ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಉತ್ತರಾ ಉನ್ನಿಕೃಷ್ಣನ್

ಉತ್ತರಾ ಉನ್ನಿಕೃಷ್ಣನ್

ಉತ್ತರಾ ಉನ್ನಿಕೃಷ್ಣನ್ ಅದ್ಭುತ ಬಾಲಸಂಗೀತ ಪ್ರತಿಭೆಯಾಗಿ ಕಂಗೊಳಿಸಿ,  ಮುಂದೆಯೂ ಯಶಸ್ವಿ ಸಂಗೀತ ಕಲಾವಿದೆಯಾಗುವ ಎಲ್ಲ ಲಕ್ಷಣಗಳನ್ನೂ ಬಿಂಬಿಸಿದ್ದಾರೆ.  ಉತ್ತರಾ ಉನ್ನಿಕೃಷ್ಣನ್ ಅವರು ತಮ್ಮ ತಂದೆ ಮಹಾನ್ ಗಾಯಕ ಉನ್ನಿಕೃಷ್ಣನ್ ಅವರ ಜೊತೆಯಲ್ಲಿ ಮಹಾನ್ ಸಂಗೀತ ಕೃತಿಗಳನ್ನು ಸುಸ್ಪಷ್ಟತೆ ಮತ್ತು ಸುಶ್ರಾವ್ಯತೆಗಳಲ್ಲಿ ಶಾಸ್ತ್ರಬದ್ಧವಾಗಿ ಪ್ರಸ್ತುತಪಡಿಸುವುದನ್ನು ಕಂಡು ಕೇಳುವುದೇ ಒಂದು ದಿವ್ಯಾನುಭವ.  ಸಿನಿಮಾ ಸಂಗೀತಕ್ಕೂ ಲಗ್ಗೆ ಇಟ್ಟ ಈಕೆ,  ಕೇವಲ ಹತ್ತನೇ ವಯಸ್ಸಿನಲ್ಲೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿ ದಾಖಲೆ ಸೃಷ್ಟಿಸಿದವರು.

ಉತ್ತರಾ ಉನ್ನಿಕೃಷ್ಣನ್ ಅವರು ಜನಿಸಿದ್ದು 2004ರ ಜೂನ್ 11ರಂದು.  ಈಕೆ ಕರ್ನಾಟಕ ಶಾಸ್ತ್ರೀಯ ಗಾಯಕ ಪಿ. ಉನ್ನಿ ಕೃಷ್ಣನ್ ಮತ್ತು ಭರತನಾಟ್ಯ ಕಲಾವಿದೆ ಪ್ರಿಯಾ ಉನ್ನಿಕೃಷ್ಣನ್ ಅವರ ಪುತ್ರಿ.   ಉನ್ನಿ ಕೃಷ್ಣನ್ ಅವರು ಶಾಸ್ತ್ರೀಯ ಸಂಗೀತ ಮಾತ್ರವಲ್ಲದೆ, ಅತ್ಯುತ್ತಮ ಹಿನ್ನೆಲೆ ಗಾಯಕರಾಗಿ ತಮಿಳು ಗೀತೆಗಳಾದ "ಎನ್ನವಳೆ ಅಡಿ ಎನ್ನವಳೆ" ಮತ್ತು "ಉಯಿರುಮ್ ನೀಯೆ" ಮುಂತಾದ ಗೀತೆಗಳಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿದವರು 

ಉತ್ತರಾ ಆರನೇ ವಯಸ್ಸಿನಿಂದಲೇ ಸುಧಾ ರಾಜಾ ಅವರಿಂದ ಕರ್ನಾಟಕ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಲೇಡಿ ಆಂಡಾಲ್ ಶಾಲೆ ಮತ್ತು ಎಪಿಎಲ್ ಗ್ಲೋಬಲ್ ಶಾಲೆಯಲ್ಲಿ ಓದಿದ ಅವರು ಚೆನ್ನೈನ ಎಂಒಪಿ ವೈಷ್ಣವ್ ಮಹಿಳಾ ಕಾಲೇಜಿನಲ್ಲಿ ಬಿಎಸ್ಸಿ ಸೈಕಾಲಜಿ ಓದಿದರು. 

ಉತ್ತರಾ ಉನ್ನಿಕೃಷ್ಣನ್ ಇನ್ನೂ ಹತ್ತು ವರ್ಷದ ಬಾಲಕಿಯಾಗದ್ದಾಗಲೇ,  2014ರಲ್ಲಿ ತೆರೆಕಂಡ ಎ. ಎಲ್. ವಿಜಯ್ ನಿರ್ದೇಶನದ 'ಸೈವಮ್'‌ ತಮಿಳು ಚಿತ್ರದ  'ಅಳಗು' ಗೀತೆಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಗಳಿಸಿ, ಆ ಪ್ರಶಸ್ತಿ ಗಳಿಸಿದ ಅತ್ಯಂತ ಕಿರಿಯರಾಗಿ ದಾಖಲೆ ಸೃಷ್ಟಿಸಿದರು. ಅವರ ಸಂಗೀತದ ಆಲ್ಬಮ್ಗಳು ಮತ್ತು ಅಂತರಜಾಲದಲ್ಲಿ ಪ್ರಸ್ತುತಿಗೊಂಡಿರುವ ವಿಡಿಯೋ ಸಂಗೀತಗಳು ಒಂದಕ್ಕಿಂತ ಒಂದು ಎಂಬಂತೆ ಮನೋಜ್ಞವಾಗಿವೆ 

ಉತ್ತರಾ ಉನ್ನಿಕೃಷ್ಣನ್ ಭಾರತೀಯ ಶಾಸ್ತ್ರೀಯ  ಸಂಗೀತ ಮಾತ್ರವಲ್ಲದೆ,  ಪಾಶ್ಚಾತ್ಯ ಸಂಗೀತವನ್ನೂ ಆನಂದಿಸುವವರಾಗಿದ್ದು,  ಎಲ್ಲಾ ಸಂಗೀತ ಪ್ರಕಾರಗಳನ್ನು ಕರಗತ ಮಾಡಿಕೊಳ್ಳುವ ಸದಾಶಯ ಹೊಂದಿದ್ದಾರೆ.

Happy birthday to child prodigy and Great young musician Uthara Unnikrishnan 🌷🌷🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!