ಶಿಲ್ಪಾ ಮ್ಯಾಗೇರಿ
ಶಿಲ್ಪಾ ಮ್ಯಾಗೇರಿ
ವೃತ್ತಿಯಲ್ಲಿ ಉಪನ್ಯಾಸಕಿಯಾಗಿರುವ ಶಿಲ್ಪಾ ಮ್ಯಾಗೇರಿ ಅವರು ಕವಯಿತ್ರಿಯಾಗಿ ಸಾಧನೆ ಮಾಡಿದ್ದಾರೆ.
ಮಾರ್ಚ್ 16, ಶಿಲ್ಪಾ ಅವರ ಜನ್ಮದಿನ. ಗದುಗಿನ ನಿವಾಸಿಯಾಗಿರುವ ಇವರು ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್ ಪದವಿಗಳನ್ನು ಗಳಿಸಿ,
ತೋಂಟದಾರ್ಯ ಶಿಕ್ಷಣ ಸಂಸ್ಥೆಯಾದ
ಬಸವೇಶ್ವರ ಮಹಾವಿದ್ಯಾಲಯದಲ್ಲಿ ಉಪನ್ಯಾಸಕಿ ಸೇವೆ ಸಲ್ಲಿಸುತ್ತಿದ್ದಾರೆ.
ಚಿಕ್ಕಂದಿನಿಂದಲೇ ಸಾಹಿತ್ಯಾಸಕ್ತಿ ಮೂಡಿಸಿಕೊಂಡ ಶಿಲ್ಪಾ ಅವರ ಬರೆಹಗಳು ಅನೇಕ ನಿಯತಕಾಲಿಕಗಳಲ್ಲಿ ಮೂಡಿಬಂದಿವೆ. ವಿಶೇಷವಾಗಿ ಇವರು ಸ್ತ್ರೀ ಲೋಕದ ಸುತ್ತ ಹೆಚ್ಚು ಕವಿತೆ ಕಥೆಗಳನ್ನು ಬರೆದಿದ್ದಾರೆ.
ಶಿಲ್ಪಾ ಮ್ಯಾಗೇರಿ ಅವರ ಕವಿತೆಗಳು ಭಾರತಾಂಬೆ, ಮಾತು ಮೌನದ ನಡುವೆ, ಚೈತ್ರದ ಚರಮಗೀತೆ ಎಂಬ ಕವಿತಾ ಸಂಕಲನಗಳು ಮತ್ತು ಆಕಾಶಕ್ಕೊಂದು ಏಣಿ ಎಂಬ ಚುಟುಕು ಸಂಕಲನದಲ್ಲಿ ಮೂಡಿಬಂದಿವೆ.
ಶಿಲ್ಪಾ ಮ್ಯಾಗೇರಿ ಅವರಿಗೆ ಬೆಳಗಾವಿಯ ಹೊಂಬೆಳಕು ಸಾಂಸ್ಕೃತಿಕ ಸಂಘ ನೀಡುವ ರಾಷ್ಟ್ರ ಕೂಟ ಸಾಹಿತ್ಯಶ್ರೀ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಸಾಹಿತ್ಯ, ಸಂಸ್ಕೃತಿಗಳ ಪ್ರೀತಿಯ ಉಪನ್ಯಾಸಕಿ ಶಿಲ್ಪಾ ಮ್ಯಾಗೇರಿ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.
Happy birthday Shilpa Myageri Shilpa Myageri🌷🌷🌷
ಕಾಮೆಂಟ್‌ಗಳು