ಅಮರೇಶ ನುಗಡೋಣಿ
ಅಮರೇಶ ನುಗಡೋಣಿ ಅವರ ‘ದಡ ಸೇರಿಸು ತಂದೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Hearty congratulations Amaresh Nugadoni Sir 🌷🙏🌷
ಪ್ರೊ. ಅಮರೇಶ ನುಗಡೋಣಿ ಅವರ ಅವರ ‘ದಡ ಸೇರಿಸು ತಂದೆ’ ಕಥಾ ಸಂಕಲನಕ್ಕೆ 2026 ವರ್ಷದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.
ಅಮರೇಶ ಅವರು ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ನುಗಡೋಣಿ ಎಂಬಲ್ಲಿ 1969ರ ಜೂನ್ 2ರಂದು ಜನಿಸಿದರು. ಎಂ.ಎ. ಮತ್ತು ಪಿಎಚ್.ಡಿ ಗಳಿಸಿರುವ ಅಮರೇಶ ನುಗಡೋಣಿ ಅವರು ಹಂಪಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಅಮರೇಶ ನುಗಡೋಣಿ ಅವರು ಬಹುಮುಖಿ ಬರಹಗಾರರಾಗಿ ಮತ್ತು ಚಿಂತಕರಾಗಿ ಖ್ಯಾತರಾಗಿದ್ದಾರೆ. ಮಹಾನ್ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಪ್ರಸಿದ್ಧ ಚಿತ್ರ 'ಕನಸೆಂಬೋ ಕುದುರೆಯನೇರಿ' ಅಮರೇಶ ನುಗಡೋಣಿ ಅವರ.'ಸವಾರಿ' ಕತೆಯನ್ನಾಧರಿಸಿದೆ. ಇದಲ್ಲದೆ ಇತರ ಚಲನಚಿತ್ರ ಮತ್ತು ರಂಗನಿರ್ದೇಶಕರು. ಇವರ ಕತೆಯಾಧರಿಸಿ ಪ್ರಸಿದ್ಧ ಚಲನಚಿತ್ರ ಮತ್ತು ರಂಗರೂಪಕಗಳನ್ನು ನಿರ್ಮಿಸಿ ಪ್ರದರ್ಶಿಸಿದ್ದಾರೆ.
ಅಮರೇಶ ನುಗಡೋಣಿ ಅವರ ಪ್ರಕಟಿತ ಕೃತಿಗಳಲ್ಲಿ ಈ ಕೆಳಗಿನವು ಸೇರಿವೆ:
ಕಥಾಸಂಕಲನಗಳು:
1. ಮಣ್ಣು ಸೇರಿತು ಬೀಜ
2. ತಮಂಧದ ಕೇಡು
3. ಸವಾರಿ
4. ಒಡಲ ಹಂಗು
5. ಚುಕ್ಕಿ ಮದುವೆ ಪ್ರಸಂಗ
6.ಬುತ್ತಿ (ಬಾಲ್ಯದ ಅನುಭವ ಕಥನಗಳು),
7. ದಡ ಸೇರಿಸು ತಂದೆ
ಕಾದಂಬರಿಗಳು:
1. ದಂದುಗ
2. ಗೌರಿಯರು
ವಿಮರ್ಶೆ ಮತ್ತು ಸಂಶೋಧನೆಗಳು:
1. ಅರಿವು ನವಸಾಕ್ಷರಿಗಾಗಿ (ಕಥೆಗಳು)
2. ಶ್ರೀಕೃಷ್ಣ ಆಲನಹಳ್ಳಿ (ವಿಮರ್ಶೆ)
3. ನುಡಿವ ಬೆಡಗು (ತತ್ವಪದ ಸಾಂಸ್ಕೃತಿಕ ಅಧ್ಯಯನ)
4. ರಾಯಚೂರು ಜಿಲ್ಲೆಯಲ್ಲಿ ಹೈದ್ರಾಬಾದು ಕರ್ನಾಟಕ ವವಿಮೋಚನಾ ಚಳುವಳಿ
5. ಹೈದ್ರಾಬಾದು ಕರ್ನಾಟಕ ಹಾಡುಪಾಡು,
6. ನುಡಿವ ಪಾಡು (ವಿಮರ್ಶೆ),.
7. ನುಡಿ ದಂದುಗ (ಸಾಹಿತ್ಯ ಅಧ್ಯಯನ)
8. ತತ್ವಪದ ಸಾಹಿತ್ಯ ಅಧ್ಯಯನ,
9. ಸಣ್ಣಕಥೆ : ಸಾಮಾಜಿಕ ವಾಸ್ತವ
10. ಜೇಡರ ದಾಸಿಮಯ್ಯ (ಭಾರತೀಯ ಸಾಹಿತ್ಯ ನಿರ್ಮಾಪಕರ ಮಾಲೆ).
11. ವಚನಗಳ ಅನುಸಂಧಾನ
12. ಮಧ್ಯಕಾಲೀನ ಸಾಹಿತ್ಯ ಸಂಸ್ಕೃತಿ
ವಿಚಾರ ಸಂಕಿರಣಗಳ ಲೇಖನಗಳ ಸಂಪಾದನೆಗಳು*
1. ಶೂನ್ಯ ಸಂಪಾದನೆಗಳು
2. ಬಸವಣ್ಣನ ವಚನಗಳು
3. ಹರಿಶ್ಚಂದ್ರ ಚಾರಿತ್ರ
4. ಕನ್ನಡ ಸಂಶೋಧನೆಯ ವೈಧಾನಿಕತೆಗಳು
5. ಜೈಮಿನಿ ಭಾರತ
6. ನಾನೇಕೆ ಬರೆಯುತ್ತೇನೆ?
7. ಗ್ರಾಮಾಯಣ
8. ಅಲ್ಲಮಪ್ರಭು ವಚನಗಳು
9. ಪುರಂದರದಾಸರ ಸಾಹಿತ್ಯ ಅಧ್ಯಯನಗಳು
10. ದಿನಕರ ದೇಸಾಯಿ-೧೦೦. ಬದುಕು ಬರಹ
11. ಸರ್ವಜ್ಞನ ತ್ರಿಪದಿಗಳು : ಅನುಸಂಧಾನದ ನೆಲೆಗಳು
12. ಕಥೆ ಹುಟ್ಟುವ ಪರಿ
ಸಂಪಾದನೆ:
1. ಬಿಸಿಲ ಹನಿಗಳು
2. ಸಣ್ಣಕಥೆ-೧೯೯೭
3. ಅಮರಚಿಂತ (ಜಂಬಣ್ಣ ಅಮರಚಿಂತರ ಗೌರವ ಗ್ರಂಥ) ಸಂ. ಮಹಾಂತೇಶ ಮಸ್ಕಿ ಜೊತೆಗೆ
4. ಕಲ್ಯಾಣ ಕರ್ನಾಟಕ
5. ನುಡಿ ಬಾಗಿನ (ಎಚ್. ಎಸ್. ರಾಘವೇಂದ್ರರಾವ್ ಅವರ ಸಾಹಿತ್ಯ ಕುರಿತ ವಿಮರ್ಶಾ ಕೃತಿ), ಸಂ. ವಿಕ್ರಮ ವಿಸಾಜಿ ಜೊತೆಗೆ ಸಂಪಾದನೆ.
6. ಬಸವಣ್ಣ,
ಅಮರೇಶ ನುಗಡೋಣಿ ಅವರ ಅವರ ‘ದಡ ಸೇರಿಸು ತಂದೆ’ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅಲ್ಲದೆ, ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿಕಥಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನಗಳು, ಚುಕ್ಕಿ ಉಮಾಪತಿ ಪ್ರತಿಷ್ಠಾನ ಪ್ರಶಸ್ತಿ, ಗುಲ್ಬರ್ಗ ರಾಜ್ಯೋತ್ಸವ ಪ್ರಶಸ್ತಿ (ಪುಸ್ತಕ ಬಹುಮಾನ), ಸರ್.ಎಂ. ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ಶಿವಾನಂದ ಪಾಟೀಲ್ ಪ್ರಶಸ್ತಿ,ಗೋರೂರು ಸಾಹಿತ್ಯ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಉಗ್ರಾಣ ಸಾಹಿತ್ಯ ಪ್ರಶಸ್ತಿ (ಪುತ್ತೂರು),
ಕುಂ. ವೀರಭದ್ರಪ್ಪ ಕಥಾಸಾಹಿತ್ಯ ಪ್ರಶಸ್ತಿ, ಚದುರಂಗ ಸಾಹಿತ್ಯ ಪ್ರಶಸ್ತಿ, ಮಾಸ್ತಿ ಕಥಾಪುರಸ್ಕಾರ, ಡಾ. ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ,. ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ, ರಮಣಶ್ರೀ ಶರಣ ಪ್ರಶಸ್ತಿ, 'ನೀರು ತಂದವರು' ಚಲನಚಿತ್ರಕ್ಕೆ ಅತ್ಯುತ್ತಮ ಕತೆಗಾಗಿ ರಾಜ್ಯ ಪ್ರಶಸ್ತಿ, ಬಸವರಾಜ ಕಟ್ಟಿಮನಿ ಕಥಾಸಾಹಿತ್ಯ ಪ್ರಶಸ್ತಿ. ಸಾಹಿತ್ಯಶ್ರೀ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಅಮರೇಶ ನುಗಡೋಣಿ ಅವರ ಸಾಹಿತ್ಯವನ್ನು ಕುರಿತ ಮಹಾಪ್ರಬಂಧಗಳಿಗಾಗಿ ಅನೇಕರು ಪಿಎಚ್.ಡಿ ಗಳಿಸಿದ್ದಾರೆ.
ಅಮರೇಶ ನುಗಡೋಣಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಕಾಮೆಂಟ್‌ಗಳು