ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಾಸುದೇವನ್


 ಸಿ.ಎಸ್ವಾಸುದೇವನ್


ಪ್ರೊ. ಸಿ.ಎಸ್. ವಾಸುದೇವನ್ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಡೀನ್ ಆಗಿ, ಪ್ರಾಧ್ಯಾಪಕರಾಗಿ, ಅಮೂಲ್ಯ ಬರಹಗಾರರಾಗಿ ಮತ್ತು ವಿದ್ವಾಂಸರಾಗಿ ಹೆಸರಾಗಿದ್ದವರು.  ಇಂದು ಅವರ ಸಂಸ್ಮರಣೆ ದಿನ. 

ವಾಸುದೇವನ್ ಅವರು 1963ರ ಮಾರ್ಚ್ 2ರಂದು ಜನಿಸಿದರು. ಬಿ.ಎಸ್‌ಸಿ, ಎಂ.ಎ, ಪಿಎಚ್.ಡಿ, ಪಿ.ಜಿ. ಡಿಪ್ಲಮೊ ಇನ್ ಆರ್ಕಿಯಾಲಜಿ ಮುಂತಾದವು ಅವರ ವಿದ್ಯಾ ಸಾಧನೆಗಳಾಗಿದ್ದವು.

ಡಾ. ವಾಸುದೇವನ್ ಅವರು ಪುರಾತತ್ವ, ಪ್ರಾಗಿತಿಹಾಸ-ಪುರಾತತ್ವ, ವಾಸ್ತುಶಿಲ್ಪ, ಕಲೆ ಮತ್ತು ಮೂರ್ತಿಶಿಲ್ಪ, ಇತಿಹಾಸ, ಸಾಂಸ್ಕೃತಿಕ ಇತಿಹಾಸ ಮುಂತಾದ ಶಾಸ್ತ್ರಗಳಲ್ಲಿ ತಜ್ಞರಾಗಿದ್ದರು.  ಈ ವಿಷಯಗಳ ಜೊತೆಗೆ ಮಧ್ಯಯುಗ ಕಾಲದ ವಿಜಯನಗರ ಇತಿಹಾಸದ ಕುರಿತಾಗಿ ಅವರು ವಿಶೇಷ ಅಧ್ಯಯನ ನಡೆಸಿದ್ದರು.

ವಾಸುದೇವನ್ ಅವರ ಪ್ರಕಟಿತ ಕೃತಿಗಳಲ್ಲಿ ಈ ಮಹತ್ಕೃತಿಗಳು ಸೇರಿವೆ:

1. ಕರ್ನಾಟಕ ದೇವಾಲಯ ಕೋಶ – ಹಾವೇರಿ ಜಿಲ್ಲೆ
2. The Kannada Inscriptions of Andhra Pradesh
3.  ಹಂಪಿ ಪರಿಸರದ ಕೆರೆಗಳು
4. ಕರ್ನಾಟಕ ದೇವಾಲಯ ಕೋಶ – ಗದಗ ಜಿಲ್ಲೆ
5. ಕರ್ನಾಟಕದ ಪ್ರಮುಖ ನದಿಗಳು
6. ಮುಕ್ಕೊಡೆ – ಜೈನ ಸಂಸ್ಕೃತಿ ಕುರಿತ ಲೇಖನಗಳು, (ಸಂಪಾದನೆ)
7. ಕರ್ನಾಟಕ ದೇವಾಲಯ ಕೋಶ – ರಾಯಚೂರು ಜಿಲ್ಲೆ
8. Temples of Andhra Pradesh

ಸಂಪಾದಿತ ಕೃತಿಗಳು
1. Sri Puspanjali, (Recent Researches in Prehistory, Protohistory, Art, Architecture, Numismatics, Iconography and Epigraphy) 
2. ಹಂಪಿ ವಿಶ್ವ ಪರಂಪರಾ ಪ್ರದೇಶ – ಪ್ರವಾಸಿ ಕೈಪಿಡಿ
3. Report on the Excavations at Hampi – 1991-2010 in Two Volumes
4. Hampi – World Heritage Area (English)
5. Hampi – Zone Du Patrimoine Mondial (French)

ವಾಸುದೇವನ್ ಅವರ ನೂರಾರು ಲೇಖನಗಳು ವಿಶ್ವ ಪ್ರಸಿದ್ಧ ಸಂಕಲನಗಳಲ್ಲಿ ಮೂಡಿದ್ದವು.

ಪ್ರೊ.ಸಿ.ಎಸ್. ವಾಸುದೇವನ್ ಅವರು 2022ರ ನವೆಂಬರ್ 26ರಂದು ರಸ್ತೆ ಅಪಘಾತದಲ್ಲಿ ನಿಧನರಾದರು.


Dr. C. S. Vasudevan 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ