ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ.ಜೆ.ಕಮಲಾಕ್ಷಿ

 


ಎಂ. ಜೆ. ಕಮಲಾಕ್ಷಿ ನಿಧನ

ಹಿರಿಯ ಕಲಾವಿದೆ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಸ್ಥಾನದವರೆಗೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿ ಹೆಸರಾಗಿದ್ದ ಎಂ. ಜೆ. ಕಮಲಾಕ್ಷಿ ಅವರು ನಿಧನರಾಗಿದ್ದಾರೆ. 

ಕಮಲಾಕ್ಷಿಯವರು ಬೆಂಗಳೂರಿನಲ್ಲಿ ಬಿಎಸ್ಸಿ, ಮೈಸೂರು ವಿವಿಯಲ್ಲಿ ಇತಿಹಾಸ ಎಂ.ಎ., ಚಿತ್ರಕಲಾ ಪರಿಷತ್ತಿನಲ್ಲಿ ಫೈನ್ ಆರ್ಟ್ಸ್, ಬರೋಡಾ ವಿವಿಯಲ್ಲಿ ಮ್ಯೂರಲ್ ಕಲಾ ವಿಭಾಗದಲ್ಲಿ ವಿಶೇಷ ಅಧ್ಯಯನ ನಡೆಸಿದರು.

ಕಮಲಾಕ್ಷಿಯವರು ಕಲೆಯ ಬಗ್ಗೆ ಅಧ್ಯಯನ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಕಲಾಪ್ರದರ್ಶನಗಳಾದ ಮೇಲೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪ್ರಾಂಶುಪಾಲರಾಗಿ, ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ, ಖಜಾಂಚಿಯಾಗಿ, ಪ್ರಧಾನ ಕಾರ್ಯರ್ದರ್ಶಿಯಾಗಿ ಕಾರ್ಯನಿರ್ವಹಿಸಿದವರು. ಅವರು ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಕಮಲಾಕ್ಷಿ ಅವರಿಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ (1986) ಮತ್ತು ರಾಜ್ಯೋತ್ಸವ  ಪ್ರಶಸ್ತಿ (2015) ಹಾಗೂ 2025 ಸಾಲಿನ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು. 

ಅಗಲಿದ ಕಲಾಚೇತನಕ್ಕೆ ನಮನ🌷🙏🌷

Respects to departed soul Artiste M. J. Kamalakshi



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ