ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೋಡಗಳೇ


ಮೋಡಗಳೇ ಮೋಡಗಳೇ
ಋತು ಋತುವಿಗು ಬಹುರೂಪದಿ ಚಲಿಸುವ
ನೆಲಮುಗಿಲಿನ ಸಂತಾನಗಳೇ.

ಬೆಂದ ನೆಲಕೆ ತಂಪೆರೆಯುವ ಮನಸಿನ
ಉದಾರ ಕರುಣೆಯ ಕನಸುಗಳೇ
ಆಷಾಢದ ಆಕಾಶದ ಪಾತ್ರದಿ
ಹರಿವ ಕಲ್ಪನೆಯ ಹೊನಲುಗಳೇ.

ಶಾರದ ನೀರದ ಶಿಲ್ಪಾಕೃತಿಗಳ
ಬಾನೊಳು ರಚಿಸುವ ಪ್ರತಿಭೆಗಳೇ
ಗುಡುಗು-ಮಿಂಚುಗಳ ಸೃಜಿಸಿ ಲೋಕವನು
ತಲ್ಲಣಗೊಳಿಸುವ ಸಂಚುಗಳೇ.

ದಡ ಮೀರದೆ ಹೊಯ್ದಾಡುವ ಕಡಲಿನ
ಬಿಡುಗಡೆಯಾಸೆಯ ರೂಪಗಳೇ
ಎಂದಿನಿಂದಲೋ ಬೆರಗು ಹುಟ್ಟಿಸುತ
ತೇಲುವ ನೀರಿನ ತೇರುಗಳೇ!

(ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪನವರ ಕವಿತೆ)
Photo @ Kukkarahalli Lake, 
Mysore on 20.06.2013 @ 6.20 a.m.


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ