ಪುಷ್ಪಾ ನಾಗತಿಹಳ್ಳಿ
ಪುಷ್ಪಾ ನಾಗತಿಹಳ್ಳಿ
ಫೇಸ್ಬುಕ್ನಲ್ಲಿ ಆತ್ಮೀಯರಾಗಿರುವ ಪುಷ್ಪಾ ನಾಗತಿಹಳ್ಳಿ ಅವರು ಹಲವು ರೀತಿಯ ಬರಹಗಳಿಂದ ಗಮನ ಸೆಳೆದವರು.
ಸೆಪ್ಟೆಂಬರ್ 17 ಪುಷ್ಪಾ ನಾಗತಿಹಳ್ಳಿ ಅವರ ಜನ್ಮದಿನ. ಮಂಡ್ಯ ಜಿಲ್ಲೆಯ ನಾಗತಿಹಳ್ಳಿ ಇವರ ಹುಟ್ಟೂರು. ತಂದೆ ತಿಮ್ಮಶೆಟ್ಟಿ ಗೌಡ. ತಾಯಿ ಪಾರ್ವತಮ್ಮ. ಈ ದಂಪತಿಗಳ ಆರು ಜನ ಮಕ್ಕಳಲ್ಲಿ ಮಹಾನ್ ಪ್ರತಿಭಾವಂತ ನಾಗತಿಹಳ್ಳಿ ಚಂದ್ರಶೇಖರ ಅವರು ಪುಷ್ಪಾ ನಾಗತಿಹಳ್ಳಿ ಅವರ ಅಕ್ಕರೆಯ ಕಿರಿಯ ಸಹೋದರ.
ಪುಷ್ಪಾ ಅವರು ತಮ್ಮ 'ಚಂದಿರನೇತಕೆ ಓಡುವನಮ್ಮ' ಕೃತಿಯಲ್ಲಿ ಬಾಲ್ಯದಿಂದ ಮೊದಲುಗೊಂಡಂತೆ ತಮ್ಮ ಬದುಕಿನ ಕಥಾನಕವನ್ನು ತೆರೆದಿಟ್ಟಿದ್ದಾರೆ. ಒಟ್ಟು ಮೂರು ಕೃತಿಗಳನ್ನು ಪ್ರಕಟಿಸಿರುವ ಪುಷ್ಪಾ ಅವರ ಕೃತಿಗಳಲ್ಲಿ 'ಕಾದಿರುವಳು' ಕಾದಂಬರಿ. ಇದು ಗ್ರಾಮಬದುಕಿನ ಹಿನ್ನೆಲೆಯಲ್ಲಿ ಹೆಣ್ಣಿನ ಅಂತಃಶಕ್ತಿಯನ್ನು ಚಿತ್ರಿಸಿದೆ.
ಕಥೆ, ಕವನ, ವಿಶ್ವದ ಹಲವೆಡೆಗೆ ಪ್ರವಾಸ, ಕೃಷಿ, ಚಿಂತನೆ, ಆತ್ಮಕಥನ ಹೀಗೆ ಹಲವು ರೀತಿಯಲ್ಲಿ ಪುಷ್ಪಾ ನಾಗತಿಹಳ್ಳಿ ಅವರ ಬರಹಗಳು ಹಲವೆಡೆಗಳಲ್ಲಿ ಅಭಿವ್ಯಕ್ತಿಗೊಂಡಿವೆ.
ಹಿರಿಯರಾದ ಪುಷ್ಪಾ ನಾಗತಿಹಳ್ಳಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Pushpa Nagathihalli Madam 🌷🙏🌷
ಕಾಮೆಂಟ್ಗಳು