ಶ್ರೀಧರ್ ಕೆ.ಬಿ.
ಶ್ರೀಧರ್ ಕೆ ಬಿ
ಕನ್ನಡಿಗರಾದ ಡಾ. ಕೆ. ಬಿ. ಶ್ರೀಧರ್ ಅವರು ಮನೋವೈದ್ಯರಾಗಿ ಭಾರತ ಮತ್ತು ವಿದೇಶಗಳಲ್ಲಿ ಹೆಸರಾಗಿರುವುದರ ಜೊತೆಗೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ತಮ್ಮ ಕೊಡುಗೆ ಸಲ್ಲಿಸುತ್ತ ಬಂದಿದ್ದಾರೆ.
ಶ್ರೀಧರ್ ಅವರು 1976ರ ಏಪ್ರಿಲ್ 28ರಂದು ತುಮಕೂರಿನಲ್ಲಿ ಜನಿಸಿದರು. ತುಮಕೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬಳ್ಳಾರಿಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿ ಪಡೆದರು. ನಿಮ್ಹಾನ್ಸ್ ಹಾಗೂ ಸೆಂಟ್‌ಜಾನ್ಸ್ ವೈದ್ಯಕೀಯ ಕಾಲೇಜುಗಳಲ್ಲಿ ಮನೋರೋಗ ಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಮನೋರೋಗ ತಜ್ಞರಾಗಿ ಸುಮಾರು ಹತ್ತು ವರ್ಷಗಳು ಕಾರ್ಯನಿರ್ವಹಿಸಿ ಪ್ರಸ್ತುತ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪಂಚಮುಖ ಕೆ.ಬಿ. ಶ್ರೀಧರ್ ಅವರ ಚೊಚ್ಚಲ ಕಾದಂಬರಿ. ಈ ಕಾದಂಬರಿಗೆ 2016ನೇ ಸಾಲಿನ ಕನ್ನಡ ಸಾಹಿತ್ಯ ಅಕಾಡೆಮಿಯ ಮಧುರಚೆನ್ನ ದತ್ತಿ ಬಹುಮಾನ ದೊರೆತಿದೆ. ಮುಂದೆ ಇವರ ಬನಗಿರಿ, ಸುಪ್ತ ಮತ್ತು ಅನೂಹ್ಯ ಕಾದಂಬರಿಗಳು ಪ್ರಕಟಗೊಂಡು ಹೆಸರಾಗಿವೆ.
ಮನೋ ವೈದ್ಯರಾಗಿ, ಬರಹಗಾರರಾಗಿ ಸಾಧನೆ ಮಾಡುತ್ತಿರುವ ಡಾ. ಕೆ. ಬಿ. ಶ್ರೀಧರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Dr. Sridhar K B 🌷🌷🌷

ಕಾಮೆಂಟ್‌ಗಳು