ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೃಷ್ಣಾಬಾಯಿ ಹಾಗಲವಾಡಿ

ಕೃಷ್ಣಾಬಾಯಿ ಹಾಗಲ ವಾಡಿ


ಪ್ರೊ. ಕೃಷ್ಣಾಬಾಯಿ ಹಾಗಲವಾಡಿ ಅವರು ಬಹುಮುಖಿ ಬರಹಗಾರ್ತಿಯಾಗಿ, ವಾಗ್ಮಿಯಾಗಿ, ನಿರೂಪಕರಾಗಿ ಸಾಧನೆ ಮಾಡುತ್ತ ಬಂದಿದ್ದಾರೆ.

ಅಕ್ಟೋಬರ್ 6, ಕೃಷ್ಣಾಬಾಯಿ ಅವರ ಜನ್ಮದಿನ.  ಕೃಷ್ಣಾಬಾಯಿ ಅವರ ಕಥೆ, ಕಾದಂಬರಿ, ಕವಿತೆ ಮುಂತಾದ ಹಲವು ರೀತಿಯ ಬರಹಗಳು ಎಲ್ಲೆಡೆ ಪ್ರಕಾಶಿಸಿವೆ. ಇತ್ತೀಚಿನ ವರ್ಷ ಅವರ 'ಧರ್ಮಸಂಸ್ಥಾನ' ಐತಿಹಾಸಿಕ ಕಾದಂಬರಿ ಪ್ರಕಟಗೊಂಡಿದೆ. ಕಥೆ, ಕಾವ್ಯ, ವ್ಯಕ್ತಿ, ಪುಸ್ತಕ, ಇತಿಹಾಸ, ಸಂಸ್ಕೃತಿಗಳ ಕುರಿತಾಗಿ ಇವರು ಅನೇಕ ವಿಡಿಯೋಗಳ ಮೂಲಕ ನೂರಾರು ಪರಿಚಯವನ್ನೂ ಮಾಡುತ್ತಿದ್ದಾರೆ.

ಕೃಷ್ಣಾಬಾಯಿ ಹಾಗಲವಾಡಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಲೇಖಕಿಯರ ಸಂಘದ ದತ್ತಿ ಪ್ರಶಸ್ತಿಗಳೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

ಆತ್ಮೀಯರಾದ ಕನ್ನಡ ಪ್ರೀತಿಯ ಕೃಷ್ಣಾಬಾಯಿ ಹಾಗಲವಾಡಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday Krishna Bai 🌷🙏🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ