ಶ್ರೀನಿವಾಸನ್
ಸಿನಿ ಕಲಾವಿದ ಶ್ರೀನಿವಾಸನ್
ಶ್ರೀನಿವಾಸನ್ ಮಲಯಾಳ ಚಿತ್ರರಂಗದ ಹಿರಿಯ ನಟ, ಬರಹಗಾರ, ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದವರು.
ಶ್ರೀನಿವಾಸನ್ ಕೇರಳದ ಕಣ್ಣೂರ್ ಜಿಲ್ಲೆಯಲ್ಲಿ 1956ರ ಏಪ್ರಿಲ್ 6ರಂದು ಜನಿಸಿದರು. ಅರ್ಥ ಶಾಸ್ತ್ರದಲ್ಲಿ ಪದವಿ ಪಡೆದಿದ್ದ ಅವರು ಆ ಬಳಿಕ ಚೆನ್ನೈನಲ್ಲಿ ಫಿಲ್ಮ್ ಆ್ಯಂಡ್ ಟೆಲಿವಿಷನ್ ಸಂಸ್ಥೆಯಲ್ಲಿ ಸಿನಿಮಾ ಸಂಬಂಧಿತ ತರಬೇತಿ ಗಳಿಸಿದ್ದರು.
1977ರಲ್ಲಿ ಪಿ.ಎ. ಬ್ಯಾಕರ್ ನಿರ್ದೇಶನದ ಮಣಿಮುಳಕ್ಕಂ ಚಿತ್ರದ ಮೂಲಕ ಶ್ರೀನಿವಾಸನ್ ಮಳಯಾಳ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಶ್ರೀನಿವಾಸನ್‌ಗೆ 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದರು.
1984ರಲ್ಲಿ ‘ಒಡರುತ್ತು ಅಮ್ಮಾವ ಆಲಾರಿಯಂ’ ಚಿತ್ರದ ಮೂಲಕ ಉತ್ತಮ ಬರಹಗಾರರಾಗಿ ಶ್ರೀನಿವಾಸನ್ ಗುರುತಿಸಿಕೊಂಡಿದ್ದರು.
ಶ್ರೀನಿವಾಸನ್ ಅವರು ತೀಕ್ಷ್ಣವಾದ ಸಾಮಾಜಿಕ ವ್ಯಾಖ್ಯಾನವನ್ನು ಸುಲಭವಾಗಿ ಅರ್ಥೈಸಬಹುದಾದ ನಿಟ್ಟಿನಲ್ಲಿ ಹಾಸ್ಯಮಯವಾಗಿ ಕಥೆಗಳನ್ನು ಹೆಣೆಯುವ ಮೂಲಕ ಮಲಯಾಳ ಚಿತ್ರರಂಗದಲ್ಲಿ ಗಮನ ಸೆಳೆದಿದ್ದರು.
ಹಾಸ್ಯ, ವಿಡಂಬನೆ ಮತ್ತು ದೈನಂದಿನ ವಾಸ್ತವಗಳ ತೀವ್ರ ಅರಿವಿನಿಂದ ಗುರುತಿಸಲ್ಪಟ್ಟ ಶ್ರೀನಿವಾಸನ್ ಅವರ ಚಿತ್ರಕಥೆಗಳು ಪ್ರೇಕ್ಷಕರಿಗೆ ಹಾಸ್ಯದ ಹೊಸ ಭಾಷೆಯನ್ನು ನೀಡಿದ್ದವು. ಹಾಸ್ಯ ಮತ್ತು ವಿಮರ್ಶೆಯ ಮಿಶ್ರಣದ ಮೂಲಕ ಶ್ರೀನಿವಾಸನ್ ಅವರು ಅಳಿಸಲಾಗದ ಛಾಪು ಮೂಡಿಸಿದ್ದರು.
ಶ್ರೀನಿವಾಸನ್ 2025ರ. ಡಿಸೆಂಬರ್ 25ರಂದು ಈ ಲೋಕವನ್ನಗಲಿದರು🌷🙏🌷

ಕಾಮೆಂಟ್‌ಗಳು