ದೇರಾಜೆ ಮೂರ್ತಿ
ದೇರಾಜೆ ಮೂರ್ತಿ
ದೇರಾಜೆ ಮೂರ್ತಿ ಅವರು, ದಕ್ಷಿಣಕನ್ನಡದ ಪುಟ್ಟ ಊರು ವಿಟ್ಲದಲ್ಲಿ ನೆಲೆಸಿರುವ ಹಿರಿಯ ರಂಗಕರ್ಮಿ, ಸಂಘಟಕರು ವಿಮರ್ಶಕರು ಮತ್ತು ಬಹುಮುಖಿ ಕಲಾಪ್ರೇಮಿ.
ದೇರಾಜೆ ಮೂರ್ತಿ ಅವರು, ತಮ್ಮ ತಂದೆ ಯಕ್ಷಗಾನ ಅರ್ಥಧಾರಿ, ಸಾಹಿತಿ ದೇರಾಜೆ ಸೀತಾರಾಮಯ್ಯರ ಸ್ಮರಣಾರ್ಥವಾಗಿ ಸಂಸ್ಥೆಯನ್ನು ಕಟ್ಟಿ ಅನೇಕ ಪ್ರಕಾಶನ, ಯಕ್ಷಗಾನ, ಸಂಗೀತ, ನಾಟಕ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದಾರೆ. ಮೂರ್ತಿ ಅವರ ಬರಹಗಳು ನಾಡಿನ ಪ್ರಸಿದ್ಧ ನಿಯತಕಾಲಿಕೆ, ಪತ್ರಿಕೆ, ಸ್ಮರಣಸಂಚಿಕೆಗಳಲ್ಲಿ ಪ್ರಕಟವಾಗುತ್ತ ಬಂದಿವೆ. ರಂಗಭೂಮಿ, ನೃತ್ಯ, ಸಂಗೀತ, ಶಿಲ್ಪ, ಕುಶಲಕಲೆ, ಚಿತ್ರಕಲೆ ಹೀಗೆ ಪ್ರತಿ ವಿಚಾರದಲ್ಲೂ ಅವರ ಆಸಕ್ತಿ ಮತ್ತು ಕೊಡುಗೆ ಅಪಾರವಾದದ್ದು.
ಜುಲೈ 15 ದೇರಾಜೆ ಮೂರ್ತಿ ಅವರ ಜನ್ಮದಿನ ಎಂಬುದು ನನ್ನ ಕಣ್ ತಪ್ಪಿತು. ಆತ್ಮೀಯ ಸಹೃದಯಿ ಹಿರಿಯರಾದ ದೇರಾಜೆ ಮೂರ್ತಿ ಅವರಿಗೆ ಸ್ವಲ್ಪ ತಡವಾಗಿ ಹುಟ್ಟುಹಬ್ಬದ ಶುಭಹಾರೈಕೆಗಳು. ನಮಸ್ಕಾರ. 🌷🙏🌷
Happy birthday Moorthy Deraje Sir 🌷🙏🌷

ಕಾಮೆಂಟ್‌ಗಳು