ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶೈಲಜಾ ಶ್ರೀಶೈಲನ್

 ಶೈಲಜಾ ಶ್ರೀಶೈಲನ್ ನಿಧನ


ಹಿರಿಯ ನಟಿ ಶೈಲಜಾ ಶ್ರೀಶೈಲನ್ ನಿಧನರಾಗಿದ್ದಾರೆ.  ಶೈಲಜಾ ಅವರು  ತಮ್ಮ ಪತಿ ಹಿರಿಯ ಕಲಾವಿದ ಶ್ರೀಶೈಲನ್
ಅವರಂತೆ ಕನ್ನಡ ಚಿತ್ರರಂಗದಲ್ಲಿ ಅಪಾರ ಸೇವೆ ಸಲ್ಲಿಸಿದವರು.

ಹಲವು ದಶಕಗಳ ಕಾಲ ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ಶೈಲಜಾ ಶ್ರೀಶೈಲನ್ ಅವರು ‘ಎ’, ‘ಪುಟ್ಟ ಹೆಂಡ್ತಿ’, ‘ಗೃಹಪ್ರವೇಶ’, ‘ಬಾರೆ ನನ್ನ ಮುದ್ದಿನ ರಾಣಿ’, ‘ಅನಂತನ ಅವಾಂತರ’, ‘ಉಪ್ಪಿ 2’ ಸೇರಿದಂತೆ ನೂರಾರು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿದ್ದರು. 

ಶೈಲಜಾ ಶ್ರೀಶೈಲನ್ ಅವರು ‘ಮುಕ್ತ ಮುಕ್ತ’, ‘ಮಾಯಾಮೃಗ’ ಸೇರಿದಂತೆ ಅನೇಕ ಜನಪ್ರಿಯ ಕನ್ನಡ ಧಾರಾವಾಹಿಗಳಲ್ಲೂ ಅಭಿನಯಿಸಿದ್ದರು.

ಶೈಲಜಾ ಶ್ರೀಶೈಲನ್ 2026ರ ಜುಲೈ 16ರಂದು ನಿಧನರಾದರು.  ಅಗಲಿದ ಕಲಾಚೇತನಕ್ಕೆ ನಮನ🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!