ಬೆಂಗಳೂರು ವಿ ಪ್ರವೀಣ್
ಬೆಂಗಳೂರು ವಿ ಪ್ರವೀಣ್
ವಿದ್ವಾನ್ ಬೆಂಗಳೂರು ವಿ ಪ್ರವೀಣ್ ಅವರು ತಂಜಾವೂರು ಶೈಲಿಯ ಮೃದಂಗ ವಾದನದ ಪ್ರಸಿದ್ಧ ಸಂಗೀತ ಕಲಾವಿದರಾಗಿದ್ದಾರೆ.
ವಿ ಪ್ರವೀಣ್ ಅವರು 1962ರ ಏಪ್ರಿಲ್ 17 ರಂದು ಜನಿಸಿದರು. ಮಹಾನ್ ಸಂಗೀತ ಕಲಾವಿದರಾದ ವಿದ್ವಾನ್ ಎಂ.ಎಲ್. ವೀರಭದ್ರಯ್ಯ ಅವರ ಸುಪುತ್ರರಾದ ಇವರು ತಮ್ಮ ತಂದೆಯವರಲ್ಲಿನ ಶಿಷ್ಯತ್ವವಲ್ಲದೆ, ಮಹಾನ್ ಮೃದಂಗ ವಿದ್ವಾಂಸರಾದ ಪಾಲ್ಘಾಟ್ ಮಣಿ ಅಯ್ಯರ್ ಅವರಿಂದ ಹೆಚ್ಚಿನ ತರಬೇತಿಯನ್ನು ಗಳಿಸಿದರು.
ಪ್ರವೀಣ್ ತಮ್ಮ 7ನೇ ವಯಸ್ಸಿನಲ್ಲಿಯೇ ಮಹಾನ್ ಸಂಗೀತ ಗುರು ಚೆಂಬೈ ವೈದ್ಯನಾಥ ಭಾಗವತರ್ ಅವರೊಂದಿಗೆ ತಮ್ಮ ಮೊದಲ ಸಂಗೀತ ಕಚೇರಿಯನ್ನು ನೀಡಿದರು. ಮುಂದೆ ಅವರು ಕರ್ನಾಟಕ ಸಂಗೀತದ ದಿಗ್ಗಜರಾದ ಸೆಮ್ಮಂಗುಡಿ ಶ್ರೀನಿವಾಸ್ ಅಯ್ಯರ್, ಟಿ.ಆರ್. ಮಹಾಲಿಂಗಂ, ವೀಣಾ ಬಾಲಚಂದರ್, ಮಧುರೈ ಸೋಮಸುಂದರಂ, ಎಂ.ಎಸ್. ಸುಬ್ಬಲಕ್ಷ್ಮಿ, ಎನ್.ರಮಣಿ, ಮ್ಯಾಂಡೋಲಿನ್ ಯು. ಶ್ರೀನಿವಾಸ್, ಎನ್. ರವಿಕಿರಣ್ ಸೇರಿದಂತೆ ಎಲ್ಲ ಶ್ರೇಷ್ಠ ಕಲಾವಿದರೊಂದಿಗೆ ಭಾರತದಾದ್ಯಂತ ಮತ್ತು ವಿದೇಶಗಳಲ್ಲಿನ
ಎಲ್ಲ ಪ್ರಮುಖ ಕಲಾ ಉತ್ಸವಗಳಲ್ಲಿ ಮತ್ತು ವೇದಿಕೆಗಳಲ್ಲಿ ಪ್ರದರ್ಶನವನ್ನು ನೀಡುತ್ತ ಬಂದಿದ್ದಾರೆ.
ಪ್ರವೀಣ್ ಅವರಿಗೆ ಚೆನ್ನೈನ ಸಂಗೀತ ಅಕಾಡೆಮಿಯಿಂದ "ಅತ್ಯುತ್ತಮ ಮೃದಂಗ ವಾದಕ" ಪ್ರಶಸ್ತಿ; ಉಡುಪಿ ಶ್ರೀ ಕೃಷ್ಣ ಮಠದಿಂದ "ಮೃದಂಗ ಚಕ್ರವರ್ತಿ" ಮತ್ತು "ಆಸ್ಥಾನ ವಿದ್ವಾನ್" ಪ್ರಶಸ್ತಿ; ಅಖಿಲ ಭಾರತ ತೆಲುಗು ಸಂಘದಿಂದ "ಮೃದಂಗ ಕಲಾ ರತ್ನ" ಪ್ರಶಸ್ತಿ; ಕರ್ನಾಟಕ ಗಾನ ಕಲಾ ಪರಿಷತ್ತಿನಿಂದ "ಗಾನ ಕಲಾಶ್ರೀ" ಗೌರವ; ಪರ್ಕ್ಯುಸಿವ್ ಕಲಾ ಕೇಂದ್ರದಿಂದ "ಲಯ ಕಲಾ ಪ್ರತಿಭಾ ಮಣಿ" ಗೌರವ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಬೆಂಗಳೂರು ವಿ ಪ್ರವೀಣ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday to Percussionist Vidwan Bangalore V Praveen 🌷🙏🌷

ಕಾಮೆಂಟ್‌ಗಳು