ಶ್ವೇತಾ ಭಿಡೆ
ಶ್ವೇತಾ ಭಿಡೆ
ಶ್ವೇತಾ ಭಿಡೆ ಅವರು ಸಂಪಾದಕಿ, ಬರಹಗಾರ್ತಿ, ನಿರೂಪಕಿ ಹೀಗೆ ಬಹುಮುಖಿ ಪ್ರತಿಭಾನ್ವಿತೆ.
ಆಗಸ್ಟ್ 11, ಶ್ವೇತಾ ಭಿಡೆ ಅವರ ಜನ್ಮದಿನ.
ಮೂಲತಃ ಇವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸಮೀಪದ ಕೋಣಂದೂರಿನವರು. ಶಿವಮೊಗ್ಗದಲ್ಲಿ ಬಿ.ಕಾಮ್ ಓದಿ ಮುಂದೆ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಂ.ಕಾಮ್ ಪದವಿ ಪಡೆದರು.
ಶ್ವೇತಾ ಭಿಡೆ ಅವರು ತಮ್ಮ ಓದಿನ ಸಂಬಂಧಿತ ಕ್ಷೇತ್ರದಲ್ಲಿ ಖಾಸಗಿ ವಲಯದಲ್ಲಿ ವೃತ್ತಿ ನಿರ್ವಹಿಸಿ ಕ್ರಮೇಣ ತಮ್ಮ ಆಸಕ್ತಿ ಕ್ಷೇತ್ರವಾದ ಸಾಹಿತ್ಯದ ಕಡೆಗೆ ಬಂದರು. ಇವರ ಬಹುಮುಖಿ ಬರಹಗಳು ನಾಡಿನೆಲ್ಲ ಪತ್ರಿಕೆಗಳಲ್ಲಿ ಪ್ರಕಾಶಿಸಿವೆ. ವಿಶ್ವವಾಣಿ ಪತ್ರಿಕೆಯ ಆರಾಮ ಪುರವಣಿಯಲ್ಲಿನ “ಶ್ವೇತ ವರ್ಣ” ಹಾಗೂ “ಕನ್ನಡ ಮಾಣಿಕ್ಯ” ಮಾಸ ಪತ್ರಿಕೆಯ “ನಿರ್ಭಿಡೆ” ಇವರ ಹೆಸರಾದ ಅಂಕಣಗಳಲ್ಲಿ ಸೇರಿವೆ. ಇವರು
“ಮಾಮ್ಸ್‌ಪ್ರೆಸೊ” ಕನ್ನಡ ಡಿಜಿಟಲ್ ವಾಹಿನಿಯ ಮ್ಯಾನೇಜಿಂಗ್ ಎಡಿಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಶ್ವೇತಾ ಭಿಡೆ ಅವರ ಪ್ರಕಟಿತ ಕೃತಿಗಳಾದ 'ಚಿಂತೆ ಬಿಡಿ chill ಮಾಡಿ' ಮತ್ತು 'ಭರವಸೆಯೇ ಬದುಕು' ಹಲವಾರು ಮರುಮುದ್ರಣಗಳನ್ನು ಕಂಡು ಹೆಸರಾಗಿವೆ. ಶ್ವೇತಾ ಅವರು ಕಾರ್ಯಕ್ರಮ ನಿರೂಪಕಿಯಾಗಿಯೂ ಗಮನ ಸೆಳೆಯುತ್ತಿದ್ದಾರೆ.
ಬಹುಮುಖಿ ಸದಭಿರುಚಿಗಳುಳ್ಳ ಪ್ರತಿಭಾನ್ವಿತೆ, ಉತ್ಸಾಹಿ, ಹಸನ್ಮುಖಿ ಆತ್ಮೀಯರಾದ ಶ್ವೇತಾ ಭಿಡೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Shwetha Bhide 🌷🌷🌷

ಕಾಮೆಂಟ್‌ಗಳು