ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬುದ್ಧಯ್ಯ ಪುರಾಣಿಕ


 ಬುದ್ಧಯ್ಯ ಪುರಾಣಿಕ


ಬುದ್ಧಯ್ಯ ಪುರಾಣಿಕರ ಲೇಖಕರು ಮತ್ತು ಸಮಾಜ ಸೇವಕರುಇವರ ಪೂರ್ಣ ಹೆಸರುಶಿವಮೂರ್ತಿ ಬುದ್ಧಯ್ಯ ಸ್ವಾಮಿ ಮಗಿ ಪ್ರಭುದೇವರು ಪುರಾಣಿಕ ಇಂದು ಇವರ ಸಂಸ್ಮರಣೆ ದಿನ


ಬುದ್ಧಯ್ಯ ಪುರಾಣಿಕರು ಬಿಜಾಪುರ ಜಿಲ್ಲೆಯ ತೇರದಾಳದಲ್ಲಿ 1858 ಜೂನ್ 13ರಂದುಜನಿಸಿದರುತಂದೆ ಮಗಿಪ್ರಭುದೇವರು ತಾಯಿ ಲಿಂಗಮ್ಮಇವರ ಮಾತೃಭಾಷೆ ಕನ್ನಡವಾಗಿದ್ದರೂಆಗ್ಗೆ ತೇರದಾಳ ಸಾಂಗಲಿ ಸಂಸ್ಥಾನದಲ್ಲಿದ್ದುದರಿಂದ ಮರಾಠಿಯಲ್ಲಿಯೇ ವ್ಯಾಸಂಗ ನಡೆಯಿತು


ತೇರದಾಳಮುಧೋಳಜಮಖಂಡಿಸೊಲ್ಲಾಪುರ ಹಾಗೂ ಪುಣೆಯಲ್ಲಿ ವ್ಯಾಸಂಗಮಾಡಿದಬುದ್ಧಯ್ಯ ಪುರಾಣಿಕರು ಸ್ವಲ್ಪಕಾಲ ಉಪಾಧ್ಯಾಯರಾಗಿದ್ದರುಅನಂತರ ಹುನಗುಂದಸೊನ್ನಗಲಗಲಿಕೊಲ್ಲಾಪುರ ಮೊದಲಾದ ದೇಸಾಯರಲ್ಲಿ ಕಾರಬಾರಿಗಳಾಗಿದ್ದರು.


ಬುದ್ಧಯ್ಯ ಪುರಾಣಿಕರ ಸಮಾಜ ಸೇವೆ ಗಣ್ಯವಾದುದುಬಿಜಾಪುರ ಜಿಲ್ಲೆಯ ರಾಯಲ್ ಲೀಗಿನಸದಸ್ಯರಾಗಿರೆಡ್‍ಕ್ರಾಸ್ ಫಂಡನ್ನು ಸಂಗ್ರಹಿಸಿದರುಕೊಲ್ಲಾಪುರದ ವೀರಶೈವ ಬೋರ್ಡಿಂಗ್(1907) ಮತ್ತು ಬಾಗಲಕೋಟೆಯ ವಾರದ ಬೋರ್ಡಿಂಗ್ (1911) ಇವುಗಳ ಸ್ಥಾಪನೆಯಲ್ಲೂಶ್ರಮಿಸಿದರು. 1927ರಲ್ಲಿ ಇವರು ಧಾರವಾಡಕ್ಕೆ ಬಂದು ನೆಲಸಿ ಅಲ್ಲಿಯ ಲಿಂಗಾಯತವಿದ್ಯಾಭಿವೃದ್ಧಿ ಸಂಸ್ಥೆಕರ್ನಾಟಕ ವಿದ್ಯಾವರ್ಧಕ ಸಂಘ ಮುಂತಾದ ಸಂಸ್ಥೆಗಳ ಅಭಿವೃದ್ಧಿಗಾಗಿದುಡಿದರುವಿದ್ಯಾಭಿವೃದ್ಧಿ ಸಂಸ್ಥೆ ಹಾಗೂ ಕಿತ್ತೂರು ಚೆನ್ನಮ್ಮ ರಾಣಿ ಇತಿಹಾಸ ಸಂಶೋಧನಮಂಡಲದ ಆಜೀವ ಸದಸ್ಯರಾಗಿ ಸೇವೆ ಸಲ್ಲಿಸಿದರು.


ಕನ್ನಡಮರಾಠಿಸಂಸ್ಕೃತಇಂಗ್ಲಿಷ್ ಭಾಷೆಗಳಲ್ಲಿ ಪಾಂಡಿತ್ಯಗಳಿಸಿದ್ದ ಬುದ್ಧಯ್ಯ ಪುರಾಣಿಕರುಕನ್ನಡ ಹಾಗೂ ಮರಾಠಿ ಭಾಷೆಗಳಲ್ಲಿ ಕೃತಿರಚನೆ ಮಾಡಿದ್ದಾರೆಲಿಂಗ ನಿರೀಕ್ಷಣೆಪಾದೋದಕಸ್ತ್ರೀಶಿಕ್ಷಣ-ಮುಂತಾದ ಇವರ ಲೇಖನಗಳು ವೀರಶೈವ ಸಂಜೀವಿನಿ ಎಂಬ ಮರಾಠಿ ಪುಸ್ತಕ 1913ರಲ್ಲಿಪ್ರಕಟವಾಯಿತುಅಲ್ಲಮಪ್ರಭುವನ್ನು ಕುರಿತ ಇವರ ಗ್ರಂಥ 1936ರಲ್ಲಿ ಪ್ರಕಟವಾಯಿತುಅನಂತರ ಹರೀಶ್ವರಕೃತ ಪ್ರಭುದೇವರ ಪುರಾಣವನ್ನು ಸಂಪಾದಿಸಿ ಶಬ್ದಕೋಶಟೀಕೆಟಿಪ್ಪಣಿಗಳೊಂದಿಗೆ ಪ್ರಕಟಿಸಿದರುಇವರ ಕೆಲವು ಪ್ರೌಢ ಲೇಖನಗಳು ಪುರಾಣಿಕರ ವಿಚಾರವಾಹಿನಿಎಂಬ ಸಂಕಲನ ರೂಪದಲ್ಲಿ ಪ್ರಕಟವಾಗಿವೆ (1953).


ಬುದ್ಧಯ್ಯ ಪುರಾಣಿಕರು 1959 ಮೇ 4 ರಂದು ನಿಧನರಾದರು.



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ