ಟಿ.ಬಿ. ವೆಂಕಟೇಶ್
ಟಿ. ಬಿ. ವೆಂಕಟೇಶ್ ಅವರು ನಾನು ಎಚ್ಎಮ್‍ಟಿ ಕೈಗಡಿಯಾರ ಮಾರುಕಟ್ಟೆ ವಿಭಾಗದಲ್ಲಿ ಕೆಲಸ ಮಾಡಲು ಆರಂಭಿಸಿದ ವೇಳೆಯಲ್ಲಿ ಇದ್ದ ಅತ್ಯಂತ ಸಮರ್ಥ ಅಧಿಕಾರಿಗಳು.
ಟಿ. ಬಿ. ವೆಂಕಟೇಶ್ ಅವರು 1928ರ ಜೂನ್ 15ರಂದು ಜನಿಸಿದರು.
ಮೊದಲು ಲೆಕ್ಕಪತ್ರ ವಿಭಾಗದ ಅಧಿಕಾರಿಗಳಾಗಿದ್ದ ಟಿ. ಬಿ. ವೆಂಕಟೇಶ್, ಮುಂದೆ ಇಡೀ ವಿಭಾಗದ ಜನರಲ್ ಮ್ಯಾನೇಜರ್ ಆಗಿ ಎಚ್ಎಮ್‍ಟಿ ಕೈಗಡಿಯಾರಗಳ ಮಾರಾಟವನ್ನು ಉಚ್ಛ್ರಾಯ ಸ್ಥಿತಿಗೆ ಏರಿಸಿದ್ದರು.
ಎಲ್ಲದಕ್ಕಿಂತ, ಅವರು ನಿರ್ಮಿಸಿದ ಶಿಸ್ತಿನ ವಾತಾವರಣ ಅನನ್ಯ. ಪ್ರತಿ ದಿನ, ಪ್ರತಿ ಅಧಿಕಾರಿಗೂ, ಅವರು ಏನು ಮಾಡಬೇಕು, ತಮಗೆ ಅವರಿಂದ ಏನಕ್ಕೆ ಉತ್ತರಬೇಕು, ಎಂದು ಕೈಯಲ್ಲಿ ಕೆಂಪು ಇಂಕಿನಲ್ಲಿ ಚೀಟಿ ಬರೆದು ಕಳಿಸುತ್ತಿದ್ದರು. ಅವರ ಬಳಿ ಜನ ಸುಳ್ಳು ಹೇಳುವುದು ಸಾಧ್ಯವೇ ಇರಲಿಲ್ಲ. ಎದುರಿಗಿದ್ದ ಹೋಟೆಲಲ್ಲಿ ನಮ್ಮ ಸಿಬ್ಬಂದಿ ಟಿವಿ ಯಲ್ಲಿ ಕ್ರಿಕೆಟ್ ನೋಡಲು ಹೋಗುತ್ತಾರೆ ಎಂದು, ಆ ಹೋಟೆಲ್ ಆಡಳಿತ ಮಂಡಳಿಯ ಬಳಿ ಹೋಗಿ , ಆ ಹೋಟೆಲ್ ರಿಸೆಪ್ಷನ್ ಅಲ್ಲಿ ಟಿ ವಿ ಇರಿಸದ ಹಾಗೆ ಮನವೊಲಿಸಿದ್ದರು. ಕ್ಯಾನ್ಟೀನ್ ಅಲ್ಲಿಯೇ ಆಗಲಿ, ಎಲ್ಲಿಯೇ ಆಗಲಿ, ಜನ ವ್ಯರ್ಥ ಹರಟೆಗೆ ನಿಲ್ಲುವುದು ಸಾಧ್ಯವೇ ಇರಲಿಲ್ಲ. ಅಂತೆಯೇ ದಕ್ಷರಾಗಿದ್ದ ಅವರು ತಮ್ಮ ಸಿಬ್ಬಂದಿಯನ್ನು ದಕ್ಷರಾಗುವಂತೆ ತಿದ್ದುತ್ತಿದ್ದರು.
ನಾನು ನನ್ನ ಪ್ರಾರಂಭಿಕ ವರ್ಷಗಳಲ್ಲಿ ಇಂತಹ ಶ್ರೇಷ್ಠ ಅಧಿಕಾರಿಗಳ ಕಣ್ಣಳತೆಯಲ್ಲಿ ಮತ್ತು ಅನೇಕ ಬಾರಿ ನೇರವಾಗಿ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಸೌಭಾಗ್ಯವಂತನಾಗಿದ್ದೆ.
ಇಂದೂ, ಏನಾದರೂ ಕೆಲಸ ಮಾಡುವುದಕ್ಕೆ ನಾನು ಸಾಧ್ಯವಾಗಿದೆ ಅಂದರೆ.... ಅದು ಇಂಥ ಮಹಾನುಭಾವರ ಬಳಿ ನಾನಿದ್ದ ಸೌಭಾಗ್ಯದಿಂದ.
ಟಿ. ಬಿ. ವೆಂಕಟೇಶ್ ಅವರು 2026ರ ಮೇ 29ರಂದು ತಮ್ಮ 98ನೇ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳ ಮುಂಚಿತವಾಗಿ ಈ ಲೋಕದಿಂದ ವಿರಮಿಸಿದರು. ಅವರಿಗೆ ನನ್ನ ಹೃದಯ ಶುಭ ಹಾರೈಸಿ ನಮಿಸುತ್ತಿದೆ.
🌷🙏🌷
On the birth anniversary of Great executive I saw in my career T. B. Venkatesh Sir 🌷🙏🌷

ಕಾಮೆಂಟ್‌ಗಳು