ಮಲ್ಲಿಕಾರ್ಜುನ ಹಿರೇಮಠ
ಮಲ್ಲಿಕಾರ್ಜುನ ಹಿರೇಮಠ
ಮಲ್ಲಿಕಾರ್ಜುನ ಹಿರೇಮಠ ಅವರು ಬರಹಗಾರರಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದಾರೆ.
ಮಲ್ಲಿಕಾರ್ಜುನ ಹಿರೇಮಠ ಅವರು ಕೊಪ್ಪಳ ಜಿಲ್ಲೆಯ ಬಿಸರಹಳ್ಳಿಯಲ್ಲಿ 1946ರ ಜೂನ್ 5 ರಂದು ಜನಿಸಿದರು. 1967ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸ್ನಾತಕೋತ್ತರಪದವಿ ಪಡೆದರು.
ಮಲ್ಲಿಕಾರ್ಜುನ ಹಿರೇಮಠ ಅವರು 1967 ವರ್ಷದಿಂದ ಹುನಗುಂದ ವಿ. ಎಂ. ಎಸ್. ಆರ್. ವಸ್ತ್ರದಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಅದೇಕಾಲೇಜಿನಲ್ಲಿ 2004 ವರ್ಷದಲ್ಲಿ ಪ್ರಾಚಾರ್ಯರಾಗಿ ನಿವೃತ್ತರಾದರು.
ಮಲ್ಲಿಕಾರ್ಜುನ ಹಿರೇಮಠ ಅವರ 'ಆಕ್ವೇರಿಯಂ ಮೀನು' ಮೊದಲ ಕವನ ಸಂಕಲನ 1974ರಲ್ಲಿಪ್ರಕಟವಾಯಿತು.
‘ಅಮೀನಪುರದ ಸಂತೆ, ಜ್ಞಾನೇಶ್ವರನ ನಾಡಿನಲ್ಲಿ (ಪ್ರವಾಸ ಕಥನ), ಅಂತರ್ಗತ (ವಿಮರ್ಶೆ), ಅಭಿಮುಖ (ವಿಮರ್ಶೆ), ಹವನ (ಕಾದಂಬರಿ), ಹಾವಳಿ (ಕಾದಂಬರಿ),
ಮೊಲೆವಾಲು ನಂಜಾಗಿ' (ಕಥಾ ಸಂಕಲನ), ಮೂರುಸಂಜೆ ಮುಂದ ಧಾರವಾಡ (ಲಲಿತಪ್ರಬಂಧಗಳು), ಗಿರಡ್ಡಿ ಗೋವಿಂದರಾಜ : ವ್ಯಕ್ತಿ-ಆಭಿವ್ಯಕ್ತಿ (ವಿಮರ್ಶೆ)’ ಮುಂತಾದವು ಅವರಕೃತಿಗಳಲ್ಲಿ ಸೇರಿವೆ.
ಮಲ್ಲಿಕಾರ್ಜುನ ಹಿರೇಮಠ ಅವರ ಸಾಹಿತ್ಯ ಸೇವೆಗೆ ‘ಕನಾಟಕ ಸಾಹಿತ್ಯ ಅಕಾಡೆಮಿ ಗೌರವಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ, ಮದ್ರಾಸ್ ನಲ್ಲಿ 'ಕನ್ನಡ ಸಾಹಿತ್ಯಕಾರ' ಪ್ರಶಸ್ತಿ, ಹಾವೇರಿಯ ಹಾವನೂರು ಪ್ರತಿಷ್ಠಾನ ಪ್ರಶಸ್ತಿ, ಸಮೀರವಾಡಿ ಪ್ರಶಸ್ತಿ, ಸಂಗಮ ಗೌರವ ಪ್ರಶಸ್ತಿ, ನೀರಾವರಿ ಟ್ರಸ್ಟ್ ಪ್ರಶಸ್ತಿ, ‘ಹವನ' ಕಾದಂಬರಿಗೆ ಕಸಾಪದಿಂದ ಮುದ್ದಣ ದತ್ತಿನಿಧಿ ಪ್ರಶಸ್ತಿ, (ವರ್ಷದ ಅತ್ಯುತ್ತಮ ಗದ್ಯಕೃತಿ), ಪುತಿನ ಪ್ರಶಸ್ತಿ, ಮುಂತಾದ ಅನೇಕ ಪ್ರಶಸ್ತಿಗಳು ಲಭಿಸಿವೆ.
'ಲಕ್ಕವ್ವನ ಮಂದಿ' ಮತ್ತು 'ಅಮೀನಪುರದ ಸಂತೆ' ಕಥೆಗಳು ಆಕಾಶವಾಣಿ ಧಾರವಾಡ ಹಾಗೂದೂರದರ್ಶನ (ಚಂದನ) ದಲ್ಲಿ ನಾಟಕಗಳಾಗಿ ಪ್ರಸಾರಗೊಂಡಿವೆ.
ಮಲ್ಲಿಕಾರ್ಜುನ ಹಿರೇಮಠ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
(ನಮ್ಮ ಕನ್ನಡ ಸಂಪದ Kannada Sampada ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
ಕಾಮೆಂಟ್‌ಗಳು