗಿದ್ದಾರೆ. ಸ್ನಾತಕೋತ್ತರ ಪದವಿಯನ್ನೂ ಬಗಲಿಗೇರಿಸಿಕೊಂಡಿದ್ದಾರೆ.
ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಪ್ರೀತಿಯುಳ್ಳ ಸಾವಿತ್ರಿ, ತಮ್ಮ ದೈನಂದಿನ ಆಗುಹೋಗುಗಳನ್ನು ಪರಿಶುದ್ಧ ಗ್ರಾಮೀಣ ಸೊಗಡಿನಲ್ಲಿ ಅಭಿವ್ಯಕ್ತಿಸುವುದು ನಿಜಕ್ಕೂ ಸುಂದರವೆನಿಸುವಂತದ್ದು.
ಕುಟುಂಬ, ಪರಿಸರ, ಶಾಲೆ, ಮಕ್ಕಳು, ಸಮಾಜ, ಸಾಮೂಹಿಕ ಜಾಲತಾಣ ಹೀಗೆ ಎಲ್ಲೆಡೆ ಎಲ್ಲರನ್ನೂ ಆಪ್ತವಾಗಿ ಕಾಣುವ ಈ ಸಹೃದಯಿಗೆ ತಾನು ರಚಿಸಿರುವ ಷಟ್ಪದಿಗಳನ್ನು ಪುಸ್ತಕವಾಗಿಸಬೇಕು, ತನಗಿರುವ ಕೃಷ್ಣನ ಕುರಿತಾದ ಪ್ರೀತಿಯನ್ನು ತೋಡಿಕೊಳ್ಳಲು ವ್ಯವಸ್ಥಿತವಾಗಿ ಸಂಗೀತ ಕಲಿಯಬೇಕು ಮುಂತಾದ ಆಪ್ತ ಆಶಯಗಳಿವೆ. ಅಂತೆಯೇ ಬದುಕು ನಿರ್ಮಿಸುವ ಕೆಲವು ಅಡ್ಡಗೋಡೆಗಳ ಅರಿವೂ ಇದೆ.
ಆಪ್ತ ಸಹೃದಯಿಯಾದ ಈ ಸಾವಿತ್ರಿಗೆ ಬೇಕಿದ್ದು ಲಭಿಸಲಿ. ಯಾವ ತೊಂದರೆಗಳೂ ಕಾಡದಿರಲಿ ಎಂದು ಆಶಿಸುತ್ತ, ಹುಟ್ಟುಹಬ್ಬದ ಶುಭಹಾರೈಕೆಗಳನ್ನು ಹೇಳೋಣ.
Hatti Savithri Prabhakara Gowda
ಕಾಮೆಂಟ್ಗಳು