ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ. ವಿ. ಸತ್ಯನಾರಾಯಣ


 ಪ್ರೊ. ಎಂ ವಿ ಸತ್ಯನಾರಾಯಣ ನಿಧನ


ಪ್ರಾಧ್ಯಾಪಕ, ಕನ್ನಡದ ಮಹಾನ್ ಕಾರ್ಯಕರ್ತ ಎಂ ವಿ ಸತ್ಯನಾರಾಯಣ ಅವರು ನವೆಂಬರ್ 1ರಂದು ನಿಧನರಾದರು ಎಂದು ತಿಳಿದುಬಂದಿದೆ.

ಪ್ರೊ. ಎಂ ವಿ ಸತ್ಯನಾರಾಯಣ ಅವರು ಶೇಷಾದ್ರಿಪುರಂ ಕಾಲೇಜಿನ  ಕನ್ನಡ ಪ್ರಾಧ್ಯಾಪಕರು, ಮುಖ್ಯಸ್ಥರು ಮತ್ತು ಪ್ರಾಚಾರ್ಯರಾಗಿದ್ದರು. ಬಿ ಎಂ ಶ್ರೀ ಪ್ರತಿಷ್ಠಾನದ ಸ್ಥಾಪಕ ಸದಸ್ಯರಾಗಿ ಕಾರ್ಯದರ್ಶಿಗಳಾಗಿ ಸಂಸ್ಥಾಪಕ ಎಂ ವಿ ಸಿ ಅವರೊಂದಿಗೆ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದರು. ವಿ ಸಿ ಅವರ ನಿಕಟವರ್ತಿಗಳಾಗಿ ವಿ ಸಿ ಸಂಪದ ಮೂಲಕ ಅವರ ಸಹೋದರ ಎಂ ವಿ ವಿ ಅವರೊಂದಿಗೆ ವಿ ಸಿ ಸಮಗ್ರ ಸಂಪುಟಗಳನ್ನು ಹೊರತಂದವರು. 

ಪ್ರೊ. ಎಂ ವಿ ಸತ್ಯನಾರಾಯಣ ಅವರು ಸಜ್ಜನ,  ಮಿತಭಾಷಿ, ಸಾಹಿತ್ಯಪ್ರೇಮಿಗಳಾಗಿ ವಿದ್ಯಾರ್ಥಿ ಮಿತ್ರರಾಗಿ ಬಾಳಿನಲ್ಲಿ ಬೆಳಕು ಮೂಡಿಸುತ್ತಿದ್ದ ಆದರ್ಶ ಮೇಷ್ಟರಾಗಿದ್ದರು. 
  
ಎಂ ವಿ ಸತ್ಯನಾರಾಯಣ ಅವರ ಆತ್ಮಕ್ಕೆ ಶಾಂತಿಕೋರುತ್ತ ಅವರ ಆಪ್ತ ಬಂಧುಗಳಿಗೆ ಈ  ಅಗಲಿಕೆಯನ್ನು ಸಹಿಸುವ ಶಕ್ತಿ ಕೋರೋಣ.  ನಮಸ್ಕಾರ. 🌷🙏🌷

ಮಾಹಿತಿ ಕೃತಜ್ಞತೆ: Geethacharya Narayana Sharma 🌷🙏🌷

Respects to departed soul Prof. M V Sathyanarayana 🌷🙏🌷





ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ