ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂತ ತುಕಾರಾಮ

ಸಂತ ತುಕಾರಾಮರು

ಇಂದು ಸಂತ ತುಕಾರಾಮರ ಪುಣ್ಯದಿನ. 

ಸಂತ ತುಕಾರಾಮರು ಹದಿನೇಳನೇ ಶತಮಾನದ ಮಹಾರಾಷ್ಟ್ರದ ಭಕ್ತಿಪಂಥದಲ್ಲಿ ಕೇಳಿಬರುವ ಪ್ರಧಾನ ಹೆಸರು.  

ಶಿವಾಜಿ ಮಹಾರಾಜರ ಗುರುವಾಗಿದ್ದ ಸಮರ್ಥರಾಮದಾಸರು ಮಹಾರಾಷ್ಟ್ರದಲ್ಲೆಲ್ಲ ಧರ್ಮಪ್ರಚಾರ ಕಾರ್ಯವನ್ನು ತಮ್ಮ ಶಿಷ್ಯರ ಮುಖಾಂತರ ಕೈಕೊಂಡಿದ್ದರು.  ಈ ಶಿಷ್ಯರು ಹೋದೆಡೆಯಲ್ಲೆಲ್ಲ, ನಾಮಸಂಕೀರ್ತನೆಯನ್ನು ಮಾಡಿದ್ದಲ್ಲದೆ, ಪ್ರವಚನಗಳ ಮೂಲಕವೂ ಸೇರಿದ ಜನರಿಗೆ ಬೋಧೆಯನ್ನೂ ಪ್ರಚೋದನೆಯನ್ನೂ ಒದಗಿಸಿದರು. ಇದೇ ಪರಂಪರೆಗೆ ಸೇರಿದ ಸಂತ ತುಕಾರಾಮ್ ಪಂಢರಪುರ ದೇವಾಲಯದಲ್ಲಿ ಈ ರೀತಿಯ ಕೀರ್ತನೆಗಳನ್ನೂ ಭಜನೆ, ಅಭಂಗ ಗಾಯನ, ಪ್ರವಚನಗಳನ್ನೂ ಮಾಡುತ್ತಿದ್ದೆಂದೂ  ಅದನ್ನು ಕೇಳಲು ಶಿವಾಜಿ ಮಹಾರಾಜರೇ ಅಜ್ಞಾತರಾಗಿ ಬರುತ್ತಿದ್ದರೆಂದೂ ಪ್ರತೀತಿ ಇದೆ.

ತುಕಾರಾಮರ ಜೀವನವು ಅವರ ‘ಗಾಥಾ'ದಲ್ಲಿ ಒಟ್ಟುಗೂಡಿರುವ ಅಭಂಗಗಳಷ್ಟೇ ಬೋಧಪುದವಾಗಿದೆ. ತುಕಾರಾಮರು ಕ್ರಿಶ. 1650ರಲ್ಲಿ ನಿಗೂಢವಾಗಿ ಅದೃಶ್ಯರಾದ ಒಂದೂಕಾಲು ಶತಮಾನಗಳ ನಂತರ ಮಹೀಪತಿಯು ಬರೆದ "ಭಕ್ತ ಲೀಲಾಮೃತ'ದಿಂದ ಅವರ ಬದುಕಿನ ವಿವರಗಳನ್ನು ತಿಳಿಯಬಹುದಾಗಿದೆ.

ತುಕಾರಾಮರು ಹುಟ್ಟಿದ ವರ್ಷ ಖಚಿತವಾಗಿ ತಿಳಿದಿಲ್ಲ.  ಕ್ರಿ.‍ಶ. 1608 ಇರಬಹುದೆಂದು

ಭಾವಿಸಲಾಗಿದೆ. ಸಮರ್ಥ ರಾಮದಾಸರೂ ಅದೇ ವರ್ಷದಲ್ಲಿ ಹುಟ್ಟಿದರು.  ಪೂನಾದ ಬಳಿಯ ದೇಹು ತುಕಾರಾಮರ ಜನ್ಮಸ್ಥಳ. ಅಲ್ಲಿ ಅವರ ಪೂರ್ವಿಕರ ಮನೆ ಇನ್ನೂ ಇದೆ. ಮಹೀಪತಿಯ ಪ್ರಕಾರ ಸಂತ ತುಕಾರಾಮರ ಪೂರ್ವಿಕರಲ್ಲಿ

ನಮಗೆ ಗೊತ್ತಿರುವ ಮೊದಲಿಗರು ಸಂತ ನಾಮದೇವರು (ಮ. 1350).  ಅವರ ಸಮಕಾಲೀನರಾದವರು ವಿಶ್ವಂಭರರು. ಅನೇಕ ದೈವಭಕ್ತರನ್ನಿತ್ತ ವಂಶ ತುಕಾರಾಮರದ್ದು. ಸರಳತೆಯಲ್ಲೂ ಭಕ್ತಿಯ ಆವೇಗದಲ್ಲೂ ವಿಶ್ವಂಭರರು ನಾಮದೇವರನ್ನು

ಹೋಲುತ್ತಿದ್ದರು. ಅವರೆಲ್ಲ ವಾರ್ಕರಿ- ಅಥವಾ ಪಂಢರಾಪುರದ ಒಕ್ಕಲಾಗಿದ್ದರು. ವಿಠಲನ ಆವಾಸದ ದರ್ಶನವನ್ನು, ವಿಶೇಷವಾಗಿ 'ಆಷಾಢೀ ಏಕಾದಶಿ'ಯ ದಿನ,  ನಿಯಮಿತವಾಗಿ ಮಾಡುತ್ತಿದ್ದರು. ತುಕಾರಾಮರಿಗೆ ನಂತರ ಆದಂತೆ, ವಿಶ್ವಂಭರರಿಗೂ ಅನಾರೋಗ್ಯದಿಂದೇನಾದರೂ ಪಂಢರಾಪುರಕ್ಕೆ ಹೋಗಿಬರುವುದು ತಪ್ಪಿಹೋದರೆ ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸುತ್ತಿದ್ದರು.  ಒಮ್ಮೆ ಹಾಗಾಯಿತು. ಆದರೆ ಅವರ ಪ್ರಾಮಾಣಿಕ ಭಕ್ತಿಯನ್ನು ಗುರುತಿಸಿದ. ವಿಠೋಬ, ಅವರ ಕನಸಿನಲ್ಲಿ ಕಾಣಿಸಿಕೊಂಡು ದೇಹುವನ್ನೇ ತನ್ನ ದ್ವಿತೀಯಾವಾಸ ಮಾಡಿಕೊಳ್ಳುವುದಾಗಿ ವಚನ ಕೊಟ್ಟನಂತೆ. ಕನಸಿನಲ್ಲಿ ಬೋಧವಾದಂತೆ ವಾಸ್ತವವಾಗಿಯೂ ವಿಶ್ವಂಭರರು ತಮ್ಮ ಮನೆಯ ಸಮೀಪದಲ್ಲೇ ವಿಠ್ಠಲ ಮತ್ತು ರಖುಮಾಯಿಯ ವಿಗ್ರಹಗಳನ್ನು ಹುಡುಕಿ ತೆಗೆದರು. ಆರುನೂರು ವರ್ಷಗಳ ಕೆಳಗೆ ವಿಶ್ವಂಭರರು ಪ್ರತಿಷ್ಠಾಪನೆ ಮಾಡಿದ ಈ ವಿಗ್ರಹಗಳು ದೇಹುವಿನಲ್ಲಿ

ಈಗಲೂ ಇವೆ. ಹೀಗಾಗಿ ದೇಹು ವಾರ್ಕರಿಗಳಿಗೆಲ್ಲ ದ್ವಿತೀಯ ಪಂಢರಿಯಾಯಿತು. ಇಂದ್ರಾಯಣಿ ನದಿಯಮೇಲೆ ಜ್ಞಾನದೇವರು ಪ್ರತಿಷ್ಠಾಪಿಸಿದ ಆಲಂದಿಯು, ದೇಹು ಇಂದ ಹೆಚ್ಚು ದೂರವೇನಿಲ್ಲ.

ಒಂದು ಐತಿಹ್ಯದಂತೆ, ತುಕಾರಾಮರ ಜನನವನ್ನು, ಅವರ ಲೋಕಾ ಗಮನವನ್ನು, ಸ್ವತಃ ರುಕ್ಮಿಣಿಯೇ ನಿಂತು ಮಾಡಿಸಿದಳು ಮತ್ತು ಮಗುವನ್ನು

ತೊಟ್ಟಲಿಗೆ ಹಾಕಿದಾಗ ಜೋಗುಳವನ್ನು ಹಾಡಿದ್ದಳು. ಆಳವಾದ ಅಧ್ಯಾತ್ಮ್ಯಯೋಗದಿಂದ ಕೂಡಿದ ಆ ಗೀತೆಯನ್ನೂ ಮಹೀಪತಿಯು ದಾಖಲಿಸಿದ್ದಾರೆ. ಪುರಾಣವು ಆತ್ಮದ ಭಾಷೆ-ಬುದ್ಧಿಯನ್ನು ಮೀರಿ ಯೋಚಿಸಲಾಗದವರಿಗೆ ಅದಕ್ಕೆ ಹೆಚ್ಚು ಅರ್ಥವಿಲ್ಲ.  ಆದರೆ ಭಕ್ತರಿಗೆ ಅಂಥ ವಿಷಯಗಳು ಹೆಚ್ಚು ಅರ್ಥವಾಗುತ್ತವೆ.

ತನಗೆ ದೊರೆತ ಎಲ್ಲ ಮೂಲಗಳಿಂದಲೂ ವಿಷಯಗಳನ್ನು ಸಂಗ್ರಹಿಸಲು ಶ್ರಮಿಸಿದ್ದಾಗಿಯೂ ಕೂಡ ಸ್ವತಃ ಮಹೀಪತಿಯೇ, ತನ್ನ ಕೃತಿಗೆ ಸ್ಪಪ್ನದಲ್ಲಿ ಸಂತ ತುಕಾರಾಮರಿಂದ ಪ್ರೇರಣೆಯಾಯಿತೆಂದು ಬರೆಯುತ್ತಾರೆ. ಈ ಸ್ವಪ್ನ ದರ್ಶನಗಳೂ ಮತ್ತು ಪ್ರೇರಣೆಗಳು ಅಂದಿಗೆ ಸಾಮಾನ್ಯ ಅನುಭವಗಳಾಗಿದ್ದವು. ತುಕಾರಾಮರೂ ಬಹಳೊಮ್ಮೆ ಹೀಗೆ ಕಂಡಿದ್ದರು. ಅವರ ಗುರುಗಳಾದ ಬಾಬಾ ಚೈತನ್ಯರು ಅವರಿಗೆ ಸ್ವಪ್ನದರ್ಶನವಿತ್ತು ತುಕಾರಾಮರಿಗಾಗಲೇ ಅಚ್ಚುಮೆಚ್ಚಿನದಾಗಿದ್ದ 'ರಾಮಕೃಷ್ಣಹರಿ'

ಎಂಬ  ಗುರುಮಂತ್ರವನ್ನು ಉಪದೇಶಿಸಿದರು. ಮತ್ತೊಂದು ಕನಸಿನಲ್ಲಿ ನಾಮದೇವರು, ಸ್ವಯಂ ವಿಠೋಬನೊಡಗೂಡಿ ಕಾಣಿಸಿಕೊಂಡು, ತಾವು ಅಪೂರ್ಣವಾಗಿ ಉಳಿಸಿದ ಅಭಂಗಗಳ  ರಚನೆಯನ್ನು ಪೂರ್ಣಗೊಳಿಸುವಂತೆ ತುಕಾರಾಮರಿಗೆ ಆದೇಶಿಸಿದರು. ಜನರು ತುಕಾರಾಮರನ್ನು ನಾಮದೇವರ ಅವತಾರವೆಂದು ಭಾವಿಸಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಅಧ್ಯಾತ್ಮದಲ್ಲಿ ಇಬ್ಬರೂ ಪ್ರತಿರೂಪಗಳೇ.

ಬಹಿಣಾಬಾಯಿ ಕೊಲ್ಹಾಪುರದಲ್ಲಿ ಹುಟ್ಟಿದವಳು; ಆದರೆ ಆಕೆ ತನ್ನ ಒಂದು ಹಾಡಿನಲ್ಲಿ ಹೇಳುವಂತೆ, ತುಕಾರಾಮರು ಆಕೆಗೆ ಸ್ವಪ್ನದರ್ಶನವನ್ನಿತ್ತು, ತನ್ನ

'ಮಂತ್ರಗೀತೆ'ಯ ಒಂದು ಪ್ರತಿಯನ್ನು ಕೊಟ್ಟು ಆಶೀರ್ವದಿಸಿದರು. ತುಕಾರಾಮರ ನಿರ್ವಾಣದ ವರ್ಷದಲ್ಲಿ ಹುಟ್ಟಿದ ನೀಲೋಬರೂ ಸಹ ಇಂಥದೇ ಅನುಭವವನ್ನು ಅರುಹುತ್ತಾರೆ.

ತುಕಾರಾಮರು ಓರ್ವ ಕುಣುಬಿಯಾಗಿದ್ದು, 'ವಣೀ'(ವರ್ತಕ)ಯಾಗಿಯೂ ವ್ಯವಹಾರ ಮಾಡುತ್ತಿದ್ದರು. ಅವರ ತಂದೆ ಬಾಳ್ಪೋಬರೂ ಸಹ ಗ್ರಾಮಾಡಳಿತದ ನೌಕರರಾಗಿದ್ದರು. ಸಾಕಷ್ಟು ಉಳ್ಳವರಾಗಿದ್ದ ಕುಟುಂಬವನ್ನು ಭೀಕರ ಕ್ಷಾಮವು

ಹಸಿವಿನಂಚಿಗೆ ತಂದು ನಿಲ್ಲಿಸಿತು. ಈ 'ದೇವರ ಚಿತ್ತ'ಕ್ಕೆ ತುಕಾರಾಮರ ಮೊದಲ ಹೆಂಡತಿ ಮತ್ತು ಮಗ ಬಲಿಯಾದರು. ಅವರ ಅಣ್ಣನು ದಿಢೀರನೆ

ಉಂಟಾದ ಪರಿತ್ಯಾಗದ ಆವೇಶದಲ್ಲಿ ಮನೆ ತೊರೆದು ಹೋದವರು ಮತ್ತೆ ಮರಳಲಿಲ್ಲ. ಮಾತಾಪಿತೃಗಳ ದೇಹಾಂತ್ಯದ ನಂತರ ಸ್ವಲ್ಪಕಾಲ ತುಕಾರಾಮರು ದುಸ್ಸಹವಾದ ಕರ್ತವ್ಯಗಳನ್ನು ನಿರ್ವಹಿಸುತ್ತಿರುವಾಗ, ಆ ಸತ್ವಪರೀಕ್ಷೆಯ ಕಾಲ ಅವರನ್ನು ಸಂಪೂರ್ಣವಾಗಿ ರೂಪಾಂತರಿಸಿತು. ಮಹೀಪತಿ ಬರೆದಂತೆ "ಗುರುಕೃಪಾ ತುಕಾರಾಮರ ರಕ್ಷಣೆಗೆ ಧಾವಿಸಿತು. ಹಸ್ತಪ್ರತಿಗಳನ್ನು ಇಂದ್ರಾಯಣೀ- ಪದ್ಮಪತ್ರ ಇವಾಂಭಸಾ- ಮೇಲೆ ತಂದಳು ಮತ್ತು ಸ್ವಲ್ಪವೂ ತೇವಗೊಂಡಿರದಂತೆ ಅವುಗಳ. ಯಜಮಾನನಿಗೆ ತಲುಪಿಸಿದಳು.

ತುಕಾರಾಮರನ್ನು ದೂಷಕರು ಹಿಗ್ಗಾಮುಗ್ಗಾ ಹೊಡೆದು ದಂಡಿಸಿದರು. ಆದರೆ ಬುದ್ಧನಂತೆಯೇ ಅವರೂ ಸಹ ತನ್ನ ಉಪದ್ರವಿಗಳ ಬಗ್ಗೆ ದ್ವೇಷವನ್ನು. ತಾಳಲಿಲ್ಲ. ಮತ್ತೂ ಕೆಡುಕಿಗೂ ಒಳಿತನ್ನೇ ಹಿಂತಿರುಗಿಸಿದರು."

ಚಿತ್ತ ಶುದ್ಧ ತಯಾ ತತ್ತು ಮಿತ್ರ ಹೋತಿ ॥

“ವಿಶಾಲ ಹೃದಯಿಗಳಿಗೆ ಶತ್ರುಗಳೂ ಮಿತ್ರರಾಗುತ್ತಾರೆ””- ಹೀಗೆ, ರಾಮೇಶ್ವರ

ಭಟ್ಟ ಅವರಿಗೆ ಶಿಷ್ಯ ಮಾತ್ರವಲ್ಲ, ತುಕಾರಾಮರ ಧ್ಯೇಯವನ್ನೂ ಸಂದೇಶವನ್ನೂ ಮುನ್ನಡೆಸುವ ವಾಹಕರೂ ಆದರು. ಅವರೂ ಅಭಂಗಗಳನ್ನು ರಚಿಸತೊಡಗಿ,ಒಂದೆಡೆ ಘೋಷಿಸುತ್ತಾರೆ- 

"ಭಕ್ತಿ ಜ್ಞಾನ ಮತ್ತು ಪರಿತ್ಯಾಗದಲ್ಲಿ ತುಕೋಬರಂತೆ

ಇನ್ನೊಬ್ಬನನ್ನು ಈ ಕಣ್ಣು ಕಾಣಲಿಲ್ಲ.”

ಭಕ್ತಿ, ಜ್ಞಾನೇ ಆಣಿ ವೈರಾಗ್ಯೇ ಆಗಳಾ ।

ಐಸಾ ನಾಹೀ ಡೋಳಾ ದೇಖಿಯೇಲಾ ॥

ತುಕಾರಾಮರ ಗೃಹಸ್ಥ ಜೀವನವೂ ಅವರನ್ನು ಪ್ರಾಪಂಚಿಕ ರೀತಿಯಲ್ಲಿ ಸುಖವಾಗಿ ಇರಗೊಡುವಂಥದ್ದೇನೂ ಆಗಿರಲಿಲ್ಲ. ಅವರ ಹೆಂಡತಿ ಜೀಜಾಯಿ, ಪತಿಯೆಡೆಗೆ ನಿಷ್ಠಳೂ ಶ್ರದ್ಧಾಳುವೂ ಆಗಿದ್ದರೂ ಸಂಸಾರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವಂಥ ಅವರ ಸಂತ ರೀತಿಗಳನ್ನು ಆಕೆ ಮೆಚ್ಚುತ್ತಿರಲಿಲ್ಲ. ಆದರೆ ಆಕೆ ಎಷ್ಟೇ ಸಿಡಿದೆದ್ದರೂ, ಆಕೆಯ ವಿಷಮ ವಿಮರ್ಶೆಗಳಿಂದ ತುಕಾರಾಮರು ತಾನು ತನಗಾಗಿ ಆಯ್ದುಕೊಂಡ ಪಥದಿಂದ ಒಂದು ಕೂದಲೆಳೆಯಷ್ಟೂ ದೂರ ಸರಿಯಲಿಲ್ಲ.

ಹಿತ ತೇಂ ಕರಾವೆಂ ದೇವಾಚಾ ಚಿಂತನ ।

ಕರುನಿಯಾ ಮನ ಏಕತ್ರಿಧ ॥

L

ನಿಜವಾದ ಹಿತವು ಮಿಕ್ಕೆಲ್ಲವನ್ನೂ ಬದಿಗಿಟ್ಟು ದೇವರ ಚಿಂತನೆ ಮಾಡುವುದರಲ್ಲೇ ಎಂಬುದೇ ಅವರ ಧ್ಯೇಯವಾಗಿತ್ತು. ಆದ್ದರಿಂದ ಆಕೆಯ ಮುಂಗೋಪದ ಸ್ವಭಾವದಿಂದ ಅವರಿಗೆ ಕಿಂಚಿತ್ತೂ ಬೇಸರವಾಗಲಿಲ್ಲ. ಅವರು ಪವಾಡವನ್ನೇ ಮಾಡಿದರು - ಹುಡುಕುತ್ತಿದ್ದ ಸೈನಿಕರಿಗೆ ಗುಂಪಿನಲ್ಲಿದ್ದ ಪ್ರತಿಯೊಬ್ಬರೂ

ಶಿವಾಜಿಯಂತೆಯೇ ಕಂಡರು. ದಿಗ್ಭಃಮೆಗೊಳಗಾದ ಸುಬೇದಾರನ ಆಳುಗಳು ಎದೆಗುಂದಿ ಹುಡುಕಾಟ ನಿಲ್ಲಿಸಿದರು.

ತುಕಾರಾಮರ ನಿಗೂಢವಾದ ಅಂತ್ಯ ವಿವರಣೆಗೆಟುಕದ ಕುತೂಹಲಕಾರಿ

ಒಗಟು. ತುಕಾರಾಮ ಬೀಜಾ ಎಂದು ನಂತರದಿಂದ ಆಚರಿಸಲಾಗುತ್ತಿರುವ ಒಂದು. ಪ್ರಾತಃಕಾಲದಲ್ಲಿ ಪುಷ್ಪಕವಿಮಾನದಲ್ಲಿ ಕುಳಿತು ಸಂತರು ವೈಕುಂಠಕ್ಕೆ ತೆರಳಿದರೆಂಬುದು

ಜನಪ್ರಿಯ ನಂಬಿಕೆ. ಮಹೀಪತಿಯು ಸನ್ನಿವೇಶವನ್ನು ನಾಟಕೀಯವಾಗಿ ಚಿತ್ರಿಸುತ್ತಾರೆ.

'ಗಾಥಾ'ದ ಕೆಲವು ಅಭಂಗಗಳು ಈ ದಂತಕಥೆಯ ವಿವರಗಳನ್ನು ದೃಢೀಕರಿಸುತ್ತವೆ ಎಂದೂ ಹೇಳಲಾಗಿದೆ. ಆದರೆ, ಮಹೀಪತಿಯೇ ಹೇಳಿದಂತೆ, “ತುಕಾರಾಮರು ತಮ್ಮ ಕಾಯಿಕ ಅಸ್ತಿತ್ವವನ್ನು ಕಾಯದಲ್ಲಿರುವಾಗಲೇ ಮೀರಿದರೆಂದು” ಭಾವಿಸುವುದು

ಹೆಚ್ಚು ಸೂಕ್ತ.

ದೇಹೀಚ ವಿದೇಹತ್ವ ಪಾವೋನಿಯಾ ।

ಕೇಲೀ ಕಾಯಾ ಬ್ರಹ್ಮರೂಪಃ॥

ಈ ಸನ್ನಿವೇಶದ ಕುರಿತ ಮಹೀಪತಿಯ ನಿರೂಪಣೆ ತುಂಬ ಸಹಜವಾಗಿದೆ. ತುಕಾರಾಮರು ಸರಿರಾತ್ರಿಯತನಕ ಕೀರ್ತನೆ ಮಾಡುತ್ತಿದ್ದರು. ಅವರ ಭಾವಾವೇಶದ ತುತ್ತ ತುದಿಯಲ್ಲಿ ಕಣ್ಣುಕೋರೈಸುವ ಬೆಳಕೊಂದು ಹೊಳೆದು ಪ್ರೇಕ್ಷಕರು ತಮ್ಮ ಕಣ್ಣುಗಳನ್ನು ಮುಚ್ಚುವಂತೆ ಮಾಡಿತು. ಮತ್ತೆ ಕಣ್ಣು ತೆರೆದಾಗ ತುಕಾರಾಮರು

ಎಲ್ಲೂ ಕಾಣಲಿಲ್ಲ!

ಎತ್ತರಕ್ಕೆ ಇನ್ನೂ ಎತ್ತರಕ್ಕೆ

ಭೂಮಿಯಿಂದ ನೀ ಪುಟಿದೆ

ಅಗ್ನಿಯ ಮೇಘದಂತೆ

ನೀಲಕುಹದಾರದೊಳಕ್ಕೆ ರೆಕ್ಕೆ ಬೀಸುತ್ತ! 

ಮಾಹಿತಿ ಆಧಾರ:. ತುಕಾರಾಮರ ಬೋಧನೆಗಳು (ಮೂಲ: ಎಸ್. ಆರ್. ಶರ್ಮ.  ಅನುವಾದ: ಡಿ. ಎನ್. ವೀಣಾ)

Santa Thukaram

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ