ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗಂಗಾಂಬಿಕೆ ಗೋವರ್ಧನ


 ಡಾ.ಎಸ್.ಗಂಗಾಂಬಿಕೆ ಗೋವರ್ಧನ


ಡಾ.ಎಸ್.ಗಂಗಾಂಬಿಕೆ ಗೋವರ್ಧನ ಮತ್ತು ಅವರ ಪತಿ ಡಾ. ಸುಂಕಂ ಗೋವರ್ಧನ ಇಬ್ಬರೂ ಶಾಸನಾಧಾರಿತ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ಅನುಪಮ ದಂಪತಿಗಳು.

ಜೂನ್ 12 ಗಂಗಾಂಬಿಕೆ ಅವರ ಜನ್ಮದಿನ. ಅವರ ಸಾಧನೆಗಳನ್ನು ಬಿಂಬಿಸುವ ಇಲ್ಲಿನ ಚಿತ್ರಗಳೇ ಅವರ ಕುರಿತು ಬಹಳಷ್ಟು ಹೇಳುತ್ತದೆ.  ಎಲ್ಲಕ್ಕಿಂತ ಇಷ್ಟವಾಗುವುದು ಅವರೇ ತಮ್ಮ ಗೋಡೆಯಲ್ಲಿ ಬಿಂಬಿಸಿರುವ ಈ ಸ್ವಂತ ಮಾತು: "ನಾನು ಕನ್ನಡತಿ, ಗೋವರ್ಧನನ ಮನದೊಡತಿ, ಮಕ್ಕಳು ಮನೆಯೊಡತಿ, ವಿದ್ಯಾರ್ಥಿಗಳ ಪ್ರೀತಿಯ ಸುಮತಿ, ಬರಹಗಾರ್ತಿ....". ಇದಕ್ಕಿಂತ ದೊಡ್ಡ ಸಮತೋಲನ ಬದುಕಿಗೆ ಇನ್ನೇನು ಬೇಕು!

ಗಂಗಾಬಿಕೆ ಶ್ರದ್ಧೆಯಿಂದ ಶಾಸನಾಧಾರಿತ ಸಂಶೋಧನೆ ಮಾಡಿದ್ದಾರೆ. ಡಾಕ್ಟರೇಟ್ ಗೌರವ ಅವರೊಂದಿಗಿದೆ. ಮಹತ್ವದ ಸಂಶೋಧನಾ ಕೃತಿಗಳನ್ನು ರಚಿಸಿ ನಾಡಿನ ಗಣ್ಯ ವಿದ್ವಾಂಸರಿಂದ  ಮೆಚ್ಚುಗೆ ಪಡೆದಿದ್ದಾರೆ.  ಮುಂದಿನ ಪೀಳಿಗೆಗೆ ಬೋಧಿಸಿ ಮಾರ್ಗದರ್ಶಿಸುತ್ತಿದ್ದಾರೆ.  ಮಹತ್ವದ ಗೌರವ ಗಳಿಸಿದ್ದಾರೆ.  ಅವರಲ್ಲಿ ಎಲ್ಲ ರೀತಿಯ ಸಾಂಸ್ಕೃತಿಕ ಅರಿವು ಮತ್ತು ಸಂತೃಪ್ತ ಮಂದಹಾಸ ಜೊತೆಗಿದೆ.

ಆತ್ಮೀಯರಾದ ಸಾಧಕಿ ಗಂಗಾಬಿಕೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು‍ ಅವರು ಮತ್ತು ಅವರ ಕುಟುಂಬದವರ ಬದುಕು ನಿತ್ಯ ಸುಖ, ಸೌಖ್ಯ,  ಸಂತಸ,  ಸಾಧನೆ ಮತ್ತು ಸಂತೃಪ್ತಿಗಳಿಂದ ತುಂಬಿರಲಿ.  ನಮಸ್ಕಾರ.

Happy birthday Gangambike Govardhana 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ