ವಿಕಾಸ್ ನೇಗಿಲೋಣಿ
ವಿಕಾಸ್ ನೇಗಿಲೋಣಿ
ವಿಕಾಸ್ ನೇಗಿಲೋಣಿ ಅವರು ಪತ್ರಕರ್ತರಾಗಿ, ಕಥೆಗಾರರಾಗಿ, ಧಾರಾವಾಹಿಗಳಿಗೆ ಸಂಭಾಷಣೆ ಬರೆದವರಾಗಿ, ಚಿತ್ರಕಥೆಗಾರರಾಗಿ, ಗೀತ ರಚನೆಕಾರರಾಗಿ ಹೀಗೆ ಬಹುಮುಖಿಯಾಗಿ ಹೆಸರು.
ಮೇ 1, ವಿಕಾಸ್ ನೇಗಿಲೋಣಿ ಅವರ ಜನ್ಮದಿನ. ಇವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ ನೇಗಿಲೋಣಿಯಲ್ಲಿ. ಊರಲ್ಲೇ ಪ್ರಾಥಮಿಕ ಶಿಕ್ಷಣ ಪಡೆದು ಉಡುಪಿಯಲ್ಲಿ ಹೈಸ್ಕೂಲ್ ಶಿಕ್ಷಣ ಪೂರೈಸಿದರು. ಮುಂದೆ ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಇವರ ವ್ಯಾಸಂಗ ನಡೆಯಿತು.
ವಿಕಾಸ್ ನೇಗಿಲೋಣಿ ಅವರ ಪ್ರಕಟಿತ ಕೃತಿಗಳಲ್ಲಿ 'ಬ್ರಹ್ಮಚಾರಿಯ ಹೆಂಡತಿ ಮತ್ತು ಇತರರು', 'ಮಳೆಗಾಲ ಬಂದು ಬಾಗಿಲು ತಟ್ಟಿತು', 'ರುಕುಮಣಿ ರುಕುಮಣಿ' ಕಥಾ ಸಂಕಲನಗಳು; 'ರಥಬೀದಿ ಎಕ್ಸ್ಪ್ರೆಸ್' adolescent ಆತ್ಮಚರಿತ್ರೆ; 'ಬೆಸ್ಟ್ ಆಫ್ ಜೋಗಿ' ಆಯ್ಕೆ ಮತ್ತು ಸಂಪಾದನೆ (ರಾಜೇಶ್ ಶೆಟ್ಟಿ ಅವರೊಂದಿಗೆ) ಮುಂತಾದವು ಸೇರಿವೆ. ಇವರ 'ವೇಷ' ನಾಟಕ ರಂಗಪ್ರಯೋಗಗೊಂಡು ಅನೇಕ ಪ್ರದರ್ಶನಗಳನ್ನು ಕಂಡಿದೆ.
ಬಹುಮುಖಿ ಪ್ರತಿಭಾನ್ವಿತರಾದ ವಿಕಾಸ್ ನೇಗಿಲೋಣಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Vikas Negiloni 🌷🌷🌷

ಕಾಮೆಂಟ್‌ಗಳು