ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹರ್ಮನ್ ಹೆಸ್ಸೆ


ಹರ್ಮನ್ ಹೆಸ್ಸೆ 


ಹರ್ಮನ್ ಹೆಸ್ಸೆ  ನೊಬೆಲ್ ಪುರಸ್ಕೃತ ಪ್ರಸಿದ್ಧ ಕವಿ, ಕಾದಂಬರಿಕಾರ ಮತ್ತು ಚಿಂತಕ.

ಹರ್ಮನ್ ಹೆಸ್ಸೆ 1877 ರ ಜುಲೈ ರಂದು ಜರ್ಮನಿಯ ಕ್ಯಾಲ್ವ್‌ನಲ್ಲಿ ಜನಿಸಿದರು. ಬಾಲ್ಯದಲ್ಲಿ, ಬಾಸ್ಲೆಯಲ್ಲಿ ಸ್ವಲ್ಪ ಕಾಲ ವಾಸಿಸುತ್ತಿದ್ದರು. ಮುಂದೆ ಜರ್ಮನಿಯ ಸೆಮಿನರಿಯಲ್ಲಿ ಸ್ವಲ್ಪ ಕಾಲ ಅಧ್ಯಯನ ಮಾಡಿದರು.  ಆದರೆ ಶೀಘ್ರದಲ್ಲೇ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಪುಸ್ತಕ ಮಾರಾಟಗಾರರಾಗಿ ಕೆಲಸ ಮಾಡಲು ಹೊರಟರು. 

ಹರ್ಮನ್ ಹೆಸ್ಸೆ  ಅವರ ಮೊದಲ ಕಾವ್ಯ ಸಂಪುಟ 1899ರಲ್ಲಿ ಪ್ರಕಟಗೊಂಡಿತು.  ನಂತರದಲ್ಲಿ ಅವರು ಪ್ರಣಯ ಕಾದಂಬರಿಗಳ ಸರಣಿಯೊಂದಿಗೆ ತಮ್ಮ ಖ್ಯಾತಿಯನ್ನು ಸ್ಥಾಪಿಸಿದರು. ಪೀಟರ್ ಕ್ಯಾಮೆನ್‌ಜಿಂಡ್ (1904), ಅನ್ಟರ್ಮ್ ರಾಡ್ (ದಿ ಪ್ರಾಡಿಜಿ, 1906), ಗೆರ್ಟ್ರೂಡ್ (1910) ಮತ್ತು ಸಣ್ಣ ಕಥೆ ನಲ್ಪ್ (1915)  ಇವುಗಳಲ್ಲಿ ಸೇರಿವೆ.

ಮಾನವೀಯತೆ ಹಾಗೂ  ತತ್ವಶಾಸ್ತ್ರದ ಕುರಿತಾದ ಅವರ ಆಳವಾದ ಆಸಕ್ತಿಗಳು ಸಿದ್ಧಾರ್ಥ (1922), ಡೆರ್ ಸ್ಟೆಪ್ಪೆನ್‌ವುಲ್ಫ್ (1927), ನಾರ್ಜಿಸ್ ಅಂಡ್ ಗೋಲ್ಡ್‌ಮಂಡ್ (1930) ಮತ್ತು ದಾಸ್ ಗ್ಲಾಸ್ಪರ್ಲೆನ್ಸ್‌ಪೀಲ್ (ದಿ ಗ್ಲಾಸ್ ಬೀಡ್ ಗೇಮ್, 1943) ಅಂತಹ ಕಾದಂಬರಿಗಳಲ್ಲಿ ಪ್ರಕಾಶಿಸಿದೆ.   ಹೀಗಿದ್ದಾಗಿಯೂ ಅವರ ಕವಿತೆಗಳು ಮತ್ತು ವಿಮರ್ಶಾತ್ಮಕ ಬರಹಗಳು ಅವರಿಗೆ ಸಮಕಾಲೀನ ಚಿಂತಕರಲ್ಲಿ ಪ್ರಮುಖ ಸ್ಥಾನವನ್ನು ತಂದುಕೊಟ್ಟವು. ಹೆಸ್ಸೆ ಅವರಿಗೆ 1946 ರಲ್ಲಿ ನೊಬೆಲ್ ಪ್ರಶಸ್ತಿ ಸೇರಿದಂತೆ ಅನೇಕ ಸಾಹಿತ್ಯ ಪ್ರಶಸ್ತಿ ಗೌರವಗಳು ಸಂದವು.

ಹರ್ಮನ್ ಹೆಸ್ಸೆ ಅವರು 1962ರ ಆಗಸ್ಟ್ 9ರಂದು ಸ್ವಿಟ್ಜರ್ಲ್ಯಾಂಡಿನಲ್ಲಿ ನಿಧನರಾದರು.

On the birth anniversary of Great poet and novelist, Nobel Prize winner in Literature Hermann Karl Hesse 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!