ವರಗಳ ಕರುಣಿಸು ತಾಯೇ
ನಾ ಚಿಕ್ಕವನಾಗಿದ್ದಾಗ ನನ್ನಕ್ಕ ಇದನ್ನ ಹಾಡ್ತಿದ್ಲು. ಅದರ ಸಾಹಿತ್ಯ ಹುಡುಕಾಡಿದೆ. ಸಿಗಲಿಲ್ಲ. ಅಚ್ಚರಿ ಅಂದ್ರೆ ಎಷ್ಟು ಗೊತ್ತಿದೆಯೊ ಬರೆಯೋಣ ಅಂತ ಹೋದ್ರೆ, ಪೂರ್ತಿ ಪದ್ಯ ಮನದೊಳಗೆ ಒಂದಿನಿತೂ ವೆತ್ಯಾಸವಿಲ್ಲದೆ ದಾಖಲಾಗಿತ್ತು! ಬಾಲ್ಯದ ಮುಗ್ದ ನೆನಪನ್ನು ಯಾರೂ ಅಳಿಸಲು ಸಾಧ್ಯ ಇಲ್ಲ 😇
ವರಗಳ ಕರುಣಿಸು ತಾಯೇ,
ಶಾರದೆಯೇ, ಶಾರದೆಯೇ.
ನಿರುತವು ನಿನ್ನ ಸ್ಮರಿಸುತಲಿಹೆವು
ಕರುಣೆಯ ತೋರು ನಮಿಪೆವು ನಿನಗೆ
ವರಗಳ ಕರುಣಿಸು ತಾಯೇ,
ಶಾರದೆಯೇ, ಶಾರದೆಯೇ.
ಬಾಲೆಯರೊಳು ನೀ ದಯೆಯನು ತೋರಿಸು,
ಪಾಲಿಸು ನಮ್ಮನು ಅಜರಾಣಿ,
ಶಾಲೆಯೊಳ್ ಕಲಿಯುವ ವಿದ್ಯೆಯು ಸುಲಭದಿ
ಎಮ್ಮಯ ಮತಿಯೊಳು ನೆಲೆಸುವ ತೆರದಿ
ವರಗಳ ಕರುಣಿಸು ತಾಯೇ,
ಶಾರದೆಯೇ, ಶಾರದೆಯೇ.
ಕಾಮೆಂಟ್‌ಗಳು