ಸಾಧನಾ ಸರ್ಗಮ್
ಸಾಧನಾ ಸರ್ಗಮ್
ಸಾಧನಾ ಸರ್ಗಮ್ ಸುಶ್ರಾವ್ಯ ಹಿನ್ನೆಲೆಗಾಯಕಿ. ಹಿಂದಿ ಮತ್ತು ಮಾತೃಭಾಷೆ ಮರಾಠಿ ಅಲ್ಲದೆ ಬಹುತೇಕ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಹಾಡಿರುವ ಅಪರೂಪದ ಗಾಯಕಿ ಈಕೆ.
ಸಾಧನಾ ಸರ್ಗಮ್ ಅವರು 1969ರ ಮಾರ್ಚ್ 7ರಂದು ಮಹಾರಾಷ್ಟ್ರದ ದಾಭೋಲ್ ಎಂಬಲ್ಲಿ ಜನಿಸಿದರು. ತಾಯಿ ನೀಲಾ ಘನೇಕರ್ ಅವರಲ್ಲಿ ಚಿಕ್ಕಂದಿನಲ್ಲೇ ಸಂಗೀತ ಕಲಿಕೆ ಆರಂಭಿಸಿದ ಇವರು ಪಂಡಿತ್ ಜಸರಾಜ್ ಅವರಲ್ಲಿ ಹೆಚ್ಚಿನ ಸಂಗೀತ ಸಾಧನೆ ಮಾಡಿದರು.
ಸಾಧನಾ ಸರ್ಗಮ್ ಅವರು ಎಲ್ಲ ಭಾಷೆಗಳಲ್ಲೂ ಹಾಡಿ ತಮಿಳು ಚಿತ್ರದ ಹಿನ್ನೆಲೆ ಗಾಯನಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹಾಗೂ ಅನೇಕ ರಾಜ್ಯಗಳಲ್ಲಿನ ಚಿತ್ರಗಾಯನ ಪ್ರಶಸ್ತಿ ಹಾಗೂ ಫಿಲಂಫೇರ್ ಸೇರಿದಂತೆ ಎಲ್ಲ ಮಾಧ್ಯಮ ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಸಾಧನಾ ಸರ್ಗಮ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.
On the birthday of melodious playback singer Sadhana Sargam 🌷🌷🌷

ಕಾಮೆಂಟ್‌ಗಳು